ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಕ್ಕೆ – ಚಾಲನೆ ಕೋರಿದ ಶಫಿ ಚಾವೂಷ್.
ಮಾನ್ವಿ ಫೆ.26

ಮಾನ್ವಿಯಲ್ಲಿ ಫೆಬ್ರವರಿ 27 ರಂದು ನಡೆಯುವ 10 ನೇ. ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿಗೆ ಪತ್ರಕರ್ತ ಶಫಿ ಚಾವೂಷ್ ಚಾಲನೆ ನೀಡಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಕಂದಾಯ ಕಚೇರಿಯಲ್ಲಿ ಪ್ರಚಾರದ ವಾಹನಕ್ಕೆ ಚಾಲನೆ ನೀಡಿ, ಮಾನ್ವಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದರು.
ಮಾನ್ವಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರವಿಕುಮಾರ್ ಪಾಟೀಲ್ ವಕೀಲ ಮಾತನಾಡಿ, 10 ನೇ. ಕನ್ನಡ ಸಾಹಿತ್ಯ ಸಮ್ಮೇಳನ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಮಾನ್ವಿ ತಾಲೂಕಿನ ಪ್ರತಿಯೊಬ್ಬರು ಭಾಗವಹಿಸಿ ಸಮ್ಮೇಳನ ನೋಡಲು ಬನ್ನಿ ಎಂದು ಕರೆ ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ