ಕುಡಿಯುವ ನೀರಿಗೆ ಮೊದಲ ಆದ್ಯತೆ – ಪರಮೇಶ್.

ತರೀಕೆರೆ ನವೆಂಬರ್.23

ಭದ್ರ ಡ್ಯಾಮ್ ನಿಂದ ತರೀಕೆರೆ ಪಟ್ಟಣದ ಮಧ್ಯಭಾಗದಲ್ಲಿ ಪೈಪ್ಲೈನ್ ಹಾದು ಹೋಗಿ ಹೊಸದುರ್ಗಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಸಾಧಕ ಬಾಧಕಗಳನ್ನು ಚರ್ಚೆ ಮಾಡುವುದು ಸೂಕ್ತ ಎಂದು ಪುರಸಭಾ ಅಧ್ಯಕ್ಷರಾದ ಪರಮೇಶ್ ಹೇಳಿದರು. ಅವರು ಇಂದು ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಕರೆಯಲಾಗಿದ್ದ ಪುರಸಭಾ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತರೀಕೆರೆ ಪಟ್ಟಣದಲ್ಲಿ ಕುಡಿಯುವ ನೀರಿಗೆ ತುಂಬಾ ಸಮಸ್ಯೆ ಇದ್ದು ನಮಗೆ ಅನುಕೂಲ ವಾಗುವುದಾದರೆ ನಮ್ಮ ಪುರಸಭೆಯ ಅಭಿಯಂತರದ ಅಭಿಪ್ರಾಯ ಪಡೆಯಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಭಿಯಂತರರಾದ ಬಾಬುರಾವ್ ಮಾತನಾಡಿ ರಾಜ್ಯ ಹೆದ್ದಾರಿ ಮಾದರಿ ನಾಲ್ಕು ಪತದ ರಸ್ತೆ ಆಗುವ ಸಾಧ್ಯತೆ ಇದೆ, ಎಂದು ಹೇಳಿದರು. ಪುರಸಭಾ ಸದಸ್ಯರಾದ ಟಿಎಮ್ ಬೋಜರಾಜ್ ಮಾತನಾಡಿ ಪಟ್ಟಣದಲ್ಲಿ ಯು ಜಿ ಡಿ ಮಾಡುವಾಗ ತೊಂದರೆಯಾಗುವ ಸಾಧ್ಯತೆ ಇದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸ ಬೇಕಾಗಿದೆ ಎಂದು ಹೇಳಿದರು ಅಧ್ಯಕ್ಷರು ಮಾತನಾಡಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು. ಸದಸ್ಯರಾದ ಅಶೋಕ್ ಕುಮಾರ್ ಮಾತನಾಡಿ 15 ವರ್ಷಗಳಿಂದಲೂ ಸಹ ಅಂಗನವಾಡಿ ಕೇಂದ್ರಗಳ ಕುರಿತು ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸಿ ಡಿ ಪಿ ಓ, ಚರಣ್ ರಾಜ್ ರವರು ಮಾತನಾಡಿ ತರೀಕೆರೆ ಪಟ್ಟಣದಲ್ಲಿ 17 ಅಂಗನವಾಡಿ ಕೇಂದ್ರಗಳಿವೆ ವಿದ್ಯುತ್ ಕೊರತೆ ಇದೆ ಪುರಸಭೆ ಅನುದಾನ ಕೊಟ್ಟರೆ ಸ್ಮಾರ್ಟ್ ಅಂಗನವಾಡಿ ಮಾಡಲಾಗುತ್ತದೆ ಎಂದರು. ಮೂಲ ಸೌಕರ್ಯಗಳ ಕೊರತೆ ಇದ್ದಲ್ಲಿ ಪುರಸಭೆ ಬಗೆಹರಿಸಿ ಕೊಡಲಾಗುತ್ತದೆ ಎಂದು ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ ತಿಳಿಸಿದರು. ಸದಸ್ಯರಾದ ಟಿ ಜಿ ಲೋಕೇಶ್ ಮಾತನಾಡಿ ಅಧಿಕಾರಿಗಳ ವರ್ಗಾವಣೆಗೆ ನಮ್ಮ ಅಭ್ಯಂತರವಿಲ್ಲ ಆದರೆ ಪಂಪ ಹೌಸ್ ನಲ್ಲಿ ಕ್ಲೋರಿನ್ ಗ್ಯಾಸ್ ಖಾಲಿಯಾಗಿದೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕುಡಿಯುವ ನೀರಿನ ಸಮಗ್ರ ಪರಿಹಾರ ಮಾಡಬೇಕು ಎಂದು ಹೇಳಿದರು. ಸದಸ್ಯರಾದ ಶಶಾಂಕ್ ಮಾತನಾಡಿ 16 ಅಡಿಗಿಂತ ಕಡಿಮೆ ಇರುವ ನಿವೇಶನಕ್ಕೆ ಮನೆ ಕಟ್ಟಲು ಲೈಸೆನ್ಸ್ ಕೊಡುತ್ತಿಲ್ಲ ಆದರೆ ನೂರಾರು ಜನರು ವಿಭಾಗ ಪತ್ರದಂತೆ ಪಡೆದಿರುವ ನಿವೇಶನ ದವರು ವಸತಿ ನಿರ್ಮಾಣ ದಿಂದ ವಂಚಿತರಾಗುತ್ತಿದ್ದಾರೆ ಅವರಿಗೆ ಮನೆ ಕಟ್ಟಿಕೊಳ್ಳಲು ಲೈಸೆನ್ಸ್ ಕೊಡಲು ಠರಾವು ಪಾಸ್ ಮಾಡಿರಿ ಎಂದು ಹೇಳಿದರು. ವಿದ್ಯುತ್ ಕಂಬಗಳಿಂದ ಜನ ಸಾಮಾನ್ಯರಿಗೆ ತೊಂದರೆ ಜೀವ ಹಾನಿಯಾಗದಂತೆ ಮೆಸ್ಕಾಂ ಎಚ್ಚರ ವಹಿಸಿದೆ ಪಟ್ಟಣದಲ್ಲಿ 140 ಕಂಬಗಳನ್ನು ಅಳವಡಿಸ ಬೇಕಾಗಿದೆ ಅದರಲ್ಲಿ 50 ಕಂಬಗಳನ್ನು ಅಳವಡಿಸಿದೆ ಎಂದು ಮೆಸ್ಕಾಂ ಎ ಇ ಇ ಅಜಯ್ ರವರು ಸಭೆಗೆ ತಿಳಿಸಿದರು. ಪಟ್ಟಣದಲ್ಲಿ ಮಾಂಸ ಮಾರಾಟಗಾರರಿಗೆ ಉದ್ದಿಮೆ ಪರವಾನಿಗೆ ನೀಡುವ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದು ಮುಖ್ಯ ಅಧಿಕಾರಿ ಪ್ರಶಾಂತ್ ತಿಳಿಸಿದರು. ಸದಸ್ಯರಾದ ದಾದಾಪೀರ್, ಟಿ ಎಂ ರಂಗನಾಥ, ಆಶಾ ಅರುಣ್ ಕುಮಾರ್, ಟಿಎಸ್ ಬಸವರಾಜ್, ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಆರ್ ಕುಮಾರಪ್ಪ ಮತ್ತು ಅನಿತಾ ದಂಪತಿಗಳಿಗೆ ಹೆಣ್ಣು ಮತ್ತು ಗಂಡು ಮಗು ಎರಡು ಅವಳಿ ಮಕ್ಕಳು ಜನನ ವಾಗಿದ್ದ ಪ್ರಯುಕ್ತ ಎಲ್ಲರಿಗೂ ಸಿಹಿ ವಿತರಿಸಿದರು. ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಹಾಗೂ ಸದಸ್ಯರಾದ ಅಂಜಯ್ಯ ಅನಿಲ್ ಕುಮಾರ್, ವಸಂತಕುಮಾರ್, ಗೀತಾ ಗಿರಿರಾಜ್, ಗಿರಿಜಾ ಪ್ರಕಾಶವರ್ಮ ಮುಂತಾದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button