ಕೂಡ್ಲಿಗಿ:ತಾಲೂಕ ಆಡಳಿತ ಸೌಧಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ.
ಕೂಡ್ಲಿಗಿ ನವೆಂಬರ್.21

ತಾಲೂಕಾ ಆಡಳಿತ ಸೌಧಕ್ಕೆ, ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿ ತಾಲೂಕು ಕಚೇರಿಯಲ್ಲಿ ವಿವಿಧ ವಿಭಾಗಗಳ ಅಧಿಕಾರಿ ಸಿಬಂದಿಗಳನ್ನು ಕಚೇರಿ ಕೆಲಸದ ಬಗ್ಗೆ ಪ್ರಶ್ನೆ ಮಾಡಿ ಸರಿಯಾದ ರೀತಿಯಲ್ಲಿ ಜನರನ್ನು ಹಾಗೂ ರೈತರ ಸಮಸ್ಯೆಗಳನ್ನು ಅರ್ಥ ಮಾಡಿ ಕೊಂಡು ಪದೇ ಪದೆ ಓಡಾಡಸ ಬೇಡಿ ಕೆಲಸವನ್ನು ಬೇಗನೆ ಮಾಡಿ ಕಳಿಸಿ ತೊಂದರೆಗಳು ಇದ್ದರೆ ಸೂಕ್ತವಾದ ಸಲಹೆ ಹೇಳಿ ಕಳಿಸಿ ಎಂದು ತಿಳಿಸಿದರು.

ಕಂದಾಯ ಇಲಾಖೆಯ ಅಭಿಲೇಖಾಲಾಯದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು ಹಾಗೂ ಆಫೀಸ್ ನ್ನು ಪರಿಶೀಲಿಸಿದರು. ಅವರು ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳಿಗೆ ತೆರಳಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಕಚೇರಿಗೆ ಬಂದಿದ್ದ, ಸಾರ್ವಜನಿಕರ ಅಹವಾಲುಗಳನ್ನು ಕುಂದು ಕೊರತೆಗಳನ್ನು ಆಲಿಸಿದರು.ಈ ಸಂದರ್ಭದಲ್ಲಿ ಕೂಡ್ಲಿಗಿಯ ಆಡಳಿತ ಸೌಧಕ್ಕೆ ಆಗಮಿಸಿದಂತಹ ಸಚಿವರ ಭೇಟಿಯನ್ನು ತಿಳಿದ ತಕ್ಷಣವೇ ವಿಜಯನಗರ ಜಿಲ್ಲಾಧಿಕಾರಿಗಳಾದ ಎಸ್. ದಿವಾಕರ್ ರವರು ಬಂದಿದ್ದು ಮಾನ್ಯ ಸಚಿವರು ಇಲಾಖೆಯಲ್ಲಿ ಜನಗಳಿಗೆ ತೊಂದರೆಗಳು ಉoಟಾಗದಂತೆ ಸಮಸ್ಯೆಗಳು ವೀಕ್ಷಿಸಿ ಹಲವಾರು ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಯಯಾದ ಎಸ್ ದಿವಾಕರ್ ಇವರಿಗೆ ತಹಶೀಲ್ದಾರ್ರಾದ ಎಂ.ರೇಣುಕಾ ಇವರ ಸಮ್ಮುಖದಲ್ಲಿ ತಿಳಿಸಿ ಸರ್ಕಾರದ ನಿಯಮಗಳು ಸರಿಯಾಗಿ ಅರ್ಥ ಮಾಡಿಸಿ ಜನರಿಗೆ ಉತ್ತಮವಾದ ಕೆಲಸ ಮಾಡುವಂತೆ ನೀವು ಅವರಿಗೆ ತಿಳಿಸಿ ಎಂದು ಹೇಳಿದರು.

ಈ ಸಂರ್ಭದಲ್ಲಿ ವಿವಿಧ ಅಧಿಕಾರಿಗಳು ಇದ್ದರು. ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯರಾದ ಕಾವಲಿ ಶಿವಪ್ಪ ನಾಯಕ, ಕೆ ಈಶಪ್ಪ, ಸಿರಿಬಿ ಮಂಜುನಾಥ್,ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಗುರುಸಿದ್ದನಗೌಡ್ರು,ಸಿ. ಉಮೇಶ್,ಜಿಂಕಲ್ ನಾಗಮಣಿ,ಗೌಡ್ರು ಮಲ್ಲಿಕಾರ್ಜುನ,ಕೊಗಳಿ ಮಂಜಣ್ಣ, ಡಿ. ಹೆಚ್. ದುರುಗೇಶ್, ಶಾಮಯಾನ ಚಂದ್ರಪ್ಪ,ಹೆಗ್ಡಳ್ ನಾಗರಾಜ್ ವಿವಿಧ ಜನಪ್ರತಿನಿಧಿಗಳು,ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ ಕೂಡ್ಲಿಗಿ