ಶ್ರೀ ಆರ್.ಬಿ.ಪಾಟಿಲ್ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಕ್ರೀಡಾ ಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಕುಷ್ಟಗಿ ಸಪ್ಟೆಂಬರ್.14

ಇತ್ತೀಚೆಗೆ ಕುಷ್ಟಗಿ ತಾಲೂಕಿನಲ್ಲಿ ನಡೆದಿರುವ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಹೂಲಗೇರಿಯ ಶ್ರೀ ಆರ್. ಬಿ.ಪಾಟೀಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ,ಪೂಜಾ ತಾವರಗೇರಿ (1500 ಮೀಟರ್ ಓಟ ದ್ವಿತೀಯ ಸ್ಥಾನ ). ಹಾಗೂ ಯಶೋದ ಗುಡಿಮನಿ (100 ಮೀಟರ್ ಓಟ ಪ್ರಥಮ ಸ್ಥಾನ ). ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಶ್ರೀ ಆರ್ ಬಿ ಪಾಟೀಲ್ ಪ್ರೌಢಶಾಲೆಯ ಅಧ್ಯಕ್ಷರಾಗಿರುವ ಶ್ರೀ ಎಂ ಆರ್ ಪಾಟೀಲ್ ಮತ್ತು ಮುಖ್ಯ ಗುರುಗಳಾದ ಶ್ರೀ ಎಸ್ ಹೆಚ್ ಬೀಳಗಿ ಹಾಗೂ ದೈಹಿಕ ಶಿಕ್ಷಕರಾಗಿರುವ ಶ್ರೀ ಬಸವರಾಜ ಬನ್ನಿ ಗುರುಗಳು ಮತ್ತು ಸಹ ಶಿಕ್ಷಕರಾದ ಶ್ರೀಮತಿ ಗೀತಾ ಪಾಟೀಲ್, ಶ್ರೀ ಅನಿಲ್ ಕುಮಾರ್ ಬಾರಡ್ಡಿ, ಶ್ರೀ ಮುತ್ತು.ಯ.ವಡ್ಡರ, ಶ್ರೀಮತಿ ರತ್ನಾ ನಾಗೂರ, ಶ್ರೀ ರಾಜಪ್ಪ ಗೌಡರ್ ಹಾಗೂ ಎಲ್ಲಾ ಶಾಲಾ ಸಿಬ್ಬಂದಿಯವರು ಮತ್ತು ಊರಿನ ಗಣ್ಯಮಾನ್ಯರು ಹಾಗೂ ಕ್ರೀಡಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.