ಮಕ್ಕಳ ಬಿಸಿಯೂಟದಲ್ಲಿ ಹಣ ಮಾಡಲು ಹೊರಟ್ಟಿರುವಂತೆ ಕೆಲ ಶಿಕ್ಷಕರು.

ಕೋಗಳಿ ಡಿಸೆಂಬರ್.28

ಸರ್ಕಾರ ಏನೇ ಕಠಿಣ ಕಾನೂನು ರೂಪಿಸಿದರು, ಶಿಕ್ಷಕರು ಮಕ್ಕಳನ್ನು ಹೊಡೆಯುವಂತ್ತಿಲ್ಲ, ಮಕ್ಕಳನ್ನು ಬೈಯುವಂತಿಲ್ಲ , ಮಕ್ಕಳ ಬುದ್ಧಿ ಶಕ್ತಿಗೆ ತಕ್ಕ ಹಾಗೆ ಗುರುಗಳು ವಿದ್ಯೆಯನ್ನು ಧಾರೆ ಎರೆದು , ಮಕ್ಕಳಿಗೆ ಮನಸ್ಸು ನೋವು ಆಗದ ಹಾಗೆ ಕಲಿಸಬೇಕು, ಎಂದು ಸರ್ಕಾರ ಎಷ್ಟೇ ಕಾನೂನು ರೂಪಿಸಿದರು, ಅದನ್ನು ಉಲ್ಲಂಘನೆ ಮಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಒಡೆಯುವುದು, ಬೈಯುವುದು ಸರ್ವೇ ಸಾಮಾನ್ಯವಾಗಿದೆ‌. ಹೀಗೆ ಕಲಿಸುವ ಶಿಕ್ಷಕರು, ಶಿಕ್ಷಕರೆ ಅಲ್ಲಾ, ನಿಜವಾದ ಶಿಕ್ಷಕ ಎಂದರೆ, ಮಕ್ಕಳ ಶೈಕ್ಷಣಿಕ ಮಟ್ಟವನ್ನು ಗುರುತಿಸಿ, ಅವರ ಶೈಕ್ಷಣಿಕ ಮಟ್ಟಕ್ಕೆ ತಕ್ಕ ಹಾಗೆ ಬೋಧನೆ ಮಾಡುವ ಎಲ್ಲಾ ಶಿಕ್ಷಕ ವೃಂದದವರಿಗೆ ನಮ್ಮ ಮಾಧ್ಯಮದಿಂದ ಒಂದು ‘ಸಲಾಂ’ ಹೇಳಿ ಬಿಡೋಣ! ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಾ ಕೋಗಳಿ ಗ್ರಾಮದಲ್ಲಿ ಸರ್ಕಾರಿ ಶಾಲಾ, ಕಾಲೇಜು ಇರುವುದು ಬಡವರ ಪಾಲಿಗೆ ಸಿಕ್ಕ ಸೌಭಾಗ್ಯವಾಗಿದೆ. ಎಷ್ಟೋ ಜನ ಪೋಷಕರು ಖಾಸಗಿ ಶಾಲೆ ಕಾಲೇಜುಗಳಿಗೆ ಫೀ- ಯನ್ನು ಕಟ್ಟಲಾಗದೆ, ನೋವುಂಡ ಜನಗಳು ಸರ್ಕಾರಿ ಶಾಲಾ ಕಾಲೇಜುಗಳತ್ತ ದಾಪುಗಾಲು ಹಾಕುತ್ತಿದ್ದಾರೆ.

ಈ ಹಿಂದೆ ಕೋಗಳಿಯಲ್ಲಿ ” ಕರ್ನಾಟಕ ಪಬ್ಲಿಕ್ ಸ್ಕೂಲ್ ” ಮತ್ತು ಸರ್ಕಾರಿ ಶಾಲೆಗಳು ಅನೇಕ ರಂಗಗಳಲ್ಲಿ ತನ್ನ ದಾಪುಗಾಲು ಹಾಕಿರುವುದನ್ನು ನಾವು ಯಾರು ಮರೆಯುವಂತಿಲ್ಲ.ಈ ಹಿಂದೆ ಇಲ್ಲಿನ ಶಾಲಾ, ಕಾಲೇಜು ಶಿಕ್ಷಕರು ಆಸಕ್ತಿಗೆ ತಕ್ಕ ಹಾಗೆ ಪ್ರೋತ್ಸಾಹ ನೀಡಿ, ಅನೇಕ ರಂಗಗಳಲ್ಲಿ ಸಾಧನೆಯನ್ನು ಸಾಧಸಿ ತೋರಿಸಿದ್ದಾರೆ ಎಂದರೆ ತಪ್ಪಾಗಲಾರದು‌. ಈ ಶಾಲೆಗೆ ಸಿ ಲೋಕೇಶ್ ಎಂಬ ಮುಖ್ಯ ಶಿಕ್ಷಕರು ಯಾವ ಗಳಿಗೆಯಲ್ಲಿ ಕಾಲಿಟ್ಟರೋ ಅಲ್ಲಿಂದ ಸಮಸ್ಯೆಗಳ ಕಂತೆ ಕಂತೆ ಇವೆಯಂತೆ. ಅಲ್ಲಿನ ಶಿಕ್ಷಕರಿಗೆ ನೆಟ್ಟಗೆ ಬೋಧಿಸಲು ಬರದಿದ್ದರೂ ಕೂಡ ಮಕ್ಕಳನ್ನು ಒಡೆಯುವುದು, ಬಯ್ಯುವುದು, ಎತ್ತಿದ ಕೈಯಂತೆ. ಇವರಿಗೆ ಶಿಕ್ಷಣದ ಕಾನೂನು ಪರಿಜ್ಞಾನ ಇಲ್ಲದಂತೆ ವರ್ತನೆ ಮಾಡುವರಂತೆ‌. ಅಲ್ಲಿನ ಮಕ್ಕಳು ಬಿಸಿ ಊಟದ ಬಗ್ಗೆ ಊಟ ಸರಿ ಇಲ್ಲ ಎಂದರೆ, ಅವರನ್ನೇ ಟಾರ್ಗೇಟ್ ಮಾಡಿ ಹೊಡೆಯುವವರಂತೆ, ಎಂದು ಕೆಲವು ಶಿಕ್ಷಕರು ತಮ್ಮ ತಮ್ಮೋಳಗೆ ಮಾತನಾಡಿ ಕೊಳ್ಳುವರಂತೆ. ಯಾರಾದರೂ ಬಂದು ಕೇಳಿದರೆ, ಈ ಲೋಕೇಶ್ ಎಂಬ ಚಾಣಕ್ಷ ಮುಖ್ಯ ಶಿಕ್ಷಕರು, ಬಹಳ ಚಾಣಾಕ್ಷತನ ದಿಂದ ಉತ್ತರ ನೀಡಿ, ನೈಸಾಗಿ ಜಾರಿ ಕೊಳ್ಳುವರಂತೆ. ಶಾಲೆಯಲ್ಲಿ ಮೂಲಭೂತ ಸಮಸ್ಯೆಗಳನ್ನು ಸಾಕಷ್ಟು ಇವೆ, ಮಕ್ಕಳ ಆಟ, ಪಾಠದಲ್ಲಿ ಬಹಳ ಕೊರತೆ ಇದೆ, ಇದರ ಬಗ್ಗೆ ಚಿಂತಿಸದೆ, ಬಿಸಿ ಊಟದಲ್ಲಿ, ಎಷ್ಟು ಉಳಿಯುತ್ತೆ, ಇದನ್ನು ಹೇಗೆ ಉಳಿಸಬೇಕು, ಮಕ್ಕಳಿಗೆ ಎಷ್ಟು ವಾರಕ್ಕೆ ಒಮ್ಮೆ ತತ್ತಿಯನ್ನು ನೀಡಬೇಕು. ಒಂದು ವಾರ ತತ್ತಿ ಕೊಡದೇ ಹಾಗೆ ಉಳಿದ ಹಣ ಏನು ಮಾಡಬೇಕು, ಇದರ ಬಗ್ಗೆ ತಲೆ ಕೆಡಿಸಿ ಕೊಂಡಷ್ಟು, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಒಂದು ಕಿಂಚಿತ್ತೂ ಯೋಚಿಸುವುದಿಲ್ಲ ಎಂದು ಇವರನ್ನು ನೋಡಿದ ಕೆಲವು ಸಾವ೯ಜನಿಕರು ಮಾತನಾಡಿ ಕೊಳ್ಳುವರಂತೆ. ಒಬ್ಬ ನಿಜವಾದ ಶಿಕ್ಷಕ ಹೇಗಿರ ಬೇಕೆಂದರೆ “ದಡ್ಡ ಮಕ್ಕಳನ್ನು ಹೆಚ್ಚು ಅಂಕಗಳಿಸುವ ಹಾಗೆ ಕಲಿಸುವ ಸಾಮರ್ಥ್ಯ ಉಳ್ಳವರೇ ನಿಜವಾದ ಶಿಕ್ಷಕ.” ಪ್ರತಿಭಾವಂತ ವಿಧ್ಯಾಥಿ೯ಗಳು, ಅವರ ಶ್ರಮದಿಂದ, ಅಲ್ಪ ಪ್ರಮಾಣದಲ್ಲಿ ಭೋಧನೆ ಮಾಡಿದರೂ, ಹೆಚ್ಚಿನ ಪ್ರಮಾಣದಲ್ಲಿ ತಿಳಿದು ಕೊಂಡು, ಅಂಕಗಳಿಸುವ ಸಾಮರ್ಥ್ಯ ಕೆಲವು ಬೆರಳು ಎಣಿಕೆಯ ಮಕ್ಕಳಿಗೆ ಇರುತ್ತದೆ.

ಆ ಮಕ್ಕಳು ಹೇಗೆ ಭೋಧಿಸಿದರು, ಅವರು ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ‌ ಮಕ್ಕಳಿಗೆ ತಿಳಿಯದ ಹಾಗೆ, ಅರೆ ಬರೆಯಾಗಿ ವಿದ್ಯೆಯನ್ನೂ ಮಕ್ಕಳಿಗೆ ನೀಡಿ, ಅವರ ಹತ್ತಿರ ತಾನೇ ನಾಯಕನಂತೆ ಪೋಜು ಕೊಡುವರಂತೆ, ಇನ್ನು ಕೆಲವರು ಒಂದು ಚೂರು ವಿಧ್ಯಾಥಿ೯ಗಳ ಬಗ್ಗೆ, ಯೋಚಿಸದೆ ಸಮಯವನ್ನು ವ್ಯಯ ಮಾಡುವ ಶಿಕ್ಷಕರು ಕೂಡ ಇದ್ದಾರೆ ಎಂದರೆ ತಪ್ಪಾಗಲಾರದು.ಶಾಲೆಯನ್ನು ‘ವಿದ್ಯಾ ಮಂದಿರ’ ‘ದೇವ ಮಂದಿರ ‘ ಎನ್ನುತ್ತಾರೆ. ಸ್ವಚ್ಛತೆ ಶಿಸ್ತುಬದ್ಧತೆ ಇದ್ದರೆ ಮಾತ್ರ, ವಿದ್ಯೆ ಒಲಿಯಲು ಸಾಧ್ಯ.ಸ್ವಚ್ಛತೆ ಕಾಣದ ಮಂದಿರದಲ್ಲಿ ವಿದ್ಯಾ ಬರಲು ಸಾಧ್ಯವೆ. ಈ ಶಾಲೆಯ ಕೆಲ ರೂಂಗಳಲ್ಲಿ ಸ್ವಚ್ಛತೆ ಇಲ್ಲದೆ ಎಲ್ಲಿ ಅಂದರೆ ಅಲ್ಲಿ, ಪಾನ್ ಪರಾಗ್ ಅಗೆದು ಉಗುಳಿರುವರಂತೆ ಮತ್ತು ಶಾಲೆಯ ಕೆಲ ಕೊಠಡಿಗಳಲ್ಲಿ ಆಗಾಗ ‘ಬಾಟಲ್’ ಸದ್ದು ಕೇಳುವುದಂತೆ ಇದರ ಜವಾಬ್ದಾರಿಯನ್ನು ಯಾರು ಹೋರುವರೋ ಕಾದು ನೋಡೋಣ! ಹೀಗಾಗಿ ಇಲ್ಲಿನ ಶೈಕ್ಷಣಿಕ ಅವ್ಯವಸ್ಥೆ ಎಲ್ಲಾ ರೀತಿ ಸರಿ ಹೋಗಬೇಕಾದರೆ ಪ್ರಮುಖ ಕಾರಣ ಇಲ್ಲಿನ ಮೇಲಿನ ಅಧಿಕಾರಿಗಳು ಸಿ ಆರ್ ಪಿ ,ಇ ಸಿ ಓ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಇಂತಹ ಶಾಲೆಗಳಿಗೆ ಭೇಟಿ ನೀಡಿ ಇಲ್ಲಿನ ಮಕ್ಕಳ ಆರೋಗ್ಯ ಮತ್ತು ಕಲಿಕಾ ಬಗ್ಗೆ ವಿಚಾರಣೆ ಮಾಡಿಲ್ಲವೆಂದು ಎದ್ದು ಕಾಣಬಹುದು ಎನ್ನುವಂತೆ ಕಾಣುತ್ತದೆ ಆದರೆ ಇಲ್ಲಿನ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ್ ನಾಯಕ್ ರವರ ಮೇಲೆ ಅಪಾರ ನಂಬಿಕೆ ಇಟ್ಟ ಜನಗಳು ತಮ್ಮ ಪ್ರಥಮ ಪ್ರಜೆಯಾಗಿ ಆರಿಸಿ ತಂದಿದ್ದಾರೆ ಇಂತಹ ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಒಟ್ಟಿನಲ್ಲಿ ಯೋಚಿಸುವುದಾದರೆ “ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ”ಗುರುಗಳು ಇದಕ್ಕೆ ತಕ್ಕ ಹಾಗೆ ಇರಬೇಕು ಎಂಬುದೇ ನಮ್ಮ ಆಶಯ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button