ಮನುಷ್ಯನ ನಿಸ್ವಾರ್ಥ ಬದುಕಿನಲ್ಲಿ ಸುಖ. ಶಾಂತಿ ನೆಮ್ಮದಿ ನೆಲಸಲು ಸಾಧ್ಯ – ಅಮರೇಶ್ವರ ದೇವರು.
ಹುನಗುಂದ ನವೆಂಬರ್.28

ಮನುಷ್ಯನ ನಿಸ್ವಾರ್ಥ ಬದುಕಿನಲ್ಲಿ ಸುಖ, ಶಾಂತಿ ನೆಮ್ಮದಿ ಸದಾಕಾಲ ಆರೋಗ್ಯ-ಭಾಗ್ಯ ನೆಲಿಸಿರುತ್ತದೆ ಎಂದು ಮುದ್ದೇಬಿಹಾಳ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ಹೇಳಿದರು. ಪಟ್ಟಣದ ಕುಂಬಾರ ಜಾಗೃತ ಮೂರ್ತಿ ಶೀ ನೀಲಗಂಗಾ ದೇವಿಯ ಜಾತ್ರಾ ಮಹೋತ್ಸವ ದಂದು ನಡೆದ ಸಮಾರಂಬದ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತ ಮನುಷ್ಯ ಕ್ರೂರಿ, ಅವನ ನಡೆ-ನುಡಿಯಲ್ಲಿ ಬರೀ ಸ್ವಾರ್ಥ ದ್ವೇಷ ಅಸೂಹೆ ತುಂಬಿಕೊಂಡಿದೆ. ಮಹಾನ್ ಶರಣರು-ಸಂತರು ಹಾಕಿಕೊಟ್ಟ ತತ್ವಾದರ್ಶಗಳ ಜೊತೆಗೆ ವರ್ಷದುದ್ದಕ್ಕೂ ನಡೆಯುವ ಧಾರ್ಮಿಕ ಕಾರ್ಯಕ್ರಮ, ಪುರಾಣ ಪ್ರವಚನ, ಧಾನ-ಧರ್ಮ ಸಹಾಯ ಸಹಕಾರ ನಿಸ್ವಾರ್ಥದ ಜೀವನವನ್ನ ನಾವು ರೂಢಿಸಿ ಕೊಳ್ಳಬೇಕು ಎಂದರು. ದೇವಸ್ಥಾನ ಜೀರ್ಣೋದ್ದಾರ ಸಮೀತಿ ಅಧ್ಯಕ್ಷ ಶಿವಪ್ಪ ಯಡಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮತ್ತೊಬ್ಬರನ್ನು ನಾವು ಗೌರವಿಸಿದಾಗ ನಮಗೆ ಗೌರವ ಸಿಗಲು ಸಾಧ್ಯ, ಜಾತ್ರೆ ಹಬ್ಬ ಹರಿದಿನಗಳಲ್ಲಿ ನಮ್ಮ ಕೈಲಾದಷ್ಟು ಸಹಾಯ ಸಹಕಾರ ನೀಡಿದಾಗ ಮತ್ತೊಬ್ಬರು ಇದರಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಮಾಜ ಕೆಲಸಕ್ಕೆ ಕೈಜೋಡಿಸಬೇಕು ಎಂದರು. ಸಂಗಮೇಶ್ವರ ಪಾಕದಟ್ಟೆಯಿಂದ ಮಹಿಳೆಯರು ೧೦೧ ಪೂರ್ಣ ಕುಂಭ ಮತ್ತು ಅಡಪಲ್ಲಕ್ಕಿಯು ವಾಧ್ಯ ಮೇಳಗಳ ಮೆರವಣಿಗೆಯೊಂದಿಗೆ ದೇವಸ್ಥಾನ ತಲುಪಿ ತಾಯಿ ನೀಲಗಂಗಾ ದೇವಿಗೆ ಜಲಾಭೀಷೇಕ ನೆರವೇರಿತು.ನಂತರ ಸಾಮೂಹಿಕ ಜಂಗಮ ಪ್ರಸಾದ ನಡೆಯಿತು. ಈ ಸಂದರ್ಭದಲ್ಲಿ ಚಳಗೇರಿಯ ವೀರಸಂಗಮೇಶ್ವರ ಸ್ವಾಮಿಗಳು, ಡಾ. ಶಿವಕುಮಾರ ಸ್ವಾಮಿಗಳು, ಡಾ. ನೀಲಕಂಠ ಶಿವಾಚರ‍್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಹಿರಿಯರಾದ ಶೇಖರಪ್ಪ ಬಾದವಾಡಗಿ ಮಾತನಾಡಿದರು. ಪುರಸಭೆ ಸದಸ್ಯೆ ಬಸಮ್ಮ ಚಿತ್ತವಾಡಗಿ, ಸಮೀತಿ ಉಪಾಧ್ಯಕ್ಷ ಚನಬಸಪ್ಪ ಕರಂಡಿ ಉಪಸ್ಥಿತರಿದ್ದರು. ಹಿರಿಯ ಶರಣ ಶಿವಪುತ್ರಪ್ಪ ತರಿವಾಳ ಪ್ರಾರ್ಥನೆ ಹಾಡಿದರು. ನಾಗಪ್ಪ ಕರಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಕರಂಡಿ ನಿರೂಪಿಸಿದರು. ಬಿ.ವೈ.ಕೊಡಗಾನೂರ ಸ್ವಾಗತಿಸಿ ವಂದಿಸಿದರು. ಶಂಕ್ರಪ್ಪ ನೆರಬೆಂಚಿ, ಪಾರ್ವತಿ ಇಲಕಲ್ಲ, ಶಾಂತಪ್ಪ ಹೊಸಮನಿ, ಬಸವರಾಜ ಕುಂಬಾರ, ಗಿರಿಮಲ್ಲಪ್ಪ ಹಳಪೇಟಿ, ಮುತ್ತಪ್ಪ ನಿರ್ವಾಣಿ, ಜ್ಯೋತಿ ನೆರಬೆಂಚಿ, ಅತ್ತೆವ್ವ ನೆರಬೆಂಚಿ, ಸಂಗಪ್ಪ ತೋಟದ, ಶಿವಪ್ಪ ಸುಂಕಾಪೂರ, ಶಿವಕುಮಾರ ಚಿತ್ತರಗಿ, ಚಂದ್ರು ಗಂಗೂರ, ಅಮರೇಶ ಕರಂಡಿ ಮತ್ತು ಇತರರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ