ಹಿರಿಯ ವಕೀಲರ ಮಾರ್ಗದರ್ಶನ ಯುವ ವಕೀಲರಿಗೆ ಅವಶ್ಯ – ಶೀಘ್ರವೇ ವಕೀಲರ ಭವನ ನಿರ್ಮಾಣವಾಗಲಿ.

ಹುನಗುಂದ ಡಿಸೆಂಬರ್.4

ಸಮಾಜದಲ್ಲಿ ವಕೀಲರ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು.ಅದನ್ನು ವಕೀಲರು ಘನತೆಯಿಂದ ಕಾಪಾಡ ಕೊಂಡು ಹೋಗುವ ಮೂಲಕ ವೃತ್ತಿ ಗೌರವವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾದೀಶ ಹನುಮಂತರಾವ್ ಕುಲಕರ್ಣಿ ಹೇಳಿದರು.ರವಿವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ವಕೀಲರ ಪಾತ್ರ ಹಿರಿದು. ಹಿರಿಯ ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ಯುವ ವಕೀಲರಿಗೆ ಹೆಚ್ಚಿಗೆ ಮಾತನಾಡಲು ಅವಕಾಶ ಮಾಡಿ ಕೊಡಬೇಕು.ವಕೀಲರು ನಿತ್ಯ ಅಧ್ಯಯನಶೀಲ ಮನೋಭಾವನೆಯನ್ನು ರೂಢಿಸಿ ಕೊಳ್ಳಬೇಕು.ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದ್ದಲ್ಲಿ ಮಾತ್ರ ವೃತ್ತಿ ಪರತೆ ಹೆಚ್ಚಾಗಲು ಸಾಧ್ಯ,ಅನ್ಯಾಯಕ್ಕೆ ಒಳಗಾಗಿ ನ್ಯಾಯವನ್ನರಿಸಿ ಬರುವ ನಿಮ್ಮಗಳ ಕಕ್ಷದಾರರಿಗೆ ತ್ವರಿತಗತಿಯಲ್ಲಿ ನ್ಯಾಯವನ್ನು ಕೊಡಿಸುವ ಕಾರ್ಯ ಮಾಡಬೇಕು ಎಂದರು. ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್.ಮಿಟ್ಟಲಕೋಡ ಮಾತನಾಡಿ, ನಾವು ಇಂದಿನ ತಂತ್ರಜ್ಞಾನಕ್ಕೆ ಹೊಂದಿಕೊಂಡು ಕಾರ್ಯ ನಿರ್ವಹಿಸ ಬೇಕಾಗಿದೆ.ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ನಮ್ಮೊಂದಿಗೆ ಮುಕ್ತವಾಗಿ ಚರ್ಚಿಸಿ ಜೊತಗೆ ಸಲಹೆ ಸೂಚನೆಗಳನ್ನು ನೀಡಿ. ಪಟ್ಟಣಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ಅವಶ್ಯಕತೆಯಿದ್ದು, ಆದಷ್ಟು ಬೇಗನೆ ನ್ಯಾಯಾಲಯದ ಅನುಮತಿ ಪಡೆಯಲು ಪ್ರಯತ್ನಿಸುತ್ತೇನೆ ಎಂದರು.ಪಟ್ಟಣದ ವಕೀಲರ ಸಂಘದ ಪ್ರಕಾಶ ಕಠಾಣಿ ಮಾತನಾಡಿ, ವಕೀಲರ ಬಹು ದಿನಗಳ ಬೇಡಿಕೆ ಮತ್ತು ಅವಶ್ಯವಾಗಿರುವ ವಕೀಲರ ಭವನ ನಿರ್ಮಾಣ ಶೀಘ್ರಗತಿಯಲ್ಲಿ ಆಗಬೇಕು.ಯುವ ವಕೀಲರು ಹಿರಿಯ ವಕೀಲರ ಮಾರ್ಗ ದರ್ಶವನ್ನು ಪಡೆದು ನ್ಯಾಯಾಂಗದ ವಿಷಯದಲ್ಲಿ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿ ಸಮಾಜದಲ್ಲಿ ಉತ್ತಮ ವಕೀಲರಾಗಬೇಕು ಎಂದರು.ಹೆಚ್ಚುವರಿ ದಿವಾಣಿ ನ್ಯಾಯಾದೀಶ ಬಸವರಾಜ ನೇಸರಿಗಿ, ಇಳಕಲ್ ವಕೀಲರ ಸಂಘದ ಅಧ್ಯಕ್ಷ ಬಿ.ಎ.ಆವಟಿ,ವಕೀಲರ ಸಂಘದ ಮಾಜಿ ಅಧ್ಯಕ್ಷ ಮಾಧವ ದೇಶಪಾಂಡೆ,ವಕೀಲರಾದ ವಿ.ಆರ್. ಜನಾದ್ರಿ, ಎಸ್.ಎಸ್. ತಾರಿವಾಳ,ಎಂ.ಎಸ್. ಪಾಟೀಲ, ಎಂ.ಎಂ. ಅವಾರಿ ಸೇರಿದಂತೆ ಇತರರು ಮಾತನಾಡಿದರು.ಈ ಸಂದರ್ಭದಲ್ಲಿ ವಕೀಲರ ಹಿತರಕ್ಷಣೆ ಕಾಯ್ದೆ ಜಾರಿಗೆ ಮುಂದಾಗಬೇಕು ಎಂದು ರಾಜ್ಯ ಸರ್ಕಾರವನ್ನು ವಕೀಲರು ಸಂಘದಿಂದ ಒತ್ತಾಯಿಸಲಾಯಿತು. ಪಿ.ಬಿ. ಹುಲ್ಯಾಳ, ವಿ.ಬಿ.ಧಮ್ಮೂರಮಠ, ಎಸ್.ಆರ್. ಕೊಳ್ಳಿ, ಎಂ.ಎ. ಸಂಗಮಕರ್ ಬಿ.ಆರ್.ಬಾಬು, ಉಮಾ ಬಳ್ಳೊಳ್ಳಿ ಆರ್.ಎಚ್. ಕೊಕಾಟೆ, ಸಂಜು ಐಹೊಳ್ಳಿ ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button