ಅಂಬೇಡ್ಕರ್ ವಾದವನ್ನು ಮೈಗೂಡಿಸಿ ಕೊಳ್ಳದೇ ಹೋದರೆ ಈ ದೇಶಕ್ಕೆ ಸೋಲಾಗುತ್ತೆ – ಸಚಿವ ಹೆಚ್.ಸಿ.ಮಹದೇವಪ್ಪ.

ಹೊಸಪೇಟೆ ಡಿಸೆಂಬರ್.5

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಪ.ಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮವನ್ನು ವಿಜಯನಗರ ಜಿಲ್ಲಾ ಚೆಲುವಾದಿ ಮಹಾಸಭಾ ವೇದಿಕೆ ವತಿಯಿಂದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಮೈಸೂರು ಉಸ್ತವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ ಸಂವಿಧಾನ ಪೀಠಿಕೆ ಓದುವುದ‌ರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.ನಿಮ್ಮನ್ನು ಒಡೆದು ಆಳಲಿಕ್ಕೆಶ್ರೇಣಿಕೃತ ಸಮಾಜ ತುದಿಗಾಲಲ್ಲಿ ನಿಂತಿದ್ದಾರೆ ಅಂಥವರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ವೋಟ್ ಕೊಡೋರು ನೀವು ಅಧಿಕಾರದಲ್ಲಿ ಇನ್ಯಾರೋ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಸಮಾಜಕ್ಕೆ ನಾಯಕತ್ವ ಇಲ್ಲವೋ ಆ ಸಮಾಜ ಅನಾಥವಾಗುತ್ತೆ ಬಹು ಮುಖ್ಯವಾಗಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಸಂಘಟನಾತ್ಮಕ ಹೋರಾಟಗಳನ್ನು ಮಾಡಬೇಕು. ಅಂಬೇಡ್ಕರ್ ವಾದ ಬಲಗೊಳಿಸದೇ ಹೋದರೆ ಅಂಬೇಡ್ಕರ್ ವಾದವನ್ನು ಮೈಗೂಡಿಸಿ ಕೊಳ್ಳದೆ ಹೋದರೆ ಈ ದೇಶಕ್ಕೆ ಸೋಲಾಗುತ್ತೆ ಎಂದರು.ರಾಜಕೀಯ ಉದ್ದೇಶದಿಂದ ಓಟಿನ ಲಾಭದಿಂದ ಹೇಳುವಂತೆ ಮೀಸಲಾತಿಯತೀರ್ಮಾನಗಳು ಸಂವಿಧಾನ ಆಶೆಯಕ್ಕೆ ಅನುಗುಣವಾಗಿ ಇರುವುದಿಲ್ಲ. ಅವೆಲ್ಲವೂ ಕಣ್ಣೊರೆಸುವ ತಂತ್ರಗಳು ನಮ್ಮ ಮುಗ್ಧ ಜನರು ಅದಕ್ಕೆ ಮಾರು ಹೋಗಬಾರದು.

ಬಾಬಾ ಸಾಹೇಬರು ಇಡೀ ಭಾರತವನ್ನು ಸಮರ್ಥವಾಗಿ ಕಟ್ಟಲಿಕ್ಕೆ ವೈಯಕ್ತಿಕ ಜೀವನವೇ ಇರಲಿಲ್ಲ ಕುಟುಂಬದ ಬದುಕೇ ಇರಲಿಲ್ಲ.ಅವರಿಗೆ ತಮ್ಮ ಕೊನೆಯ ಉಸಿರಿರೋ ತನಕ ನನ್ನ ಜನರ ವಿಮೋಚನೆಗಾಗಿ ದುಡಿಯುತ್ತೇನೆ ಎಂದು ಹೇಳಿ ಆರೋಗ್ಯವನ್ನು ಲೆಕ್ಕಿಸದೆ ನಮಗೋಸ್ಕರ ದೇಶಕೋಸ್ಕರ ಅವರನ್ನು ಅವರೇ ಆರ್ಪಿಸಿ ಕೊಂಡಿದ್ದರು. ಅಂತಹ ಮಹಾನ್ ವ್ಯಕ್ತಿಯ ಚಿಂತನೆಗಳು ಹೋರಾಟಗಳು ಅವರ ವಾರಸುದಾರರ ನಮ್ಮಿಂದಲೇ ಸಾಧ್ಯ. ಸಾಮಾಜಿಕ ನ್ಯಾಯದ ರಥ ಹಿಂದಕ್ಕೆ ಹೋಗದಂತೆ ಅಸ್ವಸ್ಥರೆಲ್ಲರೂ ಒಗ್ಗಟ್ಟಾಗಿಸೇರಿ ಮುಂದಕ್ಕೆ ಳೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಮಾಜಿ ಶಾಸಕರು ನೆಹರೂ ಓಲೇಕಾರ ಮಾತನಾಡಿ ಅಸ್ಪಶ್ಯ ಸಮಾಜಗಳು ಎಲ್ಲಾ ಒಗ್ಗಟ್ಟಾಗಿ ಮುನ್ನಡೆಯಬೇಕು. ಸರ್ಕಾರವು ರಾಜ್ಯದಲ್ಲಿ ಒನಕೆ ಓಬವ್ವ ಶಾಲೆ ಆರಂಭಿಸಬೇಕು. ರಾಜ್ಯದಲ್ಲಿ ನೂರು ಎಕರೆ ಜಾಗ ಮೀಸಲಿಟ್ಟು ಅದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 160 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಬೇಕು. ಅಂಬೇಡ್ಕರ್ ಟ್ರಸ್ಟ್ ಗೆ ಒಂದು ಸಾವಿರ ಎಕರೆ ನೀಡಬೇಕು. ಈ ಮೂಲಕ ಬಾಬಾ ಸಾಹೇಬ ವಿಚಾರಧಾರೆ ಪ್ರಸಾರದಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಬೇಕು ಎಂದು ಸಚಿವರ ಮುಂದೆ ಸರ್ಕಾರಕ್ಕೆ ಒತ್ತಾಯಿಸಿದರು.ಜಿಲ್ಲೆಯ ಪ್ರತಿ ತಾಲೂಕಿನಿಂದ ಎಸ್ಎಸ್ಎಲ್‌ಸಿ ಮತ್ತು ಪಿ ಯು ಸಿಯ 20 ವಿದ್ಯಾರ್ಥಿನಿಗಳನ್ನು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ ಹಂಪಿ ಯುನಿವರ್ಸಿಟಿಯ ಚಿನ್ನಸ್ವಾಮಿ ಸೋಸಲೆ ಮಾತನಾಡಿದರು, ವೇದಿಕೆ ಮೇಲೆ ನಿವೃತ್ತ ಣಎಎಸ್ ಸಿದ್ದಯ್ಯಬೌದ್ಧ ಬಿಕ್ಕು ಬಂತೇಜಿ, ಎ ಮಾನಯ್ಯ ಮುಂಡ್ರಿಗಿ ನಾಗರಾಜ್ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ರಾಜಶೇಖರ್ ಹಿಟ್ನಾಳ್, ಎಚ್ಎನ್ಎಫ್ ಹಿಮಾಮ್ ನಿಯಾಜಿ, ಸೋಮಶೇಖರ್ ಬಣ್ಣದ ಮನೆ ಅವರು ಇತರರು ಮುಖಂಡರು ಹಾಗೂ ಚಲವಾದಿ ಮುಖಂಡರು ಪ್ರಗತಿಪರ ಚಿಂತಕರು ಬುದ್ಧಿಜೀವಿಗಳ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್ ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button