ಜಾತಿ ಜನಗಣತಿ ಬಿಡುಗಡೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಆಗ್ರಹ.
ಬೆಂಗಳೂರು ನವೆಂಬರ್.22

ನೋಡಿ ಈ ಕೂಡಲೇ ಜಾತಿ ಜನಗಣತಿಯನ್ನ ಬಿಡುಗಡೆ ಗೊಳಿಸಬೇಕೆಂದು ನಮ್ಮ ಕರ್ನಾಟಕ ರಾಜ್ಯದ ಮೀಸಲಾತಿ ಕ್ಷೇತ್ರದಿಂದ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದು ವಿಧಾನ ಸೌಧಕ್ಕೆ.ಹೋಗಿರುವಂತ ಎಲ್ಲಾ ಎಸ್ಸಿ. ಎಸ್ಟಿ. ಒಬಿಸಿ. ಹಿಂದುಳಿದ ಜಾತಿಗೆ ಸೇರಿದಂತ ಎಲ್ಲಾ.ಶಾಸಕರು ಈ ಕೂಡಲೇ ಜಾತಿ ಜನಗಣತಿಯನ್ನು ಬಿಡುಗಡೆ ಗೊಳಿಸಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ಅವರನ್ನು ಒತ್ತಾಯ ಪಡಿಸಬೇಕೆಂದು ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಾವು ನಿಮ್ಮನ್ನ ಒತ್ತಾಯ ಪಡಿಸುತ್ತೇವೆ ಹಾಗೆ ಈ ಜಾತಿ ಜನಗಣತಿಯ ಬಿಡುಗಡೆಯ ವಿಷಯದಲ್ಲಿ ಒಕ್ಕಲಿಗ ಜನಾಂಗದ ಸ್ವಾಮೀಜಿಯವರು ಹಾಗೂ ಉಪ.ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಈ ಜಾತಿ ಜನಗಣತಿಯನ್ನು ಬಿಡುಗಡೆ ಗೊಳಿಸಬಾರದು ಎಂದು ಒತ್ತಾಯ ಪಡಿಸುತ್ತಿದ್ದಾರೆ ಆದರೆ ನೀವು ನಮ್ಮ ಕರ್ನಾಟಕ ರಾಜ್ಯದ ಮೀಸಲಾತಿ ಕ್ಷೇತ್ರಗಳಿಂದ ಗೆದ್ದೋಗಿರುವಂತ ನಮ್ಮ ಶಾಸಕರು ಏಕೆ ಇಷ್ಟೊಂದು ಮೌನವಾಗಿ ಈ ಜಾತಿ ಜನಗಣತಿಯ ಬಿಡುಗಡೆಯ ವಿಷಯದಲ್ಲಿ ಏನೇನು ಮಾತನಾಡದೆ ಧ್ವನಿ ಎತ್ತದೆ ಏಕೆ ಸುಮ್ಮನೆ ಕುಳಿತಿದ್ದಾರೆ ಎನ್ನುವುದು ನಮಗೆ ತಿಳಿಯುತ್ತಿಲ್ಲ ಕರ್ನಾಟಕ ರಾಜ್ಯದ ದಲಿತರ ಪರವಾಗಿ ಈ ಕೂಡಲೇ ಎಸ್ಸಿ ಎಸ್ಟಿ ಒಬಿಸಿ ಜನಾಂಗದ ಶಾಸಕರು ಈ ಕೂಡಲೇ ಧ್ವನಿ ಎತ್ತಬೇಕು ಎಂದು ದಲಿತರ ಪರವಾಗಿ ನಾವು ಒತ್ತಾಯ ಪಡಿಸುತ್ತೇವೆ. ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ರಿ.ನಂ/386-2020 21 ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು ಡಿಆರ್ ಪಾಂಡುರಂಗ ಸ್ವಾಮಿ. ರಾಜ್ಯ ಸಂಘಟನೆ ಸಂಚಾಲಕರು ಕೊಡಗಲ್ ರಮೇಶ್. ರಾಜ್ಯ ಸಂಘಟನಾ ಸಂಚಾಲಕರು ರಾಜ್ಯ ಸಂಘಟನಾ ಸಂಚಾಲಕರು ತರೀಕೆರೆ ಎನ್ ವೆಂಕಟೇಶ್ ಹಾಗೂ. ಮಾರುತಿ.ಬಿ.ಹೊಸಮನಿ ಬಾಗಲಕೋಟ ಹಿಂದುಳಿದ ಅಲ್ಪಸಂಖ್ಯಾತರ ವಿಭಾಗ ಹಾಗೂ ದುರ್ಗಾ ದಾಸ ಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ.ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳು.ಹಾಗೂ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳು ಹಾಗೂ ತಾಲೂಕು ಪದಾಧಿಕಾರಿಗಳು ದಲಿತರ ಪರವಾಗಿ ಹಿಂದುಳಿದಿರುವವರ ಪರವಾಗಿ ದಿನಾಂಕ 22-11-2023. ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಆಗ್ರಹ ಪಡಿಸುತ್ತದೆ.