ಕುಸಿದ ರಸ್ತೆ – ಅಪಾಯಕ್ಕೆ ಆಹ್ವಾನ.
ಕಾನಾ ಹೊಸಹಳ್ಳಿ ನವೆಂಬರ್.24

ಸಮೀಪ ಹೂಡೇಂ ರಸ್ತೆಯಿಂದ ಮೊಳಕಾಲ್ಮುರುಗೆ ಸಂಪರ್ಕ ಕಲ್ಪಿಸುವ ರಾಜ್ಯ ರಸ್ತೆಯಲ್ಲಿ ಸೇತುವೆಗೆ ಹೊಂದಿ ಕೊಂಡ ರಸ್ತೆಯ ಒಂದು ಬದಿ ಕುಸಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸೇತುವೆ ಕೊನೆಯಲ್ಲಿ ಎಡ ಬದಿಯ ರಸ್ತೆಯ ಮಣ್ಣು ಕುಸಿದು ಬಿದ್ದಿದೆ. ಹಾಗೂ ಬಲ ಭಾಗದಲ್ಲಿ ಪಾಳುಬಾವಿ ಇದ್ದು, ಸೇತುವೆಗೆ ರಸ್ತೆಯೂ ಕೂಡ ಕಿರಿದಾಗಿದ್ದು, ತಡೆಗೋಡೆ ಕೂಡಾ ಇಲ್ಲದ ರಸ್ತೆಯಲ್ಲಿ ಚಲಿಸಿದರೆ ಕಾಲುವೆಗೆ ಬೀಳುವ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ಕೂಡಲೇ ಈ ಕಾಲುವೆಯ ಸುತ್ತ ತಡೆಗೋಡೆ ಹಾಕಿ ಸಂಭವಿಸ ಬಹುದಾದ ಅನಾಹುತಕ್ಕೆ ತಡೆ ಹಾಕಬೇಕು ಹಾಗೂ ರಸ್ತೆಯ ಬದಿಯಲ್ಲಿ 5-6 ಅಡಿಯಷ್ಟು ಕುಸಿದು ಬಿದ್ದಿದೆ. ಸೇತುವೆ ಮೂಲಕ ಸಂಚರಿಸುವ ವಾಹನ ಸವಾರರು ಭಯದಲ್ಲಿ ಸಂಚರಿಸುವಂತಾಗಿದೆ. ಅಪಘಾತದ ಭೀತಿ ನಿತ್ಯ ಪ್ರಯಾಣಿಕರನ್ನು ಕಾಡುತ್ತಿದೆ. ದಿನನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತಿದ್ದು ತಿರುವಿನಲ್ಲಿ ಅಪಾಯ ಸಂಭವಿಸಬಹುದು. ಇಲ್ಲಿ ಕುಸಿತ ಸಂಭವಿಸಿದ್ದು ಕಳೆದ ಸುಮಾರು ವರ್ಷಗಳ ಹಿಂದೆ ಮಳೆಗಾಲದ ಸಂದರ್ಭದಲ್ಲೂ ಇದೇ ಜಾಗದಲ್ಲಿ ರಸ್ತೆ ಕುಸಿತ ಸಂಭವಿಸಿದ್ದು, ಇನ್ನಾದರೂ ಸಂಬಂಧಪಟ್ಟ ಇಲಾಖೆ ಎಚ್ಚರಗೊಂಡು ರಸ್ತೆ ದುರಸ್ತಿ ಕಾಮಾಗಾರಿ ಕೈಗೊಳ್ಳುವುದು ಉತ್ತಮ. ಇದಕ್ಕೆ ಸಂಬಂಧಿಸಿದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು, ವಾಹನ ಸವಾರರು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ