ಪಟ್ಟಣದ ಊರಮ್ಮ ಹೊಂಡದ ಹತ್ತಿರದ ಶ್ರೀ ಲಕ್ಷ್ಮೀ ನರಸಿಂಹ ಹಾಗೂ ಹಳ್ಳದರಾಯನಿಗೆ ಕಾರ್ತಿಕೋತ್ಸವ ನೆರವೇರಿತು.
ಕೂಡ್ಲಿಗಿ ಡಿಸೆಂಬರ್.20

ಪಟ್ಟಣದ ಊರಮ್ಮ ಹೊಂಡದ ತಟದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಗೆ ಹಾಗೂ ಹಳ್ಳದರಾಯನಿಗೆ ವಿಶೇಷ ಪೂಜೆ,ಅಲಂಕಾರ ದೊಂದಿಗೆ ಕಾರ್ತಿಕೋತ್ಸವವನ್ನು ನೆರವೇರಿಸಲಾಯಿತು. ಮುಂಜಾನೆಯಿಂದಲೇ, ಭಕ್ತರು ಆಗಮಿಸಿ ಹಣ್ಣು,ಕಾಯಿ, ಹೂವುಗಳನ್ನು ಸಮರ್ಪಿಸುವುದರ ಮೂಲಕ ಭಕ್ತಿಭಾವ ಮೆರೆದರು. ಕೆಲ ಭಕ್ತರು ವಿಶೇಷ ಪೂಜೆಯನ್ನು ನೆರವೇರಿಸಿದರು. ಕಾರ್ತಿಕೋತ್ಸವದ ಸಂಭ್ರಮ ವಾದ್ದರಿಂದ ಶ್ರೀಲಕ್ಷ್ಮೀ ನರಸಿಂಹಸ್ವಾಮಿಗೆ ಬೆಳ್ಳಿಯ ಅಲಂಕಾರದೊಡನೆ ವಿವಿಧ ಪುಷ್ಪ ಹಾಗೂ ತುಳಿಸಿ ಹಾರದೊಡನೆ ಅಲಂಕರಿಸಲಾಯಿತ್ತು. ಇದೇ ದೇವಾಲಯದ ಪ್ರಾಂಗಣದಲ್ಲಿರುವ ಹಳ್ಳದರಾಯನಿಗೆ ವಿಶೇಷ ಅಲಂಕಾರ ನೆರವೇರಿಸುವ ಮೂಲಕ ಆಂಜನೇಯ ಸ್ವಾಮಿ ಆಕರ್ಷಕವಾಗಿ ಕಾಣುವಂತೆ ಶೃಂಗರಿಸಲಾಯಿತು. ಪಟ್ಟಣದ ಭಕ್ತರು ಪ್ರಾಣ ದೇವರಿಗೆ ಹಾಗೂ ಉಗ್ರ ನರಸಿಂಹಸ್ವಾಮಿಗೆ ನೂರಾರು ಹಣತೆಗಳನ್ನು ಹಚ್ಚುವ ಮೂಲಕ ದೀಪ ದಾರತಿಯನ್ನು ಅರ್ಪಿಸುವುದು ಸಂಜೆಯಿಂದಲೇ ನಡೆದಿತ್ತು. ಕೆಲವರಿಗೆ ಶ್ರೀಲಕ್ಷ್ಮೀ ನರಸಿಂಹ ಕುಲ ದೇವರು ಆಗಿರುವುದರಿಂದ ವಿಶೇಷ ಪೂಜೆ ನೆರವೇರಿಸುವುದರ ಮೂಲಕ ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಅರ್ಚಕರು ಪ್ರಾಥ:ಕಾಲದಿಂದಲೇ ಬಂದ ಭಕ್ತರಿಗೆ ಮಹಾ ಮಂಗಳಾರತಿಯೊಂದಿಗೆ ತೀರ್ಥ,ಪ್ರಸಾದವನ್ನು ಹಂಚುವುದು ನಡೆದಿತ್ತು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ