ಡಿ. 25 ರಿಂದ 27 ರವರೆಗೆ ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವ.
ಇಂಡಿ ಡಿಸೆಂಬರ್.11
![](https://i0.wp.com/sknewskannada.in/wp-content/uploads/2023/12/IMG-20231211-WA0022.jpg?resize=420%2C552&ssl=1)
ಪಟ್ಟಣದ ಆರಾಧ್ಯ ದೈವ ಶ್ರೀ ಸದ್ಗುರು ಶಾಂತೇಶ್ವರ ಜಾತ್ರಾ ಮಹೋತ್ಸವ ಡಿ. 25.ರಿಂದ 27.ರವರೆಗೆ ಅದ್ದೂರಿಯಾಗಿ ನೆರವೇರಲಿದೆ ಎಂದು ಶಿರಷ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘಂದ್ರ ಶಿವಾಚಾರ್ಯರು, ಶಾಂತೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 25 ರಂದು ಧರ್ಮಸಭೆ ಹಾಗೂ ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಾಹ ಆಗುವ ವರನ ವಯಸ್ಸು 21, ವಧುವಿನ ವಯಸ್ಸು 18 ತುಂಬಿರಬೇಕು. ಡಿಸೆಂಬರ್ 19.ರವರೆಗೆ ಶಾಂತೇಶ್ವರ ದೇವಸ್ಥಾನದ ಕಾರ್ಯಾಲಯ ಹಾಗೂ ಶಾಂತೇಶ್ವರ ಸೌಹಾರ್ದ ಪತ್ತಿನ ಸಹಕಾರಿಯಲ್ಲಿ ಹೆಸರು ನೋಂದಾಯಿಸ ಬಹುದಾಗಿದೆ ಎಂದು ತಿಳಿಸಿದರು. ಡಿ.26 ರಂದು ಬೆಳಿಗ್ಗೆ 8.ಘಂಟೆಗೆ ದೇವಸ್ಥಾನದಲ್ಲಿ ಅಕ್ಕಿಪೂಜೆ ನಂತರ ಬಾಸಿಂಗ ಮೆರವಣಿಗೆ, 27.ರಂದು ಗ್ರಾಮದ ಕಳ್ಳಿಮಠದ ಪಾದಗಟ್ಟಿ ಯಿಂದ ನಂದಿಕೋಲ ಮೆರವಣಿಗೆ ಆರಂಭವಾಗಿ ದೇವಸ್ಥಾನ ತಲುಪಲಿದೆ. ಜಾತ್ರಾ ಮಹೋತ್ಸವದ ಪ್ರಯುಕ್ತ ನವೆಂಬರ್ 27.ರಿಂದಲೇ ಗೌಡಗಾಂವ ಮಹಾಲಿಂಗೇಶ್ವರ ಮಠದ ಶಾಂತವೀರ ಶಿವಾಚಾರ್ಯರಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪುರಾಣ ಕಾರ್ಯಕ್ರಮ ಸಾಯಂಕಾಲ 7.ರಿಂದ ಪ್ರತಿ ದಿನವೂ ನಡೆಯುತ್ತಲಿದೆ ಎಂದು ವಿವರಿಸಿದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ