ಹೂಡೇಂ ಗ್ರಾಮದಲ್ಲಿ ಶ್ರೀ ಮಲ್ಲಿಯಮ್ಮ ದೇವಿಯ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ.
ಹೂಡೇಂ ಫೆಬ್ರುವರಿ.14

ಕಾನ ಹೊಸಹಳ್ಳಿಯ ಸಮೀಪದ ಹೂಡೇಂ ಗ್ರಾಮದ ಗ್ರಾಮ ದೇವತೆ ಶ್ರೀ ಮಲ್ಲಿಯಮ್ಮ ದೇವಿಯ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಕುಂಭಾಭಿಷೇಕ ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು. ಸೋಮವಾರ ಸಂಜೆ ಗ್ರಾಮದ ವಾಲ್ಮೀಕಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಚಿನ್ನ ಹಗರಿ ನದಿಯಲ್ಲಿ ಗಂಗೆ ಪೂಜೆಗೆ ನೂತನ ವಿಗ್ರಹ ಜೊತೆ ನಡೆದ ಮುತ್ತೈದರಿಂದ ಕಳಸ, ಮಹಿಳೆಯರ ಕುಂಭಮೇಳ ಮೆರಗು ತಂದಿತು. ಮಂಗಳವಾರ ಬೆಳಗ್ಗೆ 5 ಗಂಟೆಗೆ ವಿಗ್ರಹ ಹಾಗೂ ದೇವಿ ಪ್ರಾಣ ಪ್ರತಿಷ್ಠಾಪನೆ, 10.30ಗಂಟೆಗೆ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರಿಂದ ರಾಜ ಗೋಪುರ ಕಳಸರೋಹಣ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳು. ದೇಹಕ್ಕಿಂತ ದೇವಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರು ಭಾರತೀಯರು. ದೇವರು ಎಲ್ಲೆಡೆ ತುಂಬಿದ್ದರೂ ನಾವು ಗುರುತಿಸಲು ಅಸಮರ್ಥರಾಗುತ್ತಿದ್ದೇವೆ. ದೇವರಲ್ಲಿರುವ ತಾಳ್ಮೆ ಸಹನೆ ಗುಣ ಮನುಷ್ಯರಲ್ಲಿ ಬೆಳೆದು ಬರುವ ಅಗತ್ಯವಿದೆ. ದೇವಾಲಯಗಳ ಮೇಲಿರುವ ನಂಬಿಗೆ ದೇವರಲ್ಲಿಟ್ಟಿರುವ ಶೃದ್ಧೆ ಅಪಾರ. ಆಧುನಿಕತೆಯ ಹೆಸರಿನಲ್ಲಿ ಜನರ ಭಾವನೆಗಳನ್ನು ಕಲುಷಿತ ಗೊಳಿಸಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ದೇವಸ್ಥಾನ ಬಳಿ ಕೂಡ್ಲಿಗಿ ಹಿರೇಮಠದ ಪೀಠಾಧ್ಯಕ್ಷ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಾನ ಮಡುಗು ದಾಸೋಹ ಮಠದ ಧರ್ಮಧಿಕಾರಿ ದಾ.ಮ ಐಮಡಿ ಶರಣಾರ್ಯರು ನೇತೃತ್ವದಲ್ಲಿ ಮಠದ ಜಗದೀಶ್ ಸ್ವಾಮಿ, ಮೊಗಲಹಳ್ಳಿ ಗುರುಮೂರ್ತಿ ಶಾಸ್ತ್ರಿ ತಂಡದವರಿಂದ ಗೋಪೂಜಿ, ಹೋಮ, ಹವನ ಸೇರಿ ಪೂಜೆ, ಕುಂಭಾಭಿಷೇಕ, ಗದ್ದುಗೆ ಸ್ಥಾಪನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ನಡೆದವು. ಈ ಸಂದರ್ಭದಲ್ಲಿ ಹೂಡೇಂ ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತಿ ಸಿಬ್ಬಂದಿಗಳು, ಶ್ರೀ ಮಲಿಯಮ್ಮ ದೇವಸ್ಥಾನ ಸಮಿತಿ ಹಾಗೂ ರಾಜಕೀಯ ಮುಖಂಡರು, ಊರಿನ ಗ್ರಾಮಸ್ಥರು, ಉಪಸಿತ್ವಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ.