“ಪಟ್ಟಣ ಪಂಚಾಯಿತಿ ಮನೆ ಬಾಗಿಲಿಗೆ” ಕಾರ್ಯಕ್ರಮ ಯಶಸ್ವಿಯಾಗಿ 3.ನೇ ಹಂತವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಇವರಿಂದ ನಮೂನೆ-3 ವಿತರಣೆ.
ಕೊಟ್ಟೂರು ನವೆಂಬರ್.21

ದಿನಾಂಕ: 21.11.2023 ರಂದು ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದ ದಂತೆ “ಪಟ್ಟಣ ಪಂಚಾಯಿತಿ ಮನೆ ಬಾಗಿಲಿಗೆ” ಕಾರ್ಯಕ್ರಮದಡಿ 3.ನೇ ಹಂತವಾಗಿ ನಮೂನೆ-3 ಯನ್ನು ಮನೆ ಬಾಗಿಲಿಗೆ ವಿತರಿಸುವ ಅಭಿಯಾನ ಕಾರ್ಯಕ್ರಮದಡಿ ಕೊಟ್ಟೂರು ಪಟ್ಟಣದ ರಾಜೀವ್ ನಗರ ಆಶ್ರಯದಲ್ಲಿ ಶ್ರೀ ಬಿ ವಿರೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ನಗರಾಭಿವೃದ್ಧಿ ಕೋಶ ವಿಜಯನಗರ ಇವರು ಹಾಗೂ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಒಟ್ಟು 25 ಆಸ್ತಿ ಮಾಲೀಕರಿಗೆ ನಮೂನೆ-3 ಯನ್ನು ಮನೆ ಬಾಗಿಲಿಗೆ ವಿತರಿಸಲಾಗಿರುತ್ತದೆ. ಇಲ್ಲಿಯವರೆಗೂ ಒಟ್ಟು 125 ನಮೂನೆ-3 ಗಳನ್ನು ಮನೆ ಬಾಗಿಲಿಗೆ ವಿತರಣೆ ಮಾಡಲಾಗಿರುತ್ತದೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು