ಡಿ.29 ಕ್ಕೆ ನಾಗಠಾಣದ ಶೀ ಮಲ್ಲಿಕಾರ್ಜುನ ಶಾಲೆಯಲ್ಲಿ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳ ಗುರು ನಮನ ಕಾರ್ಯಕ್ರಮ ಆಯೋಜನೆ.
ನಾಗಠಾಣ ಡಿಸೆಂಬರ್.27

ಇಂಡಿ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಡಿಸೆಂಬರ್ 29. ಶುಕ್ರವಾರ ದಂದು ಮಧ್ಯಾನ್ಹ 3 ಗಂಟೆಗೆ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳ ಗುರು ನಮನ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ. ಮಧ್ಯಾನ್ಹ 3 ಗಂಟೆಗೆ ಗ್ರಾಮದ ಕಲ್ಲಯಾರೂಢ ಮಠದಿಂದಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಭಾವ ಚಿತ್ರ ಜೊತೆಗೆ ಪುಸ್ತಕ ಕಟ್ಟುಗಳ ಮೆರವಣಿಗೆ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುವದು. ಸಂಜೆ 5 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಶಾಲಾ ಆವರಣದಲ್ಲಿ ಗುರು ನಮನ ಕಾರ್ಯಕ್ರಮ ಜರುಗಲಿದ್ದು, ನಾಗಠಾಣದ ಉದಯೆಶ್ವರ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನಿಧ್ಯ ಮತ್ತು ಕಲ್ಲಯಾರೂಢ ಮಠದ ಶ್ರೀ ಪ್ರಜ್ಞಾನಂದ ಮಹಾ ಸ್ವಾಮಿಗಳು ಸಾನಿಧ್ಯ ವಹಿಸುವರು.ಹಿರೇರೂಗಿ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಗುರು ನಮನ ಸಲ್ಲಿಸುವರು. ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ,ಶಿಕ್ಷಕರು,ಪಾಲಕರು,ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿರುವರು.ಮಕ್ಕಳಿಂದ ಪೂಜ್ಯ ಶ್ರೀಗಳ ಕುರಿತು ನಾಟಕ-ಹಾಡು ಜೊತೆಗೆ ದೀಪಗಳ ಪ್ರಜ್ವಲನ ನಂತರ ಮಹಾ ಪ್ರಸಾದ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಗ್ರಾಮಸ್ಥರು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ