ಕಲೆ ಉಳಿಸಿ ಬೆಳೆಸುವ ಕಲಾವಿದರ ಬದುಕಿಗೆ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.
ಬೆಳದೇರಿ ಡಿಸೆಂಬರ್.4
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬೆಳದೇರಿ ಗ್ರಾಮದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನ ಮಾಡಲಾಯಿತುರಂಗಭೂಮಿ ಕಲಾವಿದರ ಕುಟುಂಬಗಳಲ್ಲಿನ ಬಡತನ, ಹಸಿವು ಅವರನ್ನು ರಂಗಭೂಮಿ ಕ್ಷೇತ್ರಕ್ಕೆ ಕಾಲಿಡುವಂತೆ ಮಾಡುವ ಮೂಲಕ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಲಾವಿದರಾಗುವವರ ಬದುಕಿಗೆ ಸರ್ಕಾರಆಸರೆ ನೀಡಬೇಕು ಎಂದು ಜಿ ಶಾಂತಮ್ಮ ಬಸವರಾಜ ಗ್ರಾಮ ಪಂಚಾಯಿತಿ ಸದಸ್ಯರು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯ ನಗರ -ಬಳ್ಳಾರಿ ಹಾಗೂ ಉತ್ಸಾವಾಂಬ ಸಾಂಸ್ಕೃತಿಕ ಕಲಾ ತಂಡ ಹೂವಿನ ಹಡಗಲಿ ಇವರ ಸಹಯೋಗದಲ್ಲಿ ಬೆಳದೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ವಿ ವಿರುಪಾಕ್ಷಪ್ಪ ಮತ್ತು ತಂಡದಿಂದ ಹಮ್ಮಿಕೊಂಡಿದ್ದ ರಕ್ತ ರಾತ್ರಿ ನಾಟಕ ಹಾಗೂ ಮೌನೇಶ್ ತಂಡದಿಂದ ಸಮೂಹ ನೃತ್ಯ ತಾಲೂಕಿನ ಬೆಳದೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಕಲಾವಿದರ ಜೀವನ, ಬದುಕಿನ ಬವಣೆ, ಅನುಭವಿಸುವ ಅವಮಾನ, ಯಾತನೆ, ವೃದ್ಯಾಪ್ಯದಲ್ಲಿ ಎದುರಾಗುವ ಕಷ್ಠಗಳನ್ನು ಮನ ಮುಟ್ಟುವ ರೀತಿಯಲ್ಲಿ ಕಲಾವಿದರ ಜೀವನ ಸಂಕಷ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.ರಾಜಶೇಖರ್ ಗೌಡ ನಾಗರಾಜ್ ಆಚಾರ್ಯರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರಂಗಪ್ಪ ತಾ.ಮಾ.ಸದಸ್ಯರು, ದುರುಗಮ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ, ಗಂಗಮ್ಮ ಮಾಜಿ ಗ್ರಾ.ಪಂ ಅಧ್ಯಕ್ಷ, ಪಾಲಕ್ಷಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಭಾಗ್ಯಮ ಗ್ರಾ ಪ.ಸದಸ್ಯರು , ಪರಮೇಶಪ್ಪ ಶ್ರೀ ಕಾಂತ , ಪ್ರಶಾಂತ್ ಪಿಡಿಒ, ಉಮಾಪತಿ, ಇತರರು ವೇದಿಕೆಯಲ್ಲಿಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ