ಸ್ವಾಮೀಜಿಯವರ ಸ್ವಾರ್ಥಿಗಳಾಗ ಬಾರದು – ಬಸವಲಿಂಗ ಸ್ವಾಮೀಜಿ.
ಹೊಸಪೇಟೆ ನವೆಂಬರ್.24

ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ದೇವಸ್ಥಾನ ಮಠ ಹಂಪಿ ಹೊಸಪೇಟೆ ಬಳ್ಳಾರಿ, ಶ್ರೀಮಾನ್ಯ ನಿರಂಜನ ಜಗದ್ಗುರು ಡಾ. ಸಂಗನ ಬಸವ ಮಹಾಸ್ವಾಮಿಗಳ ಪಟ್ಟಾಧಿಕಾರ ಸುವರ್ಣ ಮಹೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ “ಶೀಲಾ ಮಠ” ಉದ್ಘಾಟನೆ ನಂತರ ಶ್ರೀ ಜಗದ್ಗುರು ಬಸವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.ಸಮಾಜಾಕ್ಕಾಗಿ ತಮ್ಮನ್ನು ತಾವು ಅರ್ಪಿಸಿ ಕೊಂಡು ಹೋದಂತಹ ಹಿರಿಯ ಶರಣರನ್ನು ನೆನಪಿಸಿ ಕೊಂಡಾಗ ನಾವು ಪ್ರಜ್ಞಾವಂತರಾಗುತ್ತೇವೆ, ಶರಣರು ಹಲವಾರು ಕಲ್ಯಾಣ ಕಾರ್ಯಗಳನ್ನು ಮಾಡಿದ್ದಾರೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ. ಪೂಜ್ಯರಾದ ಕೊಟ್ಟೂರು ಮಠದ ಬಸವಲಿಂಗ ಮಹಾ ಸ್ವಾಮಿಗಳು, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನಮ್ಮ ಲಿಂಗಾಯತ ಮಠಗಳಿಗೆ ಸಲ್ಲುತ್ತದೆ , ಬಸವ ಪುರಾಣ ಎಂದರೆ ಲಿಂಗಾಯಿತರಿಗೆ ವೇದ, ಬಸವ ಪುರಾಣ ಎಂದರೆ ತತ್ವ, ಬಸವ ಪುರಾಣ ಎಂದರೆ ಲಿಂಗಾಯತರಿಗೆ ಎಲ್ಲವೂ ಹೌದು. ಬಸವಾದಿ ಶರಣರ ಸಾಹಿತ್ಯ ಉಳಿದಿರುವುದು ಹಂಪಿ ಯಲ್ಲೇ ಶ್ರೀ ಕೃಷ್ಣ ದೇವರಾಯರು ಅವುಗಳನ್ನು ಬೆಳಸಿದ್ದಾರೆ.ಸಮಾಜದ ಜನರಿಗಾಗಿ ನಾವು ಬದುಕಬೇಕು, ಸಮಾಜದ ಜನರಿಗಾಗಿ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.ಆಶೀರ್ವಚನ : ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತ ಮಠ ಒಳಬಳ್ಳಾರಿ, ತೋಂಟದ ಸಿದ್ದರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಆಶೀರ್ವಚನಗಳನ್ನು ನೀಡಿದರು.ಸಂತೆಕಲ್ಲೂರು ಮಠದ ಘನ ಮಠೇಶ್ವರ ಮಠದ ಶ್ರೀ ಗುರು ಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುರುಗೋಡು ದುರುದುಂಡೇಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ. ಆಳಂದ ಮಹಾಂತೇಶ್ವರ ಹಿರೇ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ