ಡಯಾಲಿಸಿಸ್ ಸ್ಟಾಪ್ ನರ್ಸ್ ಗಳ ಮುಷ್ಕರ.
ತರೀಕೆರೆ ನವೆಂಬರ್.29
ದಿನಗೂಲಿ ನೌಕರರಾಗಿ ತರೀಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಯಾಲಿಸಿಸ್ ಸ್ಟಾಪ್ ನರ್ಸ್ ಗಳನ್ನು 2017 ರಿಂದ ಕೆಲಸ ಮಾಡುತ್ತಿರುವವರಿಗೆ ಸೇವಾ ಭದ್ರತೆ ನೀಡದೆ, ಇ ಎಸ್ ಐ ಹಾಗೂ ಪಿ ಎಫ್ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಆದ್ದರಿಂದ ಇವರಿಗೆ ಸೇವಾ ಭದ್ರತೆ ನೀಡಬೇಕು, ಮೂಲ ವೇತನ ದಂತೆ 25000 ರೂ.ಗಳು ವೇತನ ನೀಡಬೇಕು,
ಕರೋನ ನಂತರ ದಿಂದ ಇವರಿಗೆ ಕೇವಲ 10273 ರೂ.ವೇತನ ನೀಡುತ್ತಿದ್ದು. ಹಾಗೂ ಎರಡು ವರ್ಷಗಳಿಂದಲೂ ಸಹ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದೆ ಸರ್ಕಾರ ಮತ್ತು ಸರ್ಕಾರೇತರ ಕಂಪನಿಗಳು ಶೋಷಣೆ ಮಾಡುತ್ತಿವೆ.ಆದ್ದರಿಂದ ದಿನಾಂಕ 30-.11.-2023.ರಿಂದ ಕರ್ತವ್ಯ ಸ್ಥಗಿತ ಗೊಳಿಸಿ. ರಾಜ್ಯ ಮಟ್ಟದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಮಾಡುವುದಾಗಿ ಡಯಾಲಿಸಿಸ್ ಘಟಕದಲ್ಲಿ ಕರ್ತವ್ಯ ಮಾಡುತ್ತಿರುವ ಸ್ಟಾಪ್ ನರ್ಸ್ ಸಿಬ್ಬಂದಿಯವರು ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ