ಅಂಗವಿಕಲರ ಮಾಶಾಸನ ಹೆಚ್ಚಿಸಲು ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ – ಡಾ. ಜಿ.ಎಚ್. ಶ್ರೀ ನಿವಾಸ್.
ತರೀಕೆರೆ ಡಿಸೆಂಬರ್.4
ಮನಸಿದ್ದರೆ ಮಾರ್ಗ ನಿಮ್ಮಲ್ಲಿ ಗುರಿ ಸಾಧನೆಯ ಛಲ ಇರಬೇಕು ಎಂದು ಶಾಸಕ ಜಿ ಎಚ್ ಶ್ರೀನಿವಾಸ್ ಹೇಳಿದರು. ಅವರು ಭಾನುವಾರ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಪುರಸಭೆ ಮತ್ತು ಶಾಸಕರ ಅನುದಾನದಲ್ಲಿ ತ್ರಿಚಕ್ರ ವಾಹನವನ್ನು ವಿತರಿಸುತ್ತಿದ್ದೇವೆ. ಸರ್ಕಾರ ನೀಡುತ್ತಿರುವ ಸೌಕರ್ಯಗಳನ್ನು ಸದುಪಯೋಗ ಮಾಡಿ ಕೊಳ್ಳಿರಿ, ನಿಮ್ಮ ಬೇಡಿಕೆಯಂತೆ ಎಲ್ಲಾ ವಿಶೇಷ ಚೇತನರಿಗೆ ಮಾಶಾಸನ ಹೆಚ್ಚಿಸಲು ಮಾನ್ಯ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪ ವಿಭಾಗ ಅಧಿಕಾರಿ ಡಾ. ಕೆ ಜೆ ಕಾಂತರಾಜ್ ಮಾತನಾಡಿ ಜಗತ್ತಿನಲ್ಲಿ 16% ಜನರು ವಿಶೇಷ ಚೇತನರಿದ್ದಾರೆ ಎಲ್ಲಾ ಕಡೆಯೂ ಸಹ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಸಹಾಯ ಸಹಕಾರ ಮಾಡುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಕೀಳರಿಮೆ ಬಿಟ್ಟು ಮುಂದುವರಿಯಬೇಕು ಅಂಗವಿಕಲತೆ ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂದು ಹೇಳಿದರು. ತರೀಕೆರೆ ಪುರಸಭಾ ಅಧ್ಯಕ್ಷರಾದ ಪರಮೇಶ್, ವೈದ್ಯಧಿಕಾರಿ ಡಾ. ದೇವರಾಜ್, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಗೀತಾ ಶಂಕರ್ ಮಾತನಾಡಿದರು, ಪುರಸಭಾ ಉಪಾಧ್ಯಕ್ಷರಾದ ರೆಹನಾ ಪರ್ವೀನ್, ಮುಖ್ಯ ಅಧಿಕಾರಿಗಳಾದಂತ ಎಚ್ ಪ್ರಶಾಂತ್, ಅಜ್ಜಂಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಮೇಶ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಟಿಎನ್ ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಗೋವಿಂದಪ್ಪ, ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶಶಿಕುಮಾರ್, ಜನ ಚಿಂತನ ಸಂಸ್ಥೆಯ ವೀರಭದ್ರಪ್ಪ, ವಿಕಲ ಚೇತನರ ಸಂಯೋಜಕರಾದ ಅಕ್ರಂ ಪಾಷಾ, ಕ್ರಿಸ್ತ ದಯಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಕಲ ಚೇತನರಿಗೆ ಸನ್ಮಾನ ಮಾಡಲಾಯಿತು. ಸವಲತ್ತುಗಳನ್ನು ವಿತರಣೆ ಮಾಡಲಾಯಿತು ಹಾಗೂ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿತ್ತು. ಗಂಗಾಧರ ಪ್ರಾರ್ಥಿಸಿ, ಸಿ ಡಿ ಪಿ ಓ ಚರಣ್ ರಾಜ್ ಸ್ವಾಗತಿಸಿ ಸಾವಿತ್ರಮ್ಮ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ