ಮುಂದೊಂದು ದಿನ ಅಂಬೇಡ್ಕರ್ ಕಟ್ಟಿರುವ ಆರ್.ಪಿ.ಐ. ಪಕ್ಷ ಈ ದೇಶ ಆಳುತ್ತದೆ – ರಾಜ್ಯಾಧ್ಯಕ್ಷ ಆರ್.ಪಿ.ಐ ಸತೀಶ್ ಭವಿಷ್ಯ.

ಹೊಸಪೇಟೆ ನವೆಂಬರ್.21

ನಗರದ ಐಬಿಯಲ್ಲಿ ಆರ್ ಪಿ ಐ ಪಕ್ಷದ ನೂತನ ಜಿಲ್ಲಾ ಸಮಿತಿಯ ಸದಸ್ಯರ ಆಯ್ಕೆ ಪಕ್ರಿಯ ಕಾರ್ಯಕ್ರಮ ಭಾನುವಾರ ಹಮ್ಮಿಕೊಂಡಿದ್ದರು. ಸದಸ್ಯರನ್ನು ರಾಜ್ಯ ಪ್ರದಾನ ಕಾರ್ಯದರ್ಶಿ ಜಿಸಿ ವೆಂಕಟರಮಣಪ್ಪ ಸೂಚಿಸಿದರು. ಸದಸ್ಯರನ್ನು ಅನುಮೋದಿಸಿ ದೇಶದ ಅಭಿವೃದ್ಧಿಗಾಗಿ ಅಂಬೇಡ್ಕರ್ ರವರು ಕಟ್ಟಿದ ಆರ್ ಪಿ ಐ ಪಕ್ಷ ಮುಂದೊಂದು ದಿನ ಈ ದೇಶ ಆಳುತ್ತದೆ ಎಂದು ಪಕ್ಷದ ರಾಜ್ಯಧ್ಯಕ್ಷರಾದ ಆರ್.ಪಿ.ಐ ಸತೀಶ್ ಭವಿಷ್ಯ ನುಡಿದರು.ಡಾ. ಬಿ.ಆರ್.ಅಂಬೇಡ್ಕರ್ ರವರು ಯಾವುದೇ ಜಾತಿ ಧರ್ಮಕ್ಕೆ ಆದ್ಯತೆ ಕೊಡದೇ ಪ್ರತಿಯೊಬ್ಬರ ಕಟ್ಟಕಡೆಯ ವ್ಯಕಿಯ ಸಮಾನತೆಗಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಆರ್.ಪಿ.ಐ ಪಕ್ಷ ಕಟ್ಟಿದರು. ಕೆಲವರು ಪಕ್ಷದೊಳಗಿದ್ದು ಕೊಂಡು ಚುನಾವಣೆ ಸಂದರ್ಭಗಳಲ್ಲಿ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿ ಕೊಂಡು ಚುನಾವಣೆ ಮಾಡುತ್ತಾರೆ ಹಾಗಾಗಿ ನಮ್ಮ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ ಮುಂದೆ ಈ ರೀತಿ ಆಗಬಾರದು. ಆರ್.ಪಿ.ಐ ಪಕ್ಷ ಹೊಸ ಪಕ್ಷವಲ್ಲ ಹಳೆಯ ಪಕ್ಷ . ಅಂಬೇಡ್ಕರ್ ಅವರು ಹಲವಾರು ಸಂಘಟನೆಗಳನ್ನು ಸ್ಥಾಪಿಸಿದ್ದಾರೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ, ಬುದ್ಧಿಸ್ಟ್ ಸೊಸೈಟಿಯನ್ನು ಸ್ಥಾಪಿಸಿದ್ದಾರೆ, 1936ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಯನ್ನು ಕಟ್ಟುತ್ತಾರೆ, ಬಾಂಬೆ ನಲ್ಲಿ ಇದರಿಂದ 17 ಜನ ಎಂಎಲ್ಎಗೆ ಸ್ಪರ್ಧಿಸಿ ಅದರಲ್ಲಿ 14 ಜನ ಗೆಲುವನ್ನು ಸಾದಿಸಿದ್ದರು. ಮುಂದಿನ ದಿನಗಳಲ್ಲಿ ಅದನ್ನು ಶೆಡ್ಯೂಲ್ ಕ್ಯಾಸ್ಟ್ ಫೆಡರೇಶನ್ ಆಫ್ ಇಂಡಿಯಾ ಎಂದು ಮರುಣಾಮಕರಣ ಮಾಡುತ್ತಾರೆ, ಅದರ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ 1952ರಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಸೇರಿ ಬಾಬಾ ಸಾಹೇಬರವರನ್ನು ಚುನಾವಣೆಯಲ್ಲಿ ಸೋಲಿಸುತ್ತಾರೆ. ನಂತರ ಆರ್.ಪಿ.ಐ ಪಕ್ಷವಾಗಿ ಹೊರ ಹೊಮ್ಮಿತು ಇಂತಹ ಪರಿಸ್ಥಿತಿಯಲ್ಲಿ ನಾವು ಅವರು ಕಟ್ಟಿದ ಪಕ್ಷವನ್ನು ಬೆಳೆಸಬೇಕಾಗಿದೆ ಎಂದರು. ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿಸಿ ವೆಂಕಟರಮಣಪ್ಪ ಮಾತನಾ ಮಾತನಾಡಿ ಅಂಬೇಡ್ಕರ್ ರವರು ಎರಡು ವರ್ಷ 11 ತಿಂಗಳು 28 ದಿವಸಗಳ ಸುದೀರ್ಘಕಾಲ ಸಂವಿಧಾನ ಬರೆದು ಸಮರ್ಪಣೆ ಮಾಡುತ್ತಾರೆ. ಆ ಸಂಧರ್ಭದಲ್ಲಿ ಅಂಬೇಡ್ಕರ್ ರವರಿಗೆ ಹತ್ತು ಸಾವಿರ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ಬಾಬಾ ಸಾಹೇಬರು ಯೋಚನೆ ಮಾಡಿ ಇಷ್ಟು ನ್ಯಾಯ ಸಮ್ಮತವಾದ, ಸಮಾನತೆಯಿಂದ ಕೂಡಿದ ಸಂವಿಧಾನವನ್ನು ಕೊಟ್ಟಿದ್ದೇನೆ, ನನಗೆ 10,000 ಪ್ರಶ್ನೆಗಳನ್ನು ಕೇಳಿದ್ದಾರೆ ಇನ್ನು ಸಾಮಾನ್ಯರ, ತುಳಿತ ಕ್ಕೊಳಗಾದವರ ಗತಿಏನು? ಇವರಿಂದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ, ರಾಜಕೀಯ ನ್ಯಾಯ ಸಿಗುವುದರಲ್ಲಿ ನನಗೆ ಸಂಶಯವಿದೆ ಎಂದು ಇಡೀ ಭಾರತ ದೇಶದ ಮೂಲೆ ಮೂಲೆಗೆ ಸುತ್ತಲೂ ಶುರು ಮಾಡುತ್ತಾರೆ. ಆ ಸಂದರ್ಭದಲ್ಲಿ ಸಮಾಜದ ಅಸಮಾನತೆಯನ್ನು ಕಂಡು ಅದನ್ನೆಲ್ಲವನ್ನು ಪರಿಗಣಿಸಿ. ಕಟ್ಟಕಡೆಯ ವ್ಯಕ್ತಿಗೆ ರಾಜಕೀಯ ನ್ಯಾಯಕ್ಕಾಗಿ 1956ರಲ್ಲಿ ಲೇಬರ್ ಪಾರ್ಟಿ ಕಟ್ಟುತ್ತಾರೆ ಮುಂದಿನ ದಿನಗಳಲ್ಲಿ ರಿಪಬ್ಲಿಕನ್ ಪಾರ್ಟಿಯಾಗಿ ಮುಂದುವರೆದು ಈ ದೇಶದ ಅತಿ ದೊಡ್ಡ ವಿರೋಧ ಪಕ್ಷವಾಗಿ ಹೊರ ಹೊಮ್ಮಿತ್ತು. ಆರ್‌ಪಿಐ ಪಕ್ಷವು ಎಂಎಲ್ಎ, ಎಂಪಿ ಗಳನ್ನು ಮತ್ತು ಹಲವಾರು ನಾಯಕರುಗಳನ್ನು ಹುಟ್ಟು ಹಾಕಿದೆ. ಎಸ್ಸಿ, ಎಸ್ಟಿ, ಒಬಿಸಿ ಗಳಾದ ಭಾರತದ ಮೂಲ ನಿವಾಸಿಗಳು ಅಂಬೇಡ್ಕರ್ ಅವರು ಕಟ್ಟಿದ ಪಕ್ಷವನ್ನು ಬೆಂಬಲಿಸಿದರೆ ದೇಶದ ಅಧಿಕಾರವನ್ನು ಹಿಡಿಯುವುದು ದೊಡ್ಡ ವಿಷಯವೇನಲ್ಲ ಈ ದೇಶಕ್ಕೆ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ರಾಜಕೀಯ ಸ್ಥಾನಮಾನಗಳು ಸಿಗಬೇಕಾದರೆ ಅದು ಆರ್‌ಪಿಐ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.ನೂತನ ಜಿಲ್ಲೆಯ ಆರ್‌ಪಿಐ ಪಕ್ಷದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಜಿಲ್ಲಾ ಗೌರವಧ್ಯಕ್ಷರು : ಎಲ್ ನಾಗರಾಜ, ಜಿಲ್ಲಾಧ್ಯಕ್ಷರು : ಮಾಬುಸುಬಾನಿ, ಜಿಲ್ಲಾ ಕಾರ್ಯಾಧ್ಯಕ್ಷರು : ಮಾಂತೇಶ್ ಡಿ, ಜಿಲ್ಲಾ ಪ್ರದಾನ ಕಾರ್ಯಾದರ್ಶಿ : ಅಮ್ಮನಕೇರಿ ತಿಪ್ಪೆಸ್ವಾಮಿ, ಜಿಲ್ಲಾ ಉಪಾಧ್ಯಕ್ಷರು : ಮಲಪನಗುಡಿ ಕೋಟೇಶ್. ಜಿಲ್ಲಾ ಖಜಾಂಚಿ : ಚಿಲಕನಟ್ಟಿ ಮಾರುತಿ, ಜಿಲ್ಲಾ ಸಂಘಟನಾ ಕಾರ್ಯಾದರ್ಶಿ : ಚಂದ್ರಶೇಖರ್ಜಿಲ್ಲಾ ಮಾಧ್ಯಮ ವಕ್ತಾರರು : ಎಲ್. ಮಂಜುನಾಥಈ ಸಂದರ್ಭದಲ್ಲಿ ಎಲ್ ವೆಂಕಟೇಶ್ (ಪೈಲ್ವಾನ್ ), ಬಾರಿ ಗಿಡದ ಕೊಟ್ರೆಶ್, ಲಕ್ಕಿ ಮರದ ಚಂದ್ರಶೇಖರ್, ಎಲ್ ಪಿ ಹನುಮಂತಪ್ಪ, ಹುಚ್ಚ ಸ್ವಾಮಿ, ಯರ್ರಿಸ್ವಾಮಿ, ವಿಶ್ವನಾಥ್ ಇತರರಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್ ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button