ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ 10. ಕ್ಕೂ ಹೆಚ್ಚು ಗ್ರಾಮಗಳ ರೈತರಿಂದ ಪ್ರತಿಭಟನೆ.
ಹುನಗುಂದ ಡಿಸೆಂಬರ್.13

ಮರೋಳ ಏತ ನೀರಾವರಿ ಯೋಜನೆ ಕಾಲುವೆಗಳಿಗೆ ಕೃಷ್ಣಾ ಭಾಗ್ಯ ಜಲ ನಿಗಮ ಏಕಾ ಏಕಿಯಾಗಿ ನೀರು ಹರಿಸೋದ್ದನ್ನು ಸ್ಥಗಿತ ಗೊಳಿಸಿದ ಹಿನ್ನಲೆಯಲ್ಲಿ ಕಾಲವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಮಂಗಳವಾರ ತಾಲೂಕಿನ ೧೦ ಕ್ಕೂ ಹೆಚ್ಚು ಗ್ರಾಮಗಳ ರೈತರು ಬಸವ ಧರ್ಮಪೀಠದ ಚನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ರೈತ ದೇಶದ ಬೆನ್ನಲುಬು.ಪ್ರತಿ ವರ್ಷ ಹುನಗುಂದ ತಾಲೂಕಿಗೆ ಕಡಿಮೆ ಪ್ರಮಾಣದ ಮಳೆಯಾಗುತ್ತಿದ್ದು.ಅದರಲ್ಲೂ ಈ ಬಾರಿ ಹಿಂಗಾರು ಮತ್ತು ಮುಂಗಾರು ಕೈಕೊಟ್ಟಿದ್ದು.ಇಲ್ಲಿನ ರೈತರು ಏತ ನೀರಾವರಿ ನೀರನ್ನೇ ನಂಬಿ ಬಿತ್ತನೆ ಮಾಡಿರುತ್ತಾರೆ.ರೈತ ಬೆಳೆದರೆ ಮಾತ್ರ ನಮ್ಮ ಹೊಟ್ಟೆ ಅನ್ನ.ಅವರು ಒಂದು ವರ್ಷ ಸುಮ್ನೆ ಕುಳಿತರೇ ಮಣ್ಣು ತಿನ್ನೋ ಪರಸ್ಥಿತಿ ಬರುತ್ತೇ ತಾಲ್ಲೂಕಿನ ರೈತರು ಬರಗಾಲ ದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ.ಅವರ ಹೊಲಗಳಿಗೆ ನೀರು ಹರಿಸಿ ಅದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡ ಗುರು ಗಾಣಗೇರ ಮಾತನಾಡಿ ರೈತರ ಹೊಲಗಳಿಗೆ ನೀರು ಸ್ಥಗಿತ ಗೊಳಿಸಿ ಕೈಗಾರಿಕೆಗಳಿಗೆ ನೀರು ಪೂರೈಸುತ್ತಿರುವುದು ಯಾವ ನ್ಯಾಯ ? ಕಾಲುವೆಗಳ ವ್ಯಾಪ್ತಿಯಲ್ಲಿನ ರೈತರು ಸಾಲಶೂಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿದ್ದು, ಬೆಳೆ ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿದೆ. ಇಂತಹ ಸಮಯದಲ್ಲಿ ನೀರು ಸ್ಥಗಿತ ಗೊಳಿಸದರೆ ರೈತರು ಪರಸ್ಥಿತಿ ಏನು ? ಈ ಬಾರಿ ಮಳೆ ಕೊರತೆಯಿಂದ ಇರುವ ತೇವಾಂಶದಲ್ಲಿ ಗೋಧಿ, ಜೋಳ, ಕಡಲೆ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಈಗ ಬೆಳೆಗಳಿಗೆ ನೀರಿನ ಅವಶ್ಯಕತೆಯಿದ್ದು,ರೈತರ ಹಿತ ದೃಷ್ಟಿಯಿಂದ ವಾರಾಬಂಧಿ ಯೋಜನೆ ಮೂಲಕ ಫೆಬ್ರುವರಿ ೨೦.ರ ವರೆಗೆ ಕಾಲುವೆಗಳ ಮೂಲಕ ನೀರು ಹರಿಸಬೇಕು ಎಂದು ಒತ್ತಾಯಿಸಿದರು.ಎರಡು ದಿನಗಳ ಒಳಗಾಗಿ ನೀರು ಪೂರೈಸದಿದ್ದರೆ ತಾಲ್ಲೂಕಿನ ಎಲ್ಲಾ ರೈತರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.ಮರೋಳ, ಹಾವರಗಿ, ಹುಲ್ಲಳ್ಳಿ,ಧನ್ನೂರು, ಅಡಿಹಾಳ, ಕಮದತ್ತ, ಎಮ್ಮಟ್ಟಿ, ಇದ್ದಲಗಿ, ಬಿಸನಾಳ, ಬೆಳಗಲ್, ಹಡಗಲಿ, ಕಡಿವಾಲ, ಜಾಲಕಮಲದಿನ್ನಿ, ಪಾಲಥಿ ಸೇರಿದಂತೆ ಇತರೆ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮುತ್ತಪ್ಪ ನಂದವಾಡಗಿ, ಬಸು ಕಡಿವಾಲ, ಚಂದ್ರಗೌಡ ಬಳ್ಳಾರಿ, ಬಸವರಾಜ ದೇಸಾಯಿ, ಮಹಾಂತೇಶ ನಾಡಗೌಡ, ಶೇಖಪ್ಪ ಭಜಂತ್ರಿ, ಸಿದ್ಧನಗೌಡ ಗೌಡರ, ಎಂ.ಪಿ.ಹಾವರಗಿ ಇತರರು ಪಾಲ್ಗೊಂಡಿದ್ದರು.
ಬಾಕ್ಸ್ ಸುದ್ದಿ-ಈ ವೇಳೆ ರೈತರಿಗೆ ಮತ್ತು ತಹಶೀಲ್ದಾರ ಮಧ್ಯ ಮಾತಿನ ಚಕಮಕಿ ನಡೆದು ನೀರು ಹರಿಸುವರಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆನೇ ಇಲ್ಲವೆಂದು ರೈತರು ಪಟ್ಟು ಹಿಡಿದಾಗ ರೈತರ ಆ ಬಿಗಿಪಟ್ಟಿಗೆ ಮಣಿದ ತಾಲೂಕಾಡಳಿತ ಶೀಘ್ರವೇ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಮೇಲುಸ್ತುವಾರಿ ಸಮಿತಿ ನಿರ್ಣಯದಂತೆ ನೀರನ್ನು ಸ್ಥಗಿತಗೊಳಿಸಲಾಗಿದೆ.ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.ಸಧ್ಯ ರೈತರ ಹೊಲಗಳಿಗೆ ನೀರು ಹರಿಸುವ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವೆ.ನಿಂಗಪ್ಪ ಬಿರಾದಾರ.ತಹಶೀಲ್ದಾರ ಹುನಗುಂದ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ