ಶ್ರೀರಾಮಕೃಷ್ಣರು ಸಾಕ್ಷಾತ್ ನೆಲೆಸಿರುವ ಭೂ ವೈಕುಂಠ ಬೇಲೂರು ಮಠ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ನ.12

ಶ್ರೀರಾಮಕೃಷ್ಣ ಪರಮಹಂಸರು ಸಾಕ್ಷಾತ್ ಆಗಿ ನೆಲೆಸಿರುವ ಭೂ ವೈಕುಂಠ ಬೇಲೂರು ಮಠ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಹೇಳಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ತಾವು ಕೈಗೊಂಡ ಕಲ್ಕತ್ತಾದ ಬೇಲೂರು ಮಠ ಮತ್ತು ದಕ್ಷಿಣೇಶ್ವರ ಯಾತ್ರೆಯ ಬಗ್ಗೆ ತಮ್ಮ ಅನುಭವಗಳನ್ನು ಭಕ್ತರಿಗೊಂದಿಗೆ ಹಂಚಿ ಕೊಂಡರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ, ಎಂ. ಗೀತಾ ನಾಗರಾಜ್, ನವೀನ್ ಕುಮಾರ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಹೂವಿನ ಲಕ್ಷ್ಮೀದೇವಮ್ಮ, ಅಂಬುಜಾ ಶಾಂತಕುಮಾರ್, ವೆಂಕಟಲಕ್ಷ್ಮೀ, ಮಂಜುಳಾ ಉಮೇಶ್, ಸಿ.ಎಸ್ ಭಾರತಿ ಚಂದ್ರಶೇಖರ್, ಜಿ.ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಡಿ.ಕಾವೇರಿ, ಸರಸ್ವತಿ, ಪಂಕಜಾ, ಗೀತಾ ವೆಂಕಟೇಶ್, ಸುಧಾಮಣಿ, ಚೇತನ್, ಪುಷ್ಪಲತಾ, ಬಸವರಾಜ್,ಲತಾ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

