ಮಾರಮ್ಮನಹಳ್ಳಿಯಲ್ಲಿ – ಐದು ಮರಿಗೆ ಜನ್ಮ ನೀಡಿದ ಮೇಕೆ.
ಮಾರಮ್ಮನಹಳ್ಳಿ ಡಿಸೆಂಬರ್.20
ಐದು ಮರಿ ಹಾಕಿದ ಅಪರೂಪದ ಮೇಕೆಕೂಡ್ಲಿಗಿ ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಮೇಕೆ.ಕೂಡ್ಲಿಗಿ ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದ ಪೂಜಾರಿ ಚಿನ್ನಾಲಿಂಗಯ್ಯನವರ್ ಚಿನ್ನಮುತ್ತಯ್ಯ ಎಂಬುವವರಿಗೆ ಸೇರಿದ ಮೇಕೆಯೊಂದು ಐದು ಮರಿಗಳಿಗೆ ಜನ್ಮ ನೀಡಿದ ಅಪರೂಪ ಘಟನೆ ನಡೆದಿದೆ. ಪ್ರತಿ ಸಲ 1-2 ಮರಿಗಳಿಗೆ ಜನ್ಮ ನೀಡುತ್ತಿದ್ದ ಮೇಕೆ ಈ ಬಾರಿ ಐದು ಮರಿಗೆ ಜನ್ಮ ನೀಡಿದೆ,ಇಷ್ಟೊಂದು ಮರಿಗಳಿಗೆ ಜನ್ಮ ನೀಡಿರುವುದು ಅಪರೂಪದ. ಸಾಮಾನ್ಯವಾಗಿ ಮೇಕೆಗಳು ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಅದರಲ್ಲೂ ಹೆಣ್ಣು ಮತ್ತು ಗಂಡು ಮರಿಗಳು ಇರುತ್ತವೆ. ಆದರೆ ನಮ್ಮ ಮೇಕೆ ಐದು 2 ಹೆಣ್ಣು 3 ಗಂಡು ಮರಿಗಳಿಗೆ ಜನ್ಮ ನೀಡಿದ್ದು ವಿಶೇಷ ಅಂತಾರೆ ಚಿನ್ನಮುತ್ತಯ್ಯ.ಇನ್ನು ಮೇಕೆಯೊಂದು ಐದು ಮರಿಗಳಿಗೆ ಜನ್ಮ ನೀಡಿದ ವಿಷಯ ತಿಳಿದು ಗ್ರಾಮದ ಜನರು ಮಾತ್ರವಲ್ಲ, ಸುತ್ತ ಮುತ್ತಲಿನ ಅನೇಕ ಗ್ರಾಮದ ಜನರು ಮೇಕೆ ವೀಕ್ಷಣೆಗೆ ಬರುತ್ತಿದ್ದಾರೆ.ನಾಲ್ಕು ಮರಿಗಳು ಆರೋಗ್ಯದಿಂದ ಇವೆ,ಒಂದು ಮರಿ ಮರಣ ಹೊಂದಿದೆ ಎನ್ನುತ್ತಾರೆ ಗ್ರಾಮದ ಗ್ರಾಮಸ್ಥರು ಬೋಮ್ಮಲಿಂಗಯ್ಯ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ