ಜಾತ್ರಾ ನಿಮಿತ್ಯ “ನಗೆ ಸಂಭ್ರಮ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ.
ತಡವಲಗಾ ನವೆಂಬರ್.26

ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡುಗುಡಿಯ ಶ್ರೀ ಮರುಳಸಿದ್ದೇಶ್ವರ ನೂತನ ದೇವಾಲಯದ ಲೋಕಾರ್ಪಣೆ ನಿಮಿತ್ತವಾಗಿ ನಿನ್ನೆ ಜೋಡಗುಡಿಯಲ್ಲಿ ಖ್ಯಾತಿ ಹಾಸ್ಯಗಾರ ಶ್ರೀ ಗಂಗಾವತಿ ಪ್ರಾಣೇಶ್, ಶ್ರೀ ಬಸವರಾಜ ಮಾಮನಿ, ಶ್ರೀ ನರಸಿಂಹ ಜೋಶಿ ತಂಡದಿಂದ ” ನಗೆ ಸಂಭ್ರಮ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವನ್ನು ಬಿಜೆಪಿ ಮುಖಂಡರು ಹಾಗೂ ಸ್ವದೇಶಿ ಜಾಗರಣ ಮಂಚ ಸಂಚಾಲಕರಾದ ಶ್ರೀ ಶಂಕರಗೌಡ ಪಾಟೀಲ ( ಡೋಮನಾಳ) ಹಾಗೂ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠಿ ಸಂಚಾಲಕರಾದ ಶ್ರೀ ಬಾಬುರಾಜೇಂದ್ರ ನಾಯಕ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದರು.ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತಡವಲಗಾ ಗ್ರಾಮದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ವಹಿಸಿದ್ದರು.ಈ ಕಾರ್ಯಕ್ರಮ ಸಾನಿಧ್ಯವನ್ನು ವಹಿಸಿದ್ದ ಕೊಟ್ಟೂರು ಶ್ರೀ ಸಿದ್ದಲಿಂಗ ಶಿವಾಚಾರ್ಯರು,ರೋಡಗಿ ಶ್ರೀಗಳು, ಅಭಿನವ ಪುಂಡಲಿಂಗ ಮಾಹಾರಾಜರು , ಹಾಗೂ ಖ್ಯಾತ ಪುರಾಣಿಕರಾದ ಶಿವಾನಂದ ಶಾಸ್ತ್ರಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಮಲ್ಲನಗೌಡ ಪಾಟೀಲ, ಗುರುನಾಥ ಬಗಲಿ,ಅಪ್ಪು ಕಲ್ಲೂರ, ಜೇಟ್ಟಪ್ಪ ಮರಡಿ, ಗುಂಡು ರೂಗಿ, ಮಲ್ಕಪ್ಪ ತಡ್ಲಗಿ, ಬಾಬುಸಾವುಕಾರ ಮೇತ್ರಿ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ಮಳಸಿದ್ದಪ್ಪ ಬ್ಯಾಳಿ,ಕಾಂತು ಇಂಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ನಂತರ ಗಂಗಾವತಿ ಪ್ರಾಣೇಶ್ ಅವರು ಮಾತನಾಡಿ ಹಾಸ್ಯವು ಮೂಲ ಬುದ್ಧಿವಾದದ ಮೂಲತತ್ವವಾಗಿದೆ.ನಗುವು ಸಾಂಕ್ರಾಮಿಕ ಪರಹಿತಚಿಂತನೆಯ ಆತ್ಮವಾಗಿದೆ ನಗುವಿನಿಂದ ಆಯುಷ್ಯ ಹೆಚ್ಚಾಗುತ್ತದೆ ಎಂದು ಹೇಳಿದರು. ನಂತರ ಮಾತನಾಡಿದ ನರಸಿಂಹ ಜೋಶಿ ಅವರು ಹಾಸ್ಯವು ಹೃದಯಗಳನ್ನು ಅವರ ಬೆತ್ತಲೆ ವಾಸ್ತವಿಕತೆಯಲ್ಲಿ ಸೆರೆ ಹಿಡಿಯುತ್ತದೆ,ಅದು ಮೀರಿದ ಅತಿ ವಾಸ್ತವಿಕತೆಯ ಕುರುಹುಗಳನ್ನು ಸಹ ನೀಡುತ್ತದೆ ಎಂದು ಹೇಳಿದರು.ನಂತರ ಮಾತನಾಡಿ ನಗುವಿಗೆ ವಯೋವೃದ್ಧಿಗೆ ಮಿತಿಯಿಲ್ಲ,ಹಾಸ್ಯವು ರಂಗದ ಹಂತಗಳ ಜೀವ ವೈವಿಧ್ಯವನ್ನು ಸೆರೆ ಹಿಡಿಯುತ್ತದೆ,ಹಾಸ್ಯವು ಮುಖದ ಮೇಲೆ ಸಾಂಕ್ರಾಮಿಕ ನಗುವನ್ನು ಹೆಣೆಯುವದಾರವಾಗಿದೆ. ತಮಾಷೆಯ ಎಲುಬಿನೊಂದಿಗೆ ಆಶೀರ್ವದಿಸಲ್ಪಡುವುದು ನಿಜವಾಗಿಯೂ ಉಡುಗೊರೆಯಾಗಿದೆ,ಹಾಸ್ಯದ ಚತುರತೆಯಿಂದ ಆಶೀರ್ವದಿಸಲ್ಪಡುವುದು, ಹೃದಯವನ್ನು ಮೇಲಕ್ಕೆತ್ತುತ್ತದೆ,ಪಟಾಕಿಗಳು ಹಾಸ್ಯದ ತುಟಿಗಳಿಂದ ನಕ್ಷತ್ರಗಳನ್ನು ಹಾರಿಸುವಂತೆಪಟಾಕಿಗಳನ್ನು ಕಿತ್ತು ಹಾಕುವಂತೆ ಹಾಸ್ಯದ ಮಾಂಸದಿಂದ ಸುಪ್ತ ಜ್ವಾಲಾಮುಖಿಯಂತೆ ನಗುವು ಹೊರ ಹೊಮ್ಮುತ್ತದೆ ಎಂದು ಹೇಳಿದರು.ಒಟ್ಟಿನಲ್ಲಿ ನೆರೆದ ಜನ ಸಮೂಹವನ್ನು ನಕ್ಕು ನಲಿಸಿದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ