ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ.
ಇಂಡಿ ನವೆಂಬರ್.22

ತಾಲೂಕಿನ ನಾದ ಬಿಕೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಿನಾಂಕ22.11.2023ರಂದು ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಒಟ್ಟು 12 ಜನ ಚುನಾಯಿತ ಸದಸ್ಯರಿದ್ದು .ಈ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನ ಚುನಾವಣೆಗೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು , ಶ್ರೀ ಧಮ೯ರಾಯ ತಂದೆ ಸಿದ್ಧಪ್ಪ ಅವಜಿ ಇವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ,ಹಾಗೂ ಉಪಾಧ್ಯಕ್ಷರಾಗಿ ಹಣಮಂತ್ರಾಯ ಇಂಡಿ ಇವರನ್ನು ಆಯ್ಕೆ ಮಾಡಲಾಯಿತು ಎಂದು ಮುಖ್ಯ ಚುನಾವಣಾಧಿಕಾರಿಯಾದ ಎಸ್.ಎಸ್.ಸದ್ಧಣಗಿಯವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಡಿ.ಎಸ್.ಅವಜಿಯವರು ಮಾತನಾಡಿ -ಈ ಗ್ರಾಮದಲ್ಲಿ ಕೆಲವು ವಷ೯ಗಳಿಂದ ಸಹಕಾರ ಸಂಘದ ಆಡಳಿತ ಮಂದಗತಿಯಲ್ಲಿ ಸಾಗಿತ್ತು.ಆದರೆ ಇದನ್ನರಿತ ರೈತರು ನನ್ನನ್ನು ಸಹಕಾರ ಬಹುಮತದೊಂದಿಗೆ ಅವಿರೋಧವಾಗಿ ಆಯ್ಕೆಮಾಡಿದ್ದೀರಿ.ತಮಗೆಲ್ಲಾ ತುಂಬು ಹೃದಯದ ಧನ್ಯವಾದಗಳು.ನಾನು ಸರ್ಕಾರಿ ಅಧಿಕಾರಿ ಯಾಗಿದ್ದಾಗಲೂ ರೈತರ,ಬಡವರ ಪರವಾಗಿಯೇ ಸೇವೆ ಸಲ್ಲಿಸಿದ್ದೇನೆ .ಇನ್ನೂ ನನ್ನ ಜೀವನ ಪೂರ್ತಿಯೂ ರೈತರ ಬಡವರ ಪರವೇ ಕಾಯ೯ ಮಾಡುತ್ತೇನೆ ಎಂದು ಹೇಳಿದರು.ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಅನಿಲಗೌಡ ಅಳ್ಳಗಿಯವರು ಮಾತನಾಡಿ-ಯಾರೆ ಆಗಲಿ ,ಏನೇ ಆಗಲಿ ಸಾವ೯ಜನಿಕ ಹಿತ ದೃಷ್ಟಿಯಿಂದ ಒಳ್ಳೆಯದು ಮಾಡಿ ,ಹೆಸರು ವಾಸಿಯಾಗಿರಿ ಮೂತಿ೯ “ಚಿಕ್ಕದಾದರೂ ಕೀತಿ೯ ಮಾತ್ರ ದೊಡ್ಡದಾಗಿರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಶ್ರೀ ಅಪ್ಪಾಸಾಹೇಬ ಗಿರಡೆ.ಶೀ ಬನಪ್ಪ ಹೂಗಾರ.ಶ್ರೀ ಈರಣ್ಣ ಶಿ ತಳವಾರ.ಶ್ರೀ ಭೀಮಶ್ಯಾ ಅ ಹರಿಜನ.ಶ್ರೀ ಅರವಿಂದ ಬಡಿಗೇರ.ಶ್ರೀಮತಿ ಮಹಾದೇವಿ ಇಂಡಿ. ಹಾಗೂ ಗ್ರಾಮದ ಮುಖಂಡರಾದ ಶ್ರೀ ಅನಿಲಗೌಡ ಅಳ್ಳಗಿ. ಶ್ರೀ ಬಸುಗೌಡ ಬಿರಾದಾರ.ಶ್ರೀ ರಮೇಶ ಘೋರೆ.ಶ್ರೀ ಪಂಚು ಚಿವುಟೆ.ಶ್ರೀ ಶಿವಾನಂದ ಅವಜಿ.ಶ್ರೀ ಜಯಶೀಲ ಅವಜಿ.ಶ್ರೀ ರವಿಕಾಂತ ಪಾಟೀಲ.ಶ್ರೀ ದಶರಥ ಗೊಂದಳಿ.ಶ್ರೀ ಪಾಂಡು ಗೊಂದಳಿ.ಶ್ರೀ ಬಸವರಾಜ ಹರಿಜನ.ಶ್ರೀ ಲಾಯಪ್ಪ ತಳವಾರ.ಶ್ರೀಪೈಗಂಬರ ದೇಸಾಯಿ. ಶ್ರೀ ದಿಲೀಪ ಪತ್ತಾರ.ಶ್ರೀ ಪುನೀತ ಅವಜಿ.ಶ್ರೀ.ಬಸವರಾಜ ಅವಜಿ.ಶ್ರೀ ನಾಗು ಪೂಜಾರಿ.ಶ್ರೀ ಸಿದ್ಧರಾಮ ತಳವಾರ ಶ್ರೀ ತುಕಾರಾಮ ಗೊಂದಳಿ ಶಿಕ್ಷಕರು.ಶ್ರೀ ಲಕ್ಷ್ಮಣ ಗೊಂದಳಿ.ಬಸವರಾಜ ಧೂಳಖೇಡ.ಶೀ ರಾಜಕುಮಾರ ಮೇಲಿನಕೇರಿ.ಶ್ರೀ ಸೈಯದ ದೇಸಾಯಿ.ಇತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ