“ಶ್ರೇಷ್ಠ ಸಂವಿಧಾನ ನಮ್ಮದು – ಶ್ರೀ ಸಿದ್ದರಾಮ ಕಲ್ಮಠ”.

ಕೊಟ್ಟೂರು ಡಿಸೆಂಬರ್.23

ಕೊಟ್ಟೂರೇಶ್ವರ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಸ್ವತಂತ್ರ, ಸಾರ್ವಭೌಮ, ಭಾರತಕ್ಕೆ ಅಡಿಪಾಯವೆಂದರೆ ನಮ್ಮ ಸಂವಿಧಾನ, ದೇಶದ ಜನರನ್ನು ನಮ್ಮನ್ನ ಆಳುವ ಸರ್ಕಾರದ ರಚನೆಯನ್ನು ಇದು ನಿರ್ದಿಷ್ಟ ಪಡಿಸುತ್ತದೆ. ಪ್ರಜಾಪ್ರಭುತ್ವ, ಸಮಾಜವಾದ ಜಾತ್ಯಾತೀತ ಮತ್ತು ಸಮಗ್ರ ರಾಷ್ಟ್ರೀಯ ಪರಿಕಲ್ಪನೆಯನ್ನು ಹೊಂದಿರುವ ಜಗತ್ತಿನ ಅತ್ಯಂತ ಬೃಹತ್ ಮತ್ತು ಶ್ರೇಷ್ಠ ಸಂವಿಧಾನ ನಮ್ಮದು ಎಂದು ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದರಾಮ ಕಲ್ಮಠ ಹೇಳಿದರು.ಅವರು ಕೊಟ್ಟೂರೇಶ್ವರ ಮಹಾವಿದ್ಯಾಲಯ ‘ರಾಜ್ಯಶಾಸ್ತ್ರ ವಿಭಾಗ’ದಿಂದ ನಡೆದ ಸಂವಿಧಾನ ಮತ್ತು ಮಾನವ ಹಕ್ಕುಗಳು ಒಂದು ದಿನದ ವಿಚಾರ ಸಂಕಿರಣನ್ನು ಉದ್ಘಾಟಿಸಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಇತರ ಸಂವಿಧಾನ ಸಭೆಯ ಸದಸ್ಯರ ಪಾತ್ರ ವಿಶಿಷ್ಟವಾಗಿದೆ. ಅತಿ ದೊಡ್ಡ ಲಿಖಿತ ಸಂವಿಧಾನವು ನಮ್ಮದಾಗಿದ್ದು ಅದು ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳನ್ನ ನಿರೂಪಿಸುತ್ತದೆ. ಬಹು ಸಂಸ್ಕೃತಿ ಆಚಾರ ವಿಚಾರಗಳ ನೆಲೆಯುಳ್ಳ ದೇಶದಲ್ಲಿ ಸರ್ವರಿಗೂ ಸಮಾನತೆ ಮತ್ತು ಸ್ವತಂತ್ರವು ನಮ್ಮ ಸಂವಿಧಾನದಿಂದ ಸಾಧ್ಯವಾಗಿದೆ ಸಂವಿಧಾನದ ಆಶಯದಂತೆ ನಡೆದಾಗ ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಶ್ರೀ ಕೆ ಹೆಚ್ ಎಂ ಶೈಲಜಾ ಮಾತನಾಡಿ ಪ್ರತಿಯೊಬ್ಬ ಮಾನವರಿಗೂ ಶಾಸನಬದ್ದ ಅವಕಾಶಗಳನ್ನು ಕಲ್ಪಿಸಿದೆ. ಯಾವುದೇ ಲಿಂಗ ತಾರತಮ್ಯವಿಲ್ಲದೆ ಸರ್ವರು ಸಮಾನರು ಮತ್ತು ಸಹಬಾಳ್ವೆಯ ಹಕ್ಕುಗಳು ಸಂವಿಧಾನದಿಂದ ನಮಗೆ ದೊರೆತಿದೆ. ಮಹಿಳೆಯರ ಸಮಸ್ಯೆಗಳಿಗೆ ಸಕರಾತ್ಮಕ ಪರಿಹಾರ ಸಂವಿಧಾನ ನಮಗೆ ನೀಡಿದೆ ಎಲ್ಲಾ ರೀತಿಯ ಶೋಷಣೆಗಳಿಂದ ಮುಕ್ತ ಬದುಕನ್ನು ಸಾಧಿಸಲು ಇದು ಸಹಾಯಕ ಮಹಿಳೆಯರು ಶಿಕ್ಷಣ ಮತ್ತು ಸ್ವಾಭಿಮಾನದ ಮೂಲಕ ಈ ಸಮಾಜದ ಮುಖ್ಯವಾಗಿ ವಾಹಿನಿಗೆ ಬರಬೇಕೆಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಡಿ. ಜಯ ಶ್ರೀ ಅವರು ಪ್ರಜೆಗಳಿಗೆ ಪೂರಕವಾಗಿ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಸಂವಿಧಾನವು ಕಾರಣವಾಗಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಯಶಸ್ವಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಿದ್ದಾರೆ. ಅಂಬೇಡ್ಕರ್ ಮತ್ತು ಸಂವಿಧಾನ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಅವರ ಪರಿಶ್ರಮದ ಮೂಲಕ ಸಮಾಜದಲ್ಲಿ ದಮನಿತರು ಮುನ್ನೆಲೆಗೆ ಬರಲು ಸಹಾಯಕವಾಗಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಮ್ ರವಿಕುಮಾರ್ ಮಾತನಾಡಿ ಸಂವಿಧಾನದ ರಚನೆ, ಸಂವಿಧಾನದ ಕಾರ್ಯಾಚರಣೆ, ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು ಸವಿಸ್ತಾರವಾಗಿ ಹೇಳಿದರು ಮತ್ತು ಸಂವಿಧಾನ ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ ಪ್ರಜೆಗಳಿಗೆ ಸರ್ವ ಸ್ವತಂತ್ರಗಳನ್ನ ನೀಡುತ್ತದೆ. ಮಾನವ ಹಕ್ಕುಗಳು ಜೀವಿಸುವ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವ ಸೌಹಾರ್ದ ಮನೋಭಾವನೆ ಬೆಳೆಸುವ ಭ್ರಾತೃತ್ವ ಭಾವನೆಯನ್ನು ನೀಡುವ ಮುಂತಾದ ಅಂಶಗಳನ್ನು ಒಳಗೊಂಡಿದೆ ಹಾಗಾಗಿ ಸಂವಿಧಾನವನ್ನು ಎಲ್ಲರೂ ತಿಳಿದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಆಗುತ್ತದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ದಾನಿಗಳಾದ ಅಮೆರಿಕದಿಂದ ಆಗಮಿಸಿದ್ದ ಗೌರಿ ರಾಜ್ ಅವರ ಪುತ್ರರಾದ ರಂಜನ್ ರಾಜ್ ಮತ್ತು ಕುಟುಂಬವನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಅಜೀವ ಸದಸ್ಯರಾದ ಶ್ರೀ ಹರಪನಹಳ್ಳಿ ಗುರುಬಸವರಾಜ್ ವರ್ತಕರು ಶ್ರೀ ಜಿ ಚಂದ್ರಶೇಖರಯ್ಯ ವರ್ತಕರು ಕೊಟ್ಟೂರು ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಅಡಿಕೆ ಮಂಜುನಾಥಯ್ಯ. ಶ್ರೀ ಮಂಜುನಾಥ ಮಠಪತಿ ಶ್ರೀ ಕೋರಿ ಶೆಟ್ರು ಬಸವರಾಜ್. ಪದವಿ ಪೂರ್ವ ಪ್ರಾಚಾರ್ಯರಾದ ಶ್ರೀ ಪ್ರಶಾಂತ್ ಕುಮಾರ್ ಎಂ ಹೆಚ್.ಹಿರಿಯ ಪ್ರಾಧ್ಯಾಪಕರಾದ ಪ್ರೊ. ರವೀಂದ್ರ ಗೌಡ ಪ್ರೊ. ಕೃಷ್ಣಪ್ಪ ಡಾ. ಸಿದ್ದನಗೌಡ. ಶ್ರೀ ಸಿ. ಬಸವರಾಜ್ಉಪನ್ಯಾಸಕರು ರಮೇಶ್ ಉಪನ್ಯಾಸಕರು. ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಕೆಪಿ ರಾಧಾಸ್ವಾಮಿ ಸಹಾಯಕ ಪ್ರಾಧ್ಯಾಪಕರು ಸ್ವಾಗತಿಸಿ. ವಂದನಾರ್ಪಣೆಯನ್ನು ಉಪನ್ಯಾಸಕ ಕೂಡ್ಲಿಗಿ ಕೊಟ್ರೇಶ್. ನಿರೂಪಣೆಯನ್ನು ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್ ನೆರವೇರಿಸಿ ಕೊಟ್ಟರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button