ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕುರಿತು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು-ಟಿ.ದೇವಪ್ಪ ಕರೆ.
ಕೂಡ್ಲಿಗಿ ಸಪ್ಟೆಂಬರ್.9





ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು, ಅನಿವಾರ್ಯ ಕಾರಣಕ್ಕೆ ಮಾತ್ರ ಸದ್ಭಳಕೆ ಮಾಡಿಕೊಳ್ಳಬೆಕಿದೆ. ಮೊಬೈಲ್ ಗೆ ದಾಸರಾದರೆ ಅಧೋಗತಿ ಸಾಧ್ಯ, ಆದರೆ ಪುಸ್ತಕದ ದಾಸರಾದರೆ ಸದ್ಗತಿ ಸಮ್ಮತಿ ಸಾಧ್ಯ ಎಂದು. ಪ್ರಗತಿ ಪರ ರೈತರಾದ ಪ್ರಭು ಸ್ವಪ್ಪಿನ ಮಠ, ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಸೆ.8 ರಂದು ಪಟ್ಟಣದ ಶ್ರೀರಾಘವೇಂದ್ರ ಪ್ಯಾರಾಮೆಡಿಕಲ್ ಕಾಲೇಜ್ ನಲ್ಲಿ, ಜರುಗಿದ ಅಂತಿಮ ತರಗತಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.

ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು, ಅನಿವಾರ್ಯ ಇದ್ದಾಗ ಮಾತ್ರ ಮೊಬೈಲ್ ಸದ್ಭಳಕೆ ಮಾಡಿಕೊಳ್ಳಬೇಕಿದೆ. ಪುಸ್ತಕದ ಕಡೆ ಒಲವು ತೋರಿಸಿದರೆ, ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬಹುದು. ಜ್ಞಾನವಂತರಾಗಬಹುದು ಹಾಗೂ ಸಮಾಜದಲ್ಲಿ ಗಣ್ಯಾತಿ ಗಣ್ಯರಾಗಬಹುದು. ಪುಸ್ತಕದ ಗೀಳಿನಿಂದಾಗಿ ವ್ಯಕ್ತಿತ್ವ ವಿಕಸನ ಸಾಧ್ಯ, ಅನಗತ್ಯ ಮೊಬೈಲ್ ಗೀಳಿನಿಂದಾಗಿ ವ್ಯಕ್ತಿತ್ವ ಹಾಗೂ ವ್ಯಕ್ತಿಯ ಅಧೋಗತಿ ಸಾಧ್ಯ ಎಂದರು. ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ಸಾಕಾರಗೊಳಿಸಬೇಕಿದೆ, ಸಮಾಜದ ನಿರೀಕ್ಷೆಗಳನ್ನು ಸಫಲಗೊಳಿಸಬೇಕಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯ ಕಲಿಸಿದಾತ ಹೆತ್ತವರು ಸಮಾಜದ ಋಣ ತೀರಿಸಬೇಕು, ಅದಕ್ಕಾಗಿ ಸಚ್ಚಾರಿತ್ರ್ಯ ಹಾಗೂ ಉತ್ತಮ ಸಂಸ್ಕಾರ ಹೃದಯ ಶ್ರೀಮಂತಿಕೆ ರೂಡಿಸಕೊಳ್ಳಬೇಕಿದೆ ಎಂದರು.

ಹಿರೇಮಠ ಕಾಲೇಜಿನ ಉಪನ್ಯಾಸಕ ಟಿ.ದೇವಪ್ಪ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತಾಧಿಕಾರಿ, ಹೆಚ್ .ಡಿ.ಸತ್ಯಮೂರ್ತಿ ವಹಿಸಿದ್ದು. ಶ್ರೀಮತಿ ಅಂಬಿಕಾ, ಉಪನ್ಯಾಸಕರಾದ ಅಮೀರ್ ಭಾಷ, ಮಹೇಶ, ಶಿವಕುಮಾರ, ಗಣೇಶ, ಕರಿಬಸಮ್ಮ ವೇದಿಕೆಯಲ್ಲಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ವಿದ್ಯಾರ್ಥಿನಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು, ರೇಖಾ ವಂದಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ