ಉಚಿತ ಆರೋಗ್ಯ ಕ್ಯಾಂಪ್ ಮಾಡಿಸುವುದರ ಮೂಲಕ ಶಾಸಕರು ಚಾಲನೆ ನೀಡಿದರು.
ಮೊಳಕಾಲ್ಮುರು ಡಿಸೆಂಬರ್.10

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದನಮ್ಮ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರ ನೇತೃತ್ವ ಹಾಗೂ ಸಹಕಾರದೊಂದಿಗೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರು,ಇವರ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದರ ನಿಮಿತ್ತವಾಗಿ ವಿಶೇಷವಾಗಿ ಉಚಿತ ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಕಲ್ಲು ಇತರೆ ಕಾಯಿಲೆಗಳಿಗೆ ನುರಿತ ವೈದ್ಯರಿಂದ ತಪಾಸಣೆ ಮೊಳಕಾಲ್ಮೂರು ಕ್ಷೇತ್ರದ ಜನತೆ ಈ ಮಹತ್ವಾಕಾಂಕ್ಷೆಯ ಆರೋಗ್ಯ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಿ. ಎಂದು ಮೊಳಕಾಲ್ಮೂರು ಪಟ್ಟಣದಲ್ಲಿ ರಾಯದುರ್ಗ ಹೋಗುವ ರಸ್ತೆಯಲ್ಲಿ ಉರ್ದು ಶಾಲೆಯ ಆವರಣದಲ್ಲಿ ಮನುಷ್ಯನಿಗೆ ಕಾಯಿಲೆಗೆ ಸಂಬಂಧಪಟ್ಟ ಎಲ್ಲಾ ವೈದ್ಯಾಧಿಕಾರಿಗಳು ಬಂದು ಉಚಿತ ಆರೋಗ್ಯ ಕ್ಯಾಂಪು ಮಾಡಿಸಿದ್ದಾರೆ.

ತಾಲೂಕಿನಲ್ಲಿ ಕೂಲಿ ಮಾಡುವ ಜನರ ಹೆಚ್ಚಾಗಿ ಕಾಣುತ್ತಿದ್ದಾರೆ ಎಸ್.ಸಿ ಎಸ್.ಟಿ ಜನಾಂಗ ದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಮತ್ತು ಎಲ್ಲಾ ಬಡವರ್ಗದ ನಾಗರಿಕರಿಗೆ ಈ ಉಚಿತ ಆರೋಗ್ಯ ಕ್ಯಾಂಪು ಜನ ಸಾಮಾನ್ಯರಿಗೆಲ್ಲ ಅನುಕೂಲವಾಗುತ್ತದೆ ಎಂದು ಮತ್ತು ರಾಂಪುರ ಭಾಗಕ್ಕೆ ಸಹ ಸುಮಾರು 100 ಹಳ್ಳಿಗಳು ಬರುತ್ತಿದ್ದು ಆ ಭಾಗದ ನಾಗರಿಕರಿಗೆ ಸಹ ಉಚಿತ ಆರೋಗ್ಯದ ಕ್ಯಾಂಪು ಮಾಡಬೇಕೆಂದು ಮತ್ತು ಆರು ತಿಂಗಳಿಗೊಮ್ಮೆ ಇಂತಹ ಉಚಿತ ಆರೋಗ್ಯ ಕ್ಯಾಂಪ್ ಮಾಡಿದರೆ ಜನ ಸಾಮಾನ್ಯರಿಗೂ ಎಲ್ಲಾ ಬಡ ವರ್ಗದ ನಾಗರಿಕರಿಗೂ ಅನುಕೂಲವಾಗುತ್ತದೆ ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಜನ ಸಾಮಾನ್ಯರ ಮೇಲೆ ಪ್ರೀತಿ ಅಭಿಮಾನ ಗೌರವ ಮತ್ತು ಬಡವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಶಾಸಕರು ಈ ಸಂದರ್ಭದಲ್ಲಿ ಮೊಳಕಾಲ್ಮುರು ಪಟ್ಟಣದ ಗುತ್ತಿಗೆದಾರರಾದ ಖಾದರ್ ಮಾಜಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಪ್ರಕಾಶ್ ಹಾಗೂ ದೇವಣ್ಣ ಕಾಟನ್ ಹಳ್ಳಿ ಲಾಯರ್ ಎಲ್ಲಾ ನಾಗರಿಕರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಉಚಿತ ಆರೋಗ್ಯ ಕ್ಯಾಂಪ್ ಗಳಿಗೆ ಭಾಗವಹಿಸಿದ್ದರು.
ತಾಲೂಕ ವರದಿಗಾರ:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು