ಸರಳ ವಿಧಾನ ಗಣಿತ ಕಲಿಕೆಗೆ ಸಹಕಾರಿ.

ಕಾನಾ ಹೊಸಹಳ್ಳಿ ನವೆಂಬರ್.24

ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತ ವಿಷಯದ ಬಗೆಗಿನ ಭಯ ಹೋಗಲಾಡಿಸಿ ಆತ್ಮಸ್ಥೈರ್ಯ ನೀಡಲು ಗಣಿತ ಸ್ಪರ್ಧೆ ಪೂರಕವಾಗಿದೆ ಎಂದು ಗ್ರಾ‌.ಪಂ ಅಧ್ಯಕ್ಷ ಬಿ ರಾಮಚಂದ್ರಪ್ಪ ತಿಳಿಸಿದರು. ತಾಲೂಕಿನ ಹೂಡೇಂ ಗ್ರಾ.ಪಂ ಮಟ್ಟದ ಮಕ್ಕಳ ಗಣಿತ ಸ್ಪರ್ಧೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣಿತ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಕರಗಳ ಸಹಾಯದಿಂದ ಬೋಧಿಸುವುದರಿಂದ ಗಣಿತವನ್ನು ಸರಳವಾಗಿ ಅರ್ಥ ಮಾಡಿಸಬಹುದಾಗಿದೆ. ಇದರ ಜತೆಗೆ ಸರಳ ಸೂತ್ರ ಅನುಸರಿಸಿದರೆ ಗಣಿತದಷ್ಟು ಸುಲಭ ವಿಷಯ ಯಾವುದೂ ಇರುವುದಿಲ್ಲ. ಕಷ್ಟ ಎನಿಸುವ ವಿಷಯಗಳ ಕಡೆ ಹೆಚ್ಚಿನ ಗಮನ ಹರಿಸಿದರೆ ಎಲ್ಲವೂ ಸಲೀಸಾಗುತ್ತದೆ ಎಂದು ಸಲಹೆ ನೀಡಿದರು. ಈ ವೇಳೆ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಬಾಯಿ ಮಾತನಾಡಿ ಮಕ್ಕಳಿಗೆ ಕ್ಲಿಷ್ಟವೆನಿಸುವಂತಹ ವಿಷಯಗಳನ್ನು ಸರಳ ವಿಧಾನಗಳ ಮೂಲಕ ಕಲಿಸುವ ಪ್ರಯತ್ನ ಶಿಕ್ಷಕರು ಮಾಡಬೇಕು. ವಿವಿಧ ಚಟುವಟಿಕೆ ಆಧಾರಿತ ಕಲಿಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಈ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿ ಕಾಲ ಮೌಲ್ಯಮಾಪನ ಮಾಡಿ ಫಲಿತಾಂಶ ಒದಗಿಸಿದರು. 4.ನೇ ತರಗತಿ 5.ನೇ , 6.ನೇ ಮಕ್ಕಳಿಗೆ ಗ್ರಾಪಂಯಿಂದ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನರಸಿಂಹ ರೆಡ್ಡಿ, ಸಿಆರ್‌ಪಿ ತಿಪ್ಪೇಸ್ವಾಮಿ ಹಾಗೂ ಗ್ರಾ.ಪಂ ಕಾರ್ಯದರ್ಶಿ ತಿಪ್ಪೇರುದ್ರಪ್ಪ, ಬಿಲ್ ಕಲೆಕ್ಟರ್ ಮಂಜಣ್ಣ, ಗ್ರಂಥಾಲಯ ಮೇಲ್ವಿಚಾರಕರು ಗುರುರಾಜ್, ಶಾಲೆಯ ಶಿಕ್ಷಕರಾದ ಕೆ.ಜಿ ರವಿಕುಮಾರ್, ಮಚ್ಚೇಂದ್ರಪ್ಪ, ಬೋಸಯ್ಯ, ಮಾರುತಿ, ಹಾಗೂ ಗ್ರಾಮದ ಮುಖಂಡ ಜಿ ಬೋಸಯ್ಯ, ಎಸ್ಡಿಎಂಸಿ ಸದಸ್ಯ ರಾಜಣ್ಣ ಡಿ, ಗ್ರಾ.ಪಂ ಸಿಬ್ಬಂದಿ ದಕ್ಷಿಣ ಮೂರ್ತಿ, ಸೇರಿದಂತೆ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾ.ಪಂ ಸರ್ವ ಸದಸ್ಯರು, ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದ್ದರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button