ಜಿಂದಾಲ್ ಕಂಪನಿಗೆ ನೀರು ಪೂರೈಕೆ ರೈತರ ವಿರೋಧಿ – ಪಂಪಹೌಸಗೆ ರೈತರ ಮುತ್ತಿಗೆ.
ಹುನಗುಂದ ಡಿಸೆಂಬರ್.13





ಕಾಲುವೆಗಳಿಗೆ ನೀರು ಹರಿಸದೇ ಜಿಂದಾಲ್ ಕಂಪನಿಗೆ ನೀರು ಹರಿಸಲಾಗುತ್ತಿದೆ.ಜಿಂದಾಲಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪಂಪ್ ಹೌಸ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ತಾಲ್ಲೂಕಿನ ಮರೋಳ ಗ್ರಾಮದ ಹತ್ತಿರವಿರುವ ಜಿಂದಾಲ್ ಕಂಪನಿಗೆ ನೀರು ಪೂರೈಸುವ ಪಂಪ್ ಹೌಸ್ ಗೇಟಿಗೆ ಹಾಕಲಾಗಿದ್ದ ಬೀಗ ಒಡೆದು ರೈತರು ಒಳನುಗ್ಗಿದರು.ಒಳಗೆ ಮುನ್ನುಗ್ಗುತ್ತಿದ್ದ ರೈತರನ್ನು ಪಂಪಹೌಸ್ ಭದ್ರತಾ ಸಿಬ್ಬಂದಿ ಪ್ರತಿರೋಧ ವ್ಯಕ್ತಪಡಿಸಿದರು.ಇದರಿಂದ ಮಾತಿನ ಚಕಮಕಿ ನಡೆಯಿತು. ಗೇಟ್ ಮುರಿದು ಒಳನುಗ್ಗಿ,ನೀರು ಪೂರೈಕೆಯನ್ನು ಸ್ಥಗಿತ ಗೊಳಿಸಬೇಕು ಎಂದು ಆಗ್ರಹಿಸಿದರು. ಅಲ್ಲಿನ ಸಿಬ್ಬಂದಿ ಸ್ಥಗಿತ ಗೊಳಿಸಿದರು.ಬೆಳೆಗಳಿಗೆ ನೀರಿಲ್ಲದೇ ಒಣಗುತ್ತಿವೆ. ನೀರು ಬಿಡುವಂತೆ ಮನವಿ ಮಾಡಿದರೂ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿದ್ದಾರೆ. ಆದರೆ, ಜಿಂದಾಲ್‌ಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡರಾದ ಗುರು ಗಾಣಿಗೇರ, ರಸೂಲ್‌ಸಾಬ್ ತಹಶೀಲ್ದಾರ್,ಬಸನಗೌಡ ಪೈಲ್ ಸೇರಿದಂತೆ ವಿವಿಧ ಗ್ರಾಮಗಳ ೫೦.ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ