ಮಹಿಳಾ ಜ್ಞಾನ ವಿಕಾಸ ಕುರಿತು ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಠಿ.
ಇಂಡಿ ಡಿಸೆಂಬರ್.25

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿಯಲ್ಲಿ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ತಾಲೂಕಾ ಮಟ್ಟದ “ಮಹಿಳಾ ಜ್ಞಾನ ವಿಕಾಸ ಕುರಿತು ವಿಚಾರಗೋಷ್ಠಿ ಕಾಯ೯ಕ್ರಮವನ್ನು ಜ್ಯೋತಿ ಬೆಳಗಿಸುವದ ರೊಂದಿಗೆ ಕಾಯ೯ಕ್ರಮಕ್ಕೆ ಚಾಲನೆ ನೀಡಲಾಯಿತು.ಕಾಯ೯ಕ್ರಮದ ಅಧ್ಯಕ್ಷತೆಯನ್ನು ಶ್ರೀ ಯುತ ಸೋಮಯ್ಯ.ಷ.ಚಿಕ್ಕಪಟ್ಟ ಇವರು ವಹಿಸಿದರು.ಉಧ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಯುತ ಶಿವಯೋಗೇಪ್ಪ ನೇದಲಗಿಯವರು ಮಾಡಿದರು.ನಂತರ ಸಭೆಯನ್ನುದ್ದೇಶಿಸಿ -ಮಹಿಳೆಯರಲ್ಲೂ ಶಕ್ತಿ ಸಾಮರ್ಥ್ಯಗಳಿದ್ದು,ಪುರುಷನಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬಲ್ಲಳು.ಸಮಾಜದಲ್ಲಿ ಮಹಿಳೆಯ ಪಾತ್ರ ಅಪಾರ ,ಮಾತೆಯಾಗಿ,ಗೃಹಿಣಿಯಾಗಿ, ಜೀವನದುದ್ದಕ್ಕೂ ತನ್ನ ಕುಟುಂಬದ ಸದಸ್ಯರ ಹಿತಕ್ಕಾಗಿಯೇ ಬದುಕುತ್ತಾಳೆ.

ಅದಕ್ಕಾಗಿ ಮಹಿಳಾ ಸಬಲೀಕರಣ ಅಗತ್ಯತೆ ಇದೆ.ಅದಕ್ಕಾಗಿ ಮಹಿಳೆಯರ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟ ಅನೇಕ ಮಹಿಳಾ ಸ್ವ ಸಹಾಯ ಸಂಘಗಳು ಸಹ ಉಪಕಾರಿಯಾಗಿವೆ ಎಂದು ಹೇಳಿದರು.ಕಾಯ೯ ಕ್ರಮವನ್ನುದ್ದೇಶಿಸಿ ಶ್ರೀ ಯುತ ಬಿ.ಎಮ್.ಪಾಟೀಲರವರು ಮಾತನಾಡಿ-ಮಹಿಳೆಯನ್ನು ವೇದಗಳ ಕಾಲದಿಂದಲೂ ಪೂಜ್ಯನೀಯವಾಗಿ ಕಾಣುತ್ತಾರೆ.ಸ್ವತಂತ್ರ ನಂತರ ಸಮಾಜದಲ್ಲಿ ಮಹಿಳೆಯರ ಸ್ಥಾನ-ಮಾನವನ್ನು ಉತ್ತಮ ಪಡಿಸಲು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತೊಡೆದು ಹಾಕಲು ಪ್ರಯತ್ನಿಸಿ ಎಲ್ಲಾ ಕ್ಷೇತ್ರಗಳಲ್ಲಿ ಸಶಕ್ತವಾಗಿ ಮಾಡಲಾಗುತ್ತದೆ ಎಂದು ಹೇಳಿದರು.ನಂತರ ಮುಖ್ಯ ಅತಿಥಿಗಳಾದ ಶ್ರೀ ಯುತ ಜಯಂತ ಪೂಜಾರಿಯವರು ಮಾತನಾಡಿ-ಮಹಿಳೆಯರು ಸಬಲರಾಗಲು ಅನೇಕ ಸಂಘ-ಸಂಸ್ಥೆಗಳು ಇತ್ತೀಚಿನ ದಿನ ಮಾನಗಳಲ್ಲಿ ಶ್ರಮಿಸುತ್ತಿವೆ.ಮಹಿಳೆಯರಿಗಾಗಿ ಸರ್ಕಾರದಿಂದ ಮಾಶಾಸನ,ಕೃಷಿ ಅನುದಾನದ ಮಾಹಿತಿ , ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪ್ರಗತಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆ ಸ್ವಾವಲಂಬಿಯಾಗಿ ಬದುಕುವದರ ಜೊತೆಗೆ ಇತರರನ್ನು ಬದುಕಿಸುವ ಮನೋಭಾವನೆ ಹೊಂದಿರುವುದು ಕಾಣುತ್ತೇವೆ ಎಂದು ಹೇಳಿದರು.ಈ ಕಾಯ೯ಕ್ರಮದ ಸಂದರ್ಭದಲ್ಲಿ ಶ್ರೀ ಯುತ ಬಿ.ಎಮ್.ಪಾಟೀಲ.ಶ್ರೀಮತಿ ಸುಷ್ಮಿತಾ ಗಣೇಶ ಕುಂಬಾರ.ಶ್ರೀ ಸುನೀಲ ರಾಮಗೊಂಡ ಕೈರವಕರ.ಶ್ರೀಮತಿ ಸಂಗೀತಾ ಸೋ ಚಿಕ್ಕಪಟ್ಟ.ಶ್ರೀ ನಟರಾಜ ಎಲ್.ಎಮ್.ಶ್ರೀಮತಿ ಪ್ರಭಾವತಿ ಜಾಧವ (ಅಂಬಾರೆ)ಶ್ರೀಮತಿ ರೂಪಾ ಹಿರೇಮಠ. ಹಾಗೂ ತಾಲೂಕೀನ ಅನೇಕ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ