ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆರೆ ತುಂಬುವಂತೆ – ಕೆ.ಬಿ.ಜಿ.ಎನ್.ಎಲ್ ಆಲಮಟ್ಟಿ ಇವರಿಗೆ ಮನವಿ ಸಲ್ಲಿಸಿದರು.
ಬೇಕಿನಾಳ ಆ.08

ತಾಳಿಕೋಟೆ ತಾಲೂಕಿನ ಬೇಕಿನಾಳ ಹಾಗೂ ಬೂದಿಹಾಳ ಕೆರೆ ತುಂಬುವ ಸಲುವಾಗಿ ಕೆ.ಬಿ.ಜೆ .ಎನ್.ಎಲ್ ಆಲಮಟ್ಟಿ ಇವರಿಗೆ ಮನವಿ ಸಲ್ಲಿಸಿದರು. ಬೇಕಿನಾಳ ಅಸ್ಕಿ ಬೂದಿಹಾಳ ಗ್ರಾಮ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಗೆ ಈ ವರ್ಷ ಮಳೆ ಬಾರದ ಕಾರಣ ರೈತರಿಗೆ ಬಹಳ ತೊಂದರೆ ಆಗಿದೆ. ಆದ್ದರಿಂದ ಕೆರೆ ತುಂಬಿದರೆ ರೈತರಿಗೆ ಬಹಳ ಅನುಕೂಲ ಆಗುತ್ತದೆ ಕಂಗಾಲಾದ ರೈತರಿಗೂ ದೊಡ್ಡ ಅನುಕೂಲ ಮಾಡಿ ಕೊಟ್ಟಂತೆ ಆಗುತ್ತದೆ. ಕೆರೆಗಳಿಗೆ ಆದಷ್ಟು ಬೇಗನೆ ನೀರು ಹರಿಸಿದ್ದರೆ ಇದರ ಬಗ್ಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರು ಸಂಗಮೇಶ ಸಗರ ಈ ಸಂದರ್ಭದಲ್ಲಿ ಮಾತನಾಡಿದರು. ತಾಲೂಕ ಅಧ್ಯಕ್ಷರಾದ ಶ್ರೀ ಶೈಲ ವಾಲಿಕಾರ, ಊರಿನ ರೈತ ಮುಖಂಡರು ಕಾಸಯ್ಯ ಹಿರೇಮಠ. ಶಿವು ಸಜ್ಜನ್. ರಾಜುಗೌಡ ಕರಕಳ್ಳ. ಪ್ರಭುಗೌಡ ಪಾಟೀಲ್. ಈರಣ್ಣ ಸಿಂಪಿಗೆರ. ದೇವರಾಜ್ ಕುಲಕರ್ಣಿ. ಮಲ್ಲಪ್ಪ ಮುದೇನೂರು. ಇತರರು ಪಾಲ್ಗೊಂಡಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ ಆಯ್.ಬೆನಾಳಮಠ. ಬೇಕಿನಾಳ.ಕಲಕೇರಿ

