ಚಿನ್ಮೂಲದ್ರಿ ಸಾಹಿತ್ಯ ವೇದಿಕೆಗೆ 19 ನೇ.- ವಾರ್ಷಿಕೋತ್ಸವದ ಸಂಭ್ರಮ.
ಚಿತ್ರದುರ್ಗ ಸ.12






ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ 19 ನೇ. ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಡಾ, ಆರ್ ಗೌರಮ್ಮ ಅವರ ಚೊಚ್ಚಲ ಕೃತಿ “ಕಾವ್ಯದೀಪ” ಕವನ ಬಿಡುಗಡೆ ಮತ್ತು ಬೆಳಕು ಪ್ರಿಯ ಮುರಳಿಯವರಿಗೆ “ಚಿನ್ಮೂಲದ್ರಿ ಸಿರಿ ಶಿಕ್ಷಕ” ಪ್ರಶಸ್ತಿ ಮತ್ತು ಆರ್.ಜಿ ವಿನಾಯಕ ಹಾಗೂ ಎಂ.ಬಿ ಜಯದೇವಮೂರ್ತಿ ಅವರಿಗೆ “ಚಿನ್ಮೂಲದ್ರಿಯ ಚೈತನ್ಯ” ಪ್ರಶಸ್ತಿಯನ್ನು ಅವರ ಸೇವೆಯನ್ನು ಗುರುತಿಸಿ ವೇದಿಕೆಯಿಂದ ಪ್ರಧಾನ ಮಾಡಲಾಯಿತು.


19 ನೇ. ವಾರ್ಷಿಕೋತ್ಸವದ ಪ್ರಯುಕ್ತ ಚುಟುಕು ವಾಚನ, ಏಕಪಾತ್ರಾಭಿನಯ, ನಾಟಕ, ಭಾವಗೀತೆ ಗಾಯನ, ಭರತ ನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು.


ಕಾರ್ಯಕ್ರಮದ ಕೊನೆಯಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ “ನ್ಯಾನೋ ಕಥೆಗಳು’ ಎಂಬ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ದಯಾವತಿ ಪುತ್ತೂರ್ಕರ್, ಶಷೀವುಲ್ಲಾ, ಶೋಭಾ ಮಲ್ಲಿಕಾರ್ಜುನ್, ಡಾ, ಆರ್ ಗೌರಮ್ಮ, ಶಿವರುದ್ರಪ್ಪ ಪಂಡ್ರಹಳ್ಳಿ, ಮೀರಾ ನಾಡಿಗ್, ಡಾ, ಬಸವರಾಜ್ ಹರ್ತಿ, ಸತೀಶ್ ಕುಮಾರ್, ಮುರಳೀಧರ್, ಯತೀಶ್ ಎಂ ಸಿದ್ದಾಪುರ, ಶಿಲ್ಪಾ ಜಗದೀಶ್, ವೀರೇಶ್, ಉಷಾರಾಣಿ, ಶಾರದಾ ಜೈರಾಮ್, ಕೆ.ಎಸ್ ತಿಪ್ಪಮ್ಮ, ಗಿರೀಶ್, ಶಿವಾನಂದ.ಎಸ್ ಬಂಡೆಹಳ್ಳಿ ಸೇರಿದಂತೆ ಸಾಕಷ್ಟು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.