ವಿಕಲಚೇತನರ ವಿಶೇಷ ಚೇತನರು ಎಂಬ ಪದ ಬಳಕೆ ಮಾಡಿದಂತೆ ದೇವದಾಸಿ ಪದ ಬಗ್ಗೆ ಪರ್ಯಾಯ ಪದ ಬಳಕೆ ಮಾಡಿ – ಬಿ.ಹೆಚ್.ಎಸ್.ರಾಜು ಅಭಿಪ್ರಾಯ.

ಹಂಪಿ ಡಿಸೆಂಬರ್.20

ಸ್ವತಂತ್ರ ಬಂದು 75.ವರ್ಷ ಕಳೆದರೂ ದೇವದಾಸಿ ಎನ್ನುವ ಪದವನ್ನು ಬಳಸಿದರೆ ಅವರ ಮಕ್ಕಳನ್ನು ಯಾರು ಮದುವೆ ಮಾಡಿ ಕೊಳ್ಳುತ್ತಾರೆ. ಹಾಗಾಗಿ ವಿಕಲ ಚೇತನರಿಗೆ ವಿಶೇಷ ಚೇತನರು ಎಂಬ ಪದ ಬಳಕೆ ಮಾಡಿದಂತೆ, ದೇವದಾಸಿ ಎನ್ನುವ ಪದವನ್ನು ಬಳಕೆ ಮಾಡುವುದನ್ನು ನಿಷೇದಿಸಿ ಪರ್ಯಾಯ ಪದವನ್ನು ಬಳಸಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಬಿ ಹೆಚ್ ಎಸ್ ರಾಜು ಅಭಿಪ್ರಾಯ ಪಟ್ಟರು.ನಗರದ ಹಂಪಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಸ್ನೇಹ ಸಂಸ್ಥೆ ಕೂಡ್ಲಿಗಿ ಶನಿವಾರ ಹಮ್ಮಿಕೊಂಡಿದ ‘ಪತ್ರಕರ್ತರ ಮೇಲಿನ ಅಪರಾಧಗಳಿಗೆ ನಿರ್ಭಯವನ್ನು ಕೊನೆ ಗೊಳಿಸುವ ಅಂತಾರಾಷ್ಟ್ರೀಯ ದಿನ ‘ ಹಾಗೂ ಮಕ್ಕಳು ಹಾಗೂ ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಸರಕಾರದಿಂದ ಹೊರಡಿಸಲಾದ ಆದೇಶಗಳ ಬಗ್ಗೆ ಮಾಹಿತಿ ಹಂಚಿ ಕೊಳ್ಳುವ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಪತ್ರಿಕಾ ಮಾಧ್ಯಮಕ್ಕೆ ಬರುವವರು ಕೆಲವೊಂದು ತಯಾರಿಗಳನ್ನು ಮಾಡಿಕೊಂಡು ಬರಬೇಕಾಗುತ್ತದೆ. ಇಲ್ಲವಾದಲ್ಲಿ ಕೇಸ್ ಗಳನ್ನು ಹಾಕಿಸಿ ಕೊಳ್ಳುವ ಸಂಭವ ಹೆಚ್ಚಿರುತ್ತದೆ, ನಾವು ಏನು ಬರೆಯುತ್ತೇವೆ ಎನ್ನುವುದರ ಬಗ್ಗೆ ಗಮನ ಹರಿಸ ಬೇಕಾಗುತ್ತದೆ. ಪತ್ರಕರ್ತರಾದವರು ಸಮಾಜದ ಕಳಕಳಿಯನ್ನು ಹೊಂದಿರಬೇಕು, ಪತ್ರಿಕೆ ಮಾಧ್ಯಮ ಅನ್ನೋದು ಒಂದು ಉದ್ಯಮ, ಹಾಗಂತ ಇಲ್ಲಿ ಯಾರೂ ವಸೂಲಿ ಮಾಡಲು ಬರುವುದಿಲ್ಲ. ಪತ್ರಕರ್ತರು ಪತ್ರಿಕೆ ಸಂಸ್ಥೆಯಲ್ಲಿ ನ್ಯಾಯಯುತವಾಗಿ ಕೆಲಸ ಮಾಡಲು ಬರುತ್ತಾರೆ. ಪತ್ರಕರ್ತರಾದವರು ವಿಷಯದ ಬಗ್ಗೆ ಹೊಳ ಹೊಕ್ಕು ನೋಡಿ ಸುದ್ದಿಗಳನ್ನು ಮಾಡಬೇಕು ಎಂದು ಹೇಳಿದರು.ಸಂಸ್ಥೆ ನಿರ್ದೇಶಕರಾದ ರಾಮಾಂಜನೇಯ ಅವರು ಪ್ರಸ್ತಾವಿಕವಾಗಿ ಮಾತನಾಡಿ ಉತ್ತರ ಕರ್ನಾಟಕದ 5 ಜಿಲ್ಲೆಗಳ 10.ತಾಲೂಕುಗಳಲ್ಲಿ 170 ಗ್ರಾಮಗಳಲ್ಲಿ 20 ವರ್ಷ ವಯಸ್ಸಿನವರ ಕಿಶೋರಿಯರನ್ನು ಕಿಶೋರಿ ಸಂಘಗಳನ್ನಾಗಿ ಮಾಡಿ ಅವರಿಗೆ ಮಕ್ಕಳಿಗೆ ಇರುವಂತ ಕಾನೂನುಗಳ ಬಗ್ಗೆ ಮಕ್ಕಳ ರಕ್ಷಣೆಗಾಗಿ, ಬಾಲ ಕಾರ್ಮಿಕರ ರಕ್ಷಣೆಗಾಗಿ ಇರುವ ಕಾಯಿದೆಗಳ ಬಗ್ಗೆ ತಿಳುವಳಿಕೆ ಕೊಟ್ಟು ಅವರ ಮೇಲಿನ ನಡೆಯುವ ಶೋಷಣೆಗಳಿಂದ ರಕ್ಷಣೆ ಮಾಡಿ ಕೊಳ್ಳುವ ಕಾರ್ಯವನ್ನು ಮಾಡಿದ್ದೇವೆ. ತಂದೆ ಗೊತ್ತಿಲ್ಲದೆ ಸಾಮಾಜಿಕ ಪರಿಸ್ಥಿತಿಯಲ್ಲಿ ಬದುಕುತ್ತಿರು ವಂತವರು ಇವರಿಗೆ ನೋವುಗಳಿರ ಬಾರದೆಂದು. ಮಾನಸಿಕ ನೋವಿನಿಂದ ಬಳಲುತ್ತಿರುವವರಿಗೆ ವಿಶ್ವಸಂಸ್ಥೆ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ನಿಮಾನ್ಸ್ ಇದೆ ಇದರಲ್ಲಿ 10ಕೌಶಲ್ಯ ಗಳಿವೆ, ಈ ಹತ್ತು ಕೌಶಲ್ಯಗಳಿಗೆ ತರಬೇತಿ ಕೊಡುವ ಕೆಲಸವನ್ನು ಸ್ನೇಹ ಸಂಸ್ಥೆ ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಿಶೋರಿ ನಾಯಕಿ ನೇತ್ರಾವತಿ, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಪತ್ರಿಕಾ ಮಾಧ್ಯಮದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button