ಕಾಂತರಾಜು ಆಯೋಗದ ವರದಿ ಮತ್ತು ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಿ ಇಲ್ಲದಿದ್ದರೆ ಖುರ್ಚಿ ಖಾಲಿ – ಸಾಮಾಜಿಕ ನ್ಯಾಯಕ್ಕಾಗಿ ಬಿ.ಎಸ್.ಪಿ ಆಂದೋಲನ.
ಬಾಗಲಕೋಟ ನವೆಂಬರ್.21

ಈ ಎರಡು ವರದಿ ಜಾರಿಗೊಳಿಸಲು ಒತ್ತಾಯಿಸಿ ಇಂದು ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಧರಣಿ ನಡೆಸಿ ಮನವಿ ಪತ್ರವನ್ನು ಬಾಗಲಕೋಟ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು. ಈ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಪರಶುರಾಮ ಶಿನ್ನಾಳಕರ ಸ್ವೀಕರಿಸಿದರು.ಈ ಸಂಧರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವೈ ಸಿ ಕಾಂಬಳೆ, ಜಿಲ್ಲಾ ಸಂಯೋಜಕರಾದ ಗುರುಶಾಂತಪ್ಪ ಮದಿನಕರ, ಜಿಲ್ಲಾ ಅಧ್ಯಕ್ಷರಾದ ಯಲ್ಲಪ್ಪ ಶ ಸನಕ್ಯಾನವರ, ಶೀಲವಂತ ವಿಜಾಪುರ, ರಾಕೇಶ ಸಾನಕ್ಯಾನವರ, ರಾಜು ಯಾದವಾಡ, ದಿಲೀಪ ವಿಜಾಪುರ, ದುರಗಪ್ಪ ಭಾರತಗಿ, ಶೇಖರಪ್ಪ ಶೈರಾವತಿ, ಗೌತಮ ಕಾಂಬಳೆ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.