ಇಂಡಿ ಜಿಲ್ಲಾ ಆಗ್ರಹಿಸಿ ಬುಶ್ರಾ ಲಿಬ್ರಲ್ ಎಡೋಕೇಶನ ಅಸೋಸೀಯಶನ ಮನವಿ ಸಲ್ಲಿಕೆ.

ಇಂಡಿ ಡಿಸೆಂಬರ್.29

ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಪಟ್ಟಣದ ಬುಶ್ರಾ ಲಿಬ್ರಲ್ ಎಡೋಕೇಶನ ಅಸೋಸೀಯಶನ ಇಂಡಿ ( ರಿ) ಇವರ ವತಿಯಿಂದ ಮಿನಿ ವಿಧಾನ ಸೌಧ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳಾದ ಅಬಿದ್ ಗದ್ಯಾಳ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಸಂಸ್ಥೆಯ ಉಪಾಧ್ಯಕ್ಷರಾದ ಹಸನ ಮುಜಾರ ಮಾತನಾಡಿ ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸ ಬೇಕು. ರಾಜ್ಯ ಗಡಿ ಭಾಗದ ವಿಜಯಪುರ ಜಿಲ್ಲೆಯ ಇಂಡಿಯು ಅತಿ ಹಿಂದುಳಿದ ಪ್ರದೇಶಗಲ್ಲಿ ಇದು ಕೂಡಾ ಒಂದಾಗಿದೆ. ಅಲ್ಲದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತಿ ತಿರಾ ಹಿಂದುಳಿದೆ. ಆದರೆ ಇಂಡಿಯು ಆಡಳಿತಾತ್ಮಕವಾಗಿ ಎಲ್ಲಾ ವಿಧದಲ್ಲು ಪ್ರಗತಿ ಹೊಂದ ಬೇಕಾದರೆ ಜಿಲ್ಲೆ ಮಾಡಿದಾಗ ಮಾತ್ರ ಸಾಧ್ಯ ಎಂದರು.ಇಮ್ರಾನ ಮುಜಾವರ, ಅಬ್ಬಾಸ್ ದೇಸಾಯಿ ಮಾತನಾಡಿ ಅಭಿವೃದ್ಧಿ ದೃಷ್ಠಿಯಿಂದ ಇಂಡಿಗೆ ಪ್ರತ್ಯೇಕ ಜಿಲ್ಲೆ ಸ್ಥಾನಮಾನ ನೀಡಬೇಕು. ಈ ಭಾಗದ ಬಹು ದಿನದ ಜಿಲ್ಲಾ ಬೇಡಿಕೆಗೆ ಸರಕಾರ ಸ್ಪಂದಿಸ ಬೇಕು ಎಂದರು. ಈಗಾಗಲೆ ಜಿಲ್ಲೆಗೆ ಇರಬೇಕಾದ ಪೂರಕ ಅಂಶಗಳು ಸಾಕಷ್ಟು ಇಲ್ಲಿ ಲಭ್ಯವಿದ್ದು ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಇಂಡಿ ಪ್ರತೇಕ ಜಿಲ್ಲೆ ರಚನೆ ಮಾಡಿ ಘೋಷಣೆ ಮಾಡಬೇಕು. ಮುಂದುವರೆದು ಸಂವಿಧಾನದ ವಿಧಿ ೩೭೧(ಜೆ)ಗೆ ಅಖಂಡ ಇಂಡಿ ಮತ್ತು ಸಿಂದಗಿ ತಾಲೂಕಾ ಸೇರ್ಪಡೆಗೆ ಹಕ್ಕೋತ್ತಾಯ ಮಾಡುವ ಮೂಲಕ ತಮ್ಮಲ್ಲಿ ವಿನಂತಿಯಿಂದ ಮನವಿ ಮಾಡಿ ಕೊಳ್ಳುತ್ತೆವೆ.ಎಂದರು.ರಂಜಾನ ಇಂಡಿಕರ, ಶಹಿನಶಾ ಜಾಗಿರದಾರ, ಅಕೀಲ ಪಟೇಲ, ಮುಸ್ತಾಕ ಇಂಡಿಕರ, ಯಾಸೀನ‌ ಟಾಮಟಗಾರ, ಸರಫರಾಜ ಬಾಗವಾನ, ಮೌಶೀನ ಬಾಗವಾನ, ರಫೀಕ ಅರಬ, ಜೈದ ಗೌರ, ಜಾಬೀರ ಲಶಕೇರಿ, ಎಂಡಿ ಕೈಫ್ ಇಂಡಿಕರ,ಇತರರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button