ಧರ್ಮಸ್ಥಳ ಸಂಸ್ಥೆಯಿಂದ ಕೃಷಿ ಅನುದಾನ ವಿತರಣೆ ಹಾಗೂ ಧಾರ್ಮಿಕ ಸಭೆ.

ಹೊಸಪೇಟೆ ನವೆಂಬರ್.23

ನಗರದ ಒಳಾಂಗಣ ಕ್ರೀಡಾ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಹೊಸಪೇಟೆ , ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಎಂ ಜಿ ನಗರ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇವರ ಸಹಯೋಗದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಕೃಷಿ ಅನುದಾನ ವಿತರಣೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ರೀಜನಲ್ ಮ್ಯಾನೇಜರ್ ಆರ್ ಜಿ ನಾಗಭೂಷಣ್ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಧರ್ಮಸ್ಥಳದ ಧಾರ್ಮಿಕ ಕಾರ್ಯಕ್ರಮಗಳು ಊಹೆಗೂ ಮಿಗಿಲಾದವು ಧರ್ಮಸ್ಥಳ ಸಂಸ್ಥೆಯ ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವದು ನಮ್ಮೆಲ್ಲರ ಸೌಭಾಗ್ಯ ಎಂದು ಶ್ಲಾಘಿಸಿದರು.ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಅವರು ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಸರ್ವರ ಒಳಿತಿಗಾಗಿ, ಸರ್ವರ ಪ್ರಗತಿಗಾಗಿ ಇಂತಹ ಪುಣ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದು ಅದರಲ್ಲೂ ಹೊಸಪೇಟೆಯ ಭಾಗದಲ್ಲಿ ಕಳೆದ 11 ವರ್ಷಗಳಿಂದ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸತತವಾಗಿ ನಡೆಯುತ್ತಿದ್ದು ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ, ಧರ್ಮಸ್ಥಳ ಸಂಸ್ಥೆ ಕೇವಲ ನಾವು ಮಾತ್ರ ಕಟ್ಟಿದ ಸಂಸ್ಥೆಯಲ್ಲ ಬದಲಾಗಿ ಜನರೇ ಪ್ರೀತಿ ವಿಶ್ವಾಸದಿಂದ ಕಟ್ಟಿದ ಸಂಸ್ಥೆಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದಂತಹ ಮಾಜಿ ನಗರ ಸಭಾ ಸದಸ್ಯರಾದ ಶ್ರೀಮತಿ ಗೀತಾ ಶಂಕರ್ ಅವರು ಯಾವುದೇ ಸರಕಾರವು ಕೂಡ ಮಾಡದಂತಹ ಪವಿತ್ರವಾದಂತಹ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ನಾನು ಕೂಡ ಕಳೆದ 11 ವರ್ಷಗಳಿಂದ ಧರ್ಮಸ್ಥಳ ಸಂಸ್ಥೆಯ ಫಲಾನುಭವಿಯಾಗಿದ್ದು ನನ್ನ ಮಕ್ಕಳ ಶಿಕ್ಷಣ ಕೂಡ ಸಂಸ್ಥೆಯ ನೆರವಿನಿಂದಲೇ ಆಗಿದೆ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಸಂಸ್ಥೆಯು ಉಚಿತವಾಗಿ ಶಿಷ್ಯವೇತನ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ದಿವ್ಯ ಸಾನಿಧ್ಯವನ್ನು ಸದ್ಗುರು ಶಿವರಾಮ ಅವಧೂತ ಮಠದ ಮಹಾಸ್ವಾಮಿಗಳಾದ ಶ್ರೀ ಶಿವಪ್ರಕಾಶ ನಂದ ಸ್ವಾಮಿಗಳು ವಹಿಸಿ ಮಾತನಾಡಿ ನಡೆದಾಡುವ ದೇವರು ಶ್ರೀ ವೀರೇಂದ್ರ ಹೆಗಡೆ ಅವರ ದೂರ ದೃಷ್ಟಿ ಕಾರ್ಯಕ್ರಮಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಯಾವುದೇ ಫಲಪೇಕ್ಷ ಇಲ್ಲದೆ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅವರು ಸಮಾಜದ ಮೇಲೆ ಹೊಂದಿರುವ ಕಾಳಜಿಗೆ ಕೈಗನ್ನಡಿಯಾಗಿದೆ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಪರಶುರಾಮ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಸಲಕರಣೆ ವಿತರಣೆ ಹಾಗೂ ಕೃಷಿ ಅನುದಾನ ವಿತರಣೆ ವಿಶೇಷವಾಗಿತ್ತು.ಯೋಜನಾಧಿಕಾರಿಗಳಾದ ಶ್ರೀ ಮಾರುತಿ ಎಸ್ ಗೌಡ, ಶ್ರೀ ರಾಘವೇಂದ್ರ ಎಸ್, ವಲಯದ ಮೇಲ್ವಿಚಾರಕರಾದ ಶ್ರೀಮತಿ ಅಂಜನ, ಕೃಷಿ ಅಧಿಕಾರಿ ಚನ್ನಪ್ಪ, ಮೇಲ್ವಿಚಾರಕ ಶರಣಬಸವ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ರೇಖಾ, ಸೇವಾ ಪ್ರತಿನಿಧಿಗಳಾದ ಯಶೋಧ, ಸರೋಜಾ, ಸುಮಾ, ಮಮತಾ, ಸಾಬವ್ವ, ಹುಲಿಗೆಮ್ಮ, ಗಂಗಾ, ಮಂಜುಳಾ ಉಪಸ್ಥಿತರಿದ್ದರು ಕೃಷಿ ಅಧಿಕಾರಿ ಚನ್ನಪ್ಪ ನಿರೂಪಿಸಿದರು, ಯೋಜನಾಧಿಕಾರಿ ಮಾರುತಿ ಎಸ್ ಸ್ವಾಗತಿಸಿದರೆ ಯೋಜನಾಧಿಕಾರಿ ರಾಘವೇಂದ್ರ ಎಸ್ ವಂದಿಸಿದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button