ಡಿ.11. ರಂದು ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭ.
ಹುನಗುಂದ ಡಿಸೆಂಬರ್.9

ಪಟ್ಟಣದ ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಡಿ.೧೧ ರಂದು ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ಬಸ್ ನಿಲ್ದಾಣದ ಹತ್ತಿರ ಆಧ್ಯಾ ನಗರದ ಸಂಘದ ಆವರಣದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೀರೇಶ ಉಂಡೋಡಿ ತಿಳಿಸಿದರು. ಶನಿವಾರ ಪಟ್ಟಣದ ನೂತನ ಸಂಘದ ಕಟ್ಟಡದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದ ಪುರಿ ಮಹಾ ಸ್ವಾಮಿಗಳು,ಕಾಗಿನಲೆ ಗುರುಪೀಠದ ತಿಂಥಣಿ ಬ್ರಿಡ್ಜ್ ಶಾಖಾ ಮಠದ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳು,ಚಿತ್ತರಗಿ ಸಂಸ್ಥಾನಮಠ ಇಳಕಲ್ಲದ ಗುರು ಮಹಾಂತ ಶ್ರೀಗಳು,ನಂದವಾಡಗಿ ಆಳಂದ ಮಹಾಂತೇಶ್ವರ ಮಠದ ಮಹಾಂತ ಲಿಂಗ ಶಿವಾಚಾರ್ಯ ಸ್ವಾಮಿಗಳು,ಮನ್ಸೂರ ರೇವಣಸಿದ್ದೇಶ್ವರ ಮಹಾ ಸಂಸ್ಥಾನ ಮಠದ ಬಸವರಾಜ ದೇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಹಾಲಿ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಣಿಜ್ಯ ಮಳಿಗೆಯನ್ನು ಉದ್ಘಾಟಿಸಲಿದ್ದು.ವಿಧಾನ ಪರಿಷತ್ ಸದಸ್ಯ ಎಮ್.ಟಿ.ಬಿ.ನಾಗರಾಜ ಬ್ಯಾಂಕ್ ಲಾಕರ್ ಉದ್ಘಾಟಿಸಲಿದ್ದಾರೆ, ಶಾಸಕ ಎಚ್.ವಾಯ್.ಮೇಟಿ ಗಣಕಯಂತ್ರದ ಉದ್ಘಾಟನೆ ಮಾಡಲಿದ್ದಾರೆ, ಶಾಸಕ ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮದ ಜ್ಯೋತಿಯನ್ನು ಬೆಳಗಿಸಲಿದ್ದು, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸಹಕಾರಿ ಧ್ವಜಾರೋಹಣ ನೆರ ವೇರಿಸಲಿದ್ದಾರೆ,ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಿದ್ದು.ಬದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಿದ್ದು, ಸಂಘದ ಅಧ್ಯಕ್ಷ ವೀರೇಶ ಉಂಡೋಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಸಹಕಾರಿ ಸಂಘಗಳ ಜಂಟಿ ನಿರ್ದೇಶಕ ಕಲ್ಲಪ್ಪ ಓಬಣ್ಣಗೋಳ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ, ಎಸ್.ಆರ್.ಎನ್.ಇ ಪೌಂಡೇಶನ್ ಅಧ್ಯಕ್ಷ ಎಸ್.ಆರ್.ನವಲಿ ಹಿರೇಮಠ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ ತಪಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಜಿ.ಎನ್.ಪಾಟೀಲ, ಮುಖ್ಯ ಕಾರ್ಯ ನಿರ್ವಾಹಕ ಶರಣಗೌಡ ಪಾಟೀಲ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು.ಈ ಒಂದು ಸಮಾರಂಭಕ್ಕೆ ತಾಲೂಕಿನಿಂದ ಸುಮಾರು ೮ ರಿಂದ ೧೦ ಸಾವಿರ ಸಹಕಾರಿಗಳು ಮತ್ತು ಸಮಾಜ ಬಾಂಧವರು ಸೇರಲಿದ್ದು.ಸಮಾಜದ ಬಂಧುಗಳು ಮತ್ತು ಸಹಕಾರಿ ರಂಗದ ಮುಖಂಡರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದರು.ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಮಹಾಂತಗೌಡ ಪಾಟೀಲ ತೊಂಡಿಹಾಳ,ನಾಗಪ್ಪ ಕಳ್ಳಿಗುಡ್ಡ,ನೀಲಪ್ಪ ತಪೇಲಿ,ಮಹಾಂತೇಶ ಮುಕ್ಕಣ್ಣವರ,ಸಿದ್ರಾಮಪ್ಪಗೌಡ ಗೌಡರ,ವಿಠ್ಠಲ ತಿಮ್ಮಾಪುರ,ಮಲ್ಲಿಕಾರ್ಜುನ ಡಂಬಳ,ಸಂಗಪ್ಪ ಚಿತ್ತವಾಡಗಿ,ಮುಖ್ಯ ಕಾರ್ಯ ನಿವಾಹಕ ಭರಮಣ್ಣ ರಾಮವಾಡಗಿ ಉಪಸ್ಥಿತರಿದ್ದರು.
ಬಾಕ್ಸ್ ಸುದ್ದಿ-ಕನಕದಾಸರ ಸೌಹಾರ್ದ ಪತ್ತಿನ ಸಹಕಾರಿ ಸಂಘ ೨೦೧೦ರಲ್ಲಿ ಕೆಲವೇ ಶೇರುಗಳೊಂದಿಗೆ ಆರಂಭವಾದ ಬ್ಯಾಂಕ್ ೧೩ ವರ್ಷದಲ್ಲಿ ಸ್ವಂತ ಕಟ್ಟಡವನ್ನು ಹೊಂದುವ ಮಟ್ಟಿಗೆ ಅಭಿವೃದ್ದಿಯನ್ನು ಹೊಂದಿದ್ದು.ಸಧ್ಯ ೨೫೦೦ ಸದಸ್ಯರನ್ನು ಹೊಂದಿ ೮೦ ಕೋಟಿ ವ್ಯವಹಾರವನ್ನು ಮಾಡುತ್ತಿದ್ದು.೨೮ ಕೋಟಿ ದುಡಿಯುವ ಬಂಡಾವಳವನ್ನು ಹೊಂದಿದೆ.ಇದಕ್ಕೆ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರವಿದೆ.ವೀರೇಶ ಉಂಡೋಡಿ ಅಧ್ಯಕ್ಷರು ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹುನಗುಂದ.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.
ಬಂಡರಗಲ್ಲ
ಹುನಗುಂದ