ಕಲಕೇರಿ ಗ್ರಾಮದ ಹಳೆಯ ಸರ್ಕಾರಿ ದವಾಖಾನೆಯಲ್ಲಿ ಅಕ್ರಮ ಚಟುವಟಿಕೆಗೆ – ಕಡಿವಾಣ ಯಾವಾಗ…..?
ಕಲಕೇರಿ ಜು.19

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಹಳೆಯ ಸರ್ಕಾರಿ ದವಾಖಾನೆ10 ರಿಂದ 15 ವರ್ಷಗಳ ಕಾಲ ಈ ಸರ್ಕಾರಿ ದವಾಖಾನೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಕಾರಣ ಸಾಯಂಕಾಲ ಆದರೆ ಸಾಕು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದರಿಂದ. ಈ ದವಾಖಾನೆಯಲ್ಲಿ ಅವ್ಯಾಹತವಾಗಿ ನಡಿತಾ ಇದೆ. ಇದರಿಂದ ಸುತ್ತ ಮುತ್ತ ಇರುವ ಜನರಿಗೆ ಬಹಳ ಮುಜುಗರ ಆಗಿದೆ. ಸರ್ಕಾರಿ ಹಳೆಯ ದವಾಖಾನೆಗೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿವರೆಗೂ ಇದರ ಬಗ್ಗೆ ಯಾವುದು ಕ್ರಮ ಕೈಗೊಂಡಿಲ್ಲ ಈಗಲಾದರೂ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕಲಕೇರಿ ಗ್ರಾಮಸ್ಥರು ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಹಲವಾರು ಗ್ರಾಮಸ್ಥರು ಹಳೆಯ ಸರಕಾರಿ ದವಾಖಾನೆ ಬಂದಾಗಿಂದ ದಿನ ನಿತ್ಯ ಇಲ್ಲಿ ನಡೆಯುವ ಹಲವಾರು ಅಕ್ರಮ ಚಟುವಟಿಕೆಗಳ ಸುತ್ತ ಮುತ್ತ ಇದ್ದ ಜನರಿಗೆ ಬಾಳ ಬೇಸರ ಆಗಿದೆ.

ಸುಸಂಸ್ಕೃತ ಕುಟುಂಬದ ಪರಿಸ್ಥಿತಿ ಹೇಳ ತೀರದ ಆಗಿದೆ. ತಕ್ಷಣ ಹಳೆಯ ಸರ್ಕಾರಿ ದವಾಖಾನೆ ಯಾವ ರೀತಿ ಆಗಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಊರಿನ ಗ್ರಾಮಸ್ಥರು ತಿಳಿಸಿದರು. ಮತ್ತು ಇಲ್ಲಿ ನಡೆಯುವ ಸಂಜೆ ಆದರೆ ಸಾಕು ಮಧ್ಯಪಾನ, ಇಸ್ಪೀಟ್, ಅನೇಕ ಅಕ್ರಮ ಚಟುವಟಿಕೆಗಳ ನಡಿತಾ ಇದೆ ಎಂದು ಗ್ರಾಮಸ್ಥರು ತಿಳಿಸಿದರು.ಹಣಮಂತ ವಡ್ಡರ ಇವರು ಹಳೆಯ ಸರಕಾರಿ ದವಾಖಾನೆಯಲ್ಲಿ ಅನೈತಿಕ ಚಟುವಟಿಕೆಗಳು ನಡಿತಾ ಇದೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಬೇಗ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರ, ಸುಧಾಕರ್ ಅಡಿಕಿ ಗ್ರಾಮ ಪಂಚಾಯಿತಿಯ ಸದಸ್ಯ ಇವರು ಕೂಡ 15 ವರ್ಷಗಳ ಕಾಲ ಹಾಳು ಬಿದ್ದ ಹಳೆಯ ಸರಕಾರಿ ದವಾಖಾನೆ ಇಲ್ಲಿವರೆಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಿರುಗಿ ನೋಡದ ಕಾರಣ ಸಂಜೆ 6 ಗಂಟೆಯಿಂದ ಮಧ್ಯರಾತ್ರಿ ಒಂದು ಗಂಟೆವರೆಗೂ ಹಲವಾರು ಚಟುವಟಿಕೆಗಳನ್ನು ನಡಿತಾ ಇದೆ ಇದರ ಬಗ್ಗೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಊರಿನ ಹಿರಿಯರಾದ ಕುಮಾರ್ ದೇಸಾಯಿ, ಶರಣು ಕೌದಿ,ಯಲ್ಲಪ್ಪ ಹೊಸಮನಿ, ಶಿವರಾಜ್ ದೊರೆ, ರಮೇಶ್ ಕೌದಿ,ಯಲ್ಲಾ ಲಿಂಗ ಮಾದರ್, ದೇವು ವಡ್ಡರ, ರಾಮನಗೌಡ ವಣಕ್ಯಾಳ, ಹಲವಾರು ಗ್ರಾಮಸ್ಥರು ಸೇರಿ ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ. ತಾಳಿಕೋಟೆ.