ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಮಾಜಿ ಡಿಸಿಎಂ, ಶಾಸಕರಾದ ಲಕ್ಷ್ಮಣ ಸಂ. ಸವದಿ.
ಅಥಣಿ ಫೆಬ್ರುವರಿ.6

ತಾಲೂಕಿನ ನಿಪ್ಪಾಣಿ ಕೊಟ್ಟಲಗಿ ರಸ್ತೆಯ ಕರಿಮಸೂತಿಯಿಂದ ಯಕ್ಕಂಚಿ ವರೆಗೆ 3 ಕೋಟಿ ರೂ. ವೆಚ್ಚದಲ್ಲಿ ಉಳಿದ ರಸ್ತೆ ಕಾಮಗಾರಿಗೆ ಯಕ್ಕಂಚಿ ಗ್ರಾಮದಲ್ಲಿ ಹಾಗೂ ಹೊಸಟ್ಟಿ ರಸ್ತೆಯಿಂದ ಶ್ರೀ ಶಿವು ನಾಯಕ ಅವರ ತೋಟದ ವರೆಗೆ 1 ಕೋಟಿ ರೂ. ವೆಚ್ಚದಲ್ಲಿ 2 ಕಿ.ಮೀ. ರಸ್ತೆ ಕಾಮಗಾರಿಗೆ ಹಾಗೂ ದರೂರ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ದಿ. 5-2-24ರಂದು ಸಾಯಂಕಾಲ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂಗಪ್ಪ ಸವದಿಯವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಮುಖಂಡರು, ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ