ಅ, 6 ರಂದು ಹರಿಹರ ಪೀಠದ ಲಿಂಗಾಯತ ಪಂಚಮಸಾಲಿ ನೂತನ ರಾಜ್ಯಾಧ್ಯಕ್ಷ ಪದಗ್ರಹಣ ಸಮಾರಂಭ.

ಹುನಗುಂದ ಸ.27

ಹರಿಹರ ಪೀಠದ ವೀರಶೈವ ಲಿಂಗಾಯತ ಪಂಚಸಾಲಿ ಸಮಾಜದ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಮತ್ತು ಪ್ರಮಾಣ ವಚನ ಕಾರ್ಯಕ್ರಮವು ಅ. ೬ ರಂದು ರವಿವಾರ ಹರಿಹರ ಪೀಠದಲ್ಲಿ ಜರುಗಲಿದೆ ಎಂದು ನೂತನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ತಿಳಿಸಿದರು.ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಏಳನೇ ರಾಜ್ಯಾಧ್ಯಕ್ಷರನ್ನಾಗಿ ಸೆ.೧ ರಂದು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅ.೬ ರಂದು ಹರಿಹರ ಪೀಠದಲ್ಲಿ ಸುಮಾರು ಹತ್ತು ಸಾವಿರ ಜನರು ಮಧ್ಯದಲ್ಲಿ ನನ್ನ ಪದಗ್ರಹಣ ಮತ್ತು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು. ಈ ಕಾರ್ಯಕ್ರಮಕ್ಕೆ ರಾಜ್ಯದ ಹಿರಿಯ ಮುಖಂಡರು, ರಾಜ್ಯ ಯುವ ಘಟಕ, ಮಹಿಳಾ ಘಟಕ ಹಾಗೂ ನೌಕರರ ಘಟಕ ಸೇರಿದಂತೆ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು. ಪದಗ್ರಹಣ ಪಡೆದ ನಂತರ ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಐಎಎಸ್ ಮತ್ತು ಕೆಎಎಸ್ ತರಬೇತಿ ಶಿಬಿರವನ್ನು ನಡೆಸಲಾಗುವುದು, ಪ್ರತಿ ತಿಂಗಳು ಒಂದು ಜಿಲ್ಲೆಯ ಒಂದು ಗ್ರಾಮದ ಕಡು ಬಡತನದ ಮನೆಗೆ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ, ತಾಲೂಕಾಧ್ಯಕ್ಷ ಸೇರಿದಂತೆ ಎಲ್ಲರೂ ಗ್ರಾಮ ವಾಸ್ತವ್ಯ ಮಾಡುವ ಯೋಜನೆಯನ್ನು ಹಾಕಿ ಕೊಳ್ಳಲಾಗಿದೆ, ಅದರ ಜೊತೆಗೆ ಈಗಾಗಲೇ ಹರಿಹರ ಪೀಠದಲ್ಲಿ ಸಾವಿರಾರು ಭಕ್ತರಿಗೆ ಪ್ರತಿ ನಿತ್ಯ ಪ್ರಸಾದ ವ್ಯವಸ್ಥೆ ನಡೆಯುತ್ತಿದೆ ಆ ಪ್ರಸಾದ ವ್ಯವಸ್ಥೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುವಂತೆ ನಾವು ನೀವೆಲ್ಲರೂ ಮಾಡಬೇಕಿದೆ ಎಂದರು.ಈ ಸಂದರ್ಭದಲ್ಲಿ ಹುನುಗುಂದ ತಾಲೂಕ ಘಟಕದ ವತಿಯಿಂದ ನೂತನ ರಾಜ್ಯಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.ತಾಲೂಕ ಅಧ್ಯಕ್ಷ ಮಹಾಂತೇಶ ನಾಡಗೌಡರ, ಜಿಲ್ಲಾ ಉಪಾಧ್ಯಕ್ಷ ಸಂಗಣ್ಣ ಹುನ್ನಳ್ಳಿ, ಬಸವರಾಜ ಗೊನ್ನಾಗರ,ಬಸವರಾಜ ಪಾಟೀಲ, ಮಹಾಂತೇಶ ಹೊದ್ಲೂರ, ಸಣ್ಣಪ್ಪ ಹೊರಪೇಟಿ, ಮುತ್ತಣ್ಣ ದರಗಾದ, ಮಹಾಂತೇಶ ಬಾವಿಕಟ್ಟಿ, ಮಲ್ಲನಗೌಡ ಗೌಡರ, ಸುನೀಲ ತಗ್ಗಿ, ನೂತನ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಬಾದವಾಡಗಿ, ಮಲ್ಲನಗೌಡ ನಾಡಗೌಡರ, ಶಿಕ್ಷಕ ಬಸವರಾಜ ಗೌಡರ, ಪತ್ರಕರ್ತ ಮಲ್ಲಿಕಾರ್ಜುನ ಬಂಡರಗಲ್ಲ ಸೇರಿದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ..ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button