ಕೂಲಿ ಮೊತ್ತ ಬಿಡುಗಡೆಗೆ ಒತ್ತಾಯಿಸಿ ಪತ್ರ ಚಳುವಳಿ.
ಹಗರಿಬೊಮ್ಮನಹಳ್ಳಿ ಡಿಸೆಂಬರ್.16

ಹಗರಿಬೊಮ್ಮನಹಳ್ಳಿ ನರೇಗಾ ಕಾರ್ಮಿಕರ ಕೂಲಿ ಮೊತ್ತ(ಹಣ)ವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಾ ಗ್ರಾಕೂಸ್ ಸಂಘಟನೆಯವರು ಕಾರ್ಮಿಕರಿಂದ ಪತ್ರ ಚಳುವಳಿ ನಡೆಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಹಾಕುವ ಮೂಲಕ ಒತ್ತಾಯಿಸಿದರು.ಈ ಕುರಿತು ತಾಲೂಕಾ ಗ್ರಾಕೂಸ್ ಸಂಚಾಲಕಿ ಎಂ.ಬಿ. ಕೊಟ್ರಮ್ಮ ಮಾತನಾಡಿ, ಕಳೆದ ಎರಡು ತಿಂಗಳಿಂದ ಕೂಲಿ ಕಾರ್ಮಿಕರು ಕೆಲಸ ಮಾಡಿರುವ ವೇತನ ನೀಡುವಲ್ಲಿ ವಿಳಂಬವಾಗಿರುವು ದರಿಂದ ಕಾರ್ಮಿಕರ ಜೀವನ ಕಷ್ಟಕರವಾಗಿದೆ. ಕೂಡಲೇ ಬಾಕಿ ಕೂಲಿ ಮೊತ್ತ(ಹಣ)ವನ್ನು ಬಿಡುಗಡೆ ಗೊಳಿಸಬೇಕು. ಸರ್ಕಾರ ಬರಗಾಲ ಹಿನ್ನೆಲೆಯಲ್ಲಿ ಹೆಚ್ಚುವರಿ 50ಮಾನವ ದಿನ ನೀಡುತ್ತೇವೆ ಎಂದು, ಈವರೆಗೂ ಯಾವ ಕಾರ್ಮಿಕರಿಗೂ ಹೆಚ್ಚುವರಿ ಮಾನವ ದಿನಗಳನ್ನು ನೀಡದೆ ಕಾರ್ಮಿಕರನ್ನು ನಿರ್ಲಕ್ಷಿಸಿದೆ. ಕೂಡಲೇ ಈ ಎರಡು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಲಾಗಿದೆ ಎಂದರು.ತಾಲೂಕಿನ ಸೊನ್ನ, ಚಿಲಗೋಡು, ಹಂಪಾಪಟ್ಟಣ, ಪಿಲ್ಲೋಬನಹಳ್ಳಿ, ವಲ್ಲಭಾಪುರ, ಕೋಡಿಹಳ್ಳಿ ಸೇರಿ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು 1500.ಕ್ಕೂ ಹೆಚ್ಚು ಪತ್ರಗಳನ್ನು ಹಾಕಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು. ಸಂಚಾಲಕಿ ಅಕ್ಕಮಹಾದೇವಿ, ಶಿಲ್ಪಾ ಮಾತನಾಡಿದರು. ಕಾರ್ಮಿಕರಾದ ಚಿಗರಿ ಹನುಮಂತಪ್ಪ, ಕ್ಯಾದಿಗಿಹಳ್ಳಿ ಪಕ್ಕೀರಪ್ಪ, ತಳವಾರ ಗಂಗಪ್ಪ, ದೊಡ್ಡಬಸಪ್ಪ, ಬಾಣದ ವಿರುಪಾಕ್ಷ, ಶೇಖರಪ್ಪ, ದ್ರಾಕ್ಷಾಯಿಣಿ, ಕಲಾವತಿ, ಶಾಂತಮ್ಮ, ಪಾರ್ವತಮ್ಮ, ಹನುಮಕ್ಕ, ಉಮೇಶ, ಕಲಾವತಿ, ಹುಲುಗಪ್ಪ, ಚಂದ್ರಗೌಡ, ಸಿದ್ದಿಂಗಪ್ಪ, ರಮೇಶ, ಶಿವಣ್ಣ ಇತರರಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ