ವಿಶ್ವ ಮಾನವ “ಮಲೆನಾಡ ಕೋಗಿಲೆ” ಅವರ ಜನ್ಮ ದಿನದ ಶುಭಾಶಯಗಳು…..

ಕೋಗಿಲೆ ಹಾಡುವುದು ವಸಂತ ಮಾಸದಲ್ಲಿ
ಮಾತ್ರ
ನೀವ್ ಬರೆದಿರುವಿರಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ
ಅನವರತ
ಇಪ್ಪತ್ತನೇ ಶತಮಾನ ಕಂಡ ದೈತ್ಯ ಪ್ರತಿಭೆಯ
ಕವಿಗಳೇ
“ವಿಶ್ವ ಮಾನವ ಸಂದೇಶ” ಸಾರಿದ ಅನನ್ಯ
ಕವಿಗಳೇ
ಕನ್ನಡ ನಾಡಿನ ಕೀರ್ತಿ ಕಳಶವೆ
ಮತ್ತೆ ಹುಟ್ಟಿ ಬನ್ನಿ ಓ ಮಲೆನಾಡ ಕೋಗಿಲೆಯೇ
||1||
ಕನ್ನಡ ಸಾಹಿತ್ಯಕ್ಕೆ ಪ್ರಥಮ ಭಾರಿಗೆ ಜ್ಞಾನ ಪೀಠ
ಪ್ರಶಸ್ತಿಯ ತಂದು ಕೊಟ್ಟವರೇ
ವರ ಕವಿಗಳಿಂದ ” ಯುಗದ ಕವಿ ಜಗದ ಕವಿ ”
ಗಳೆನಿಸಿಕೊಂಡ
ಧೀಮಂತ ಕವಿಗಳೇ
“ಪಂಪ ಪ್ರಶಸ್ತಿ, ಕರ್ನಾಟಕ ರತ್ನ”ಪ್ರಶಸ್ತಿ ಗಳಿಗೆ
ಮೊದಲ ಭಾರಿಗೆ
ಭಾಜನರಾದವರೇಮತ್ತೆ ಹುಟ್ಟಿ ಬನ್ನಿ ಓ ಮಲೆನಾಡ ಕೋಗಿಲೆಯೇ
||2||
ಜಾತೀಯತೆಯ ವಿರುದ್ದ ಹೋರಾಡಿದ
ಸಾಮಾಜಿಕ ಸಮಾನತೆಯ ಹರಿಕಾರರೇ
‘ರಾಷ್ಟ್ರಕವಿ’ಗಳೆoಬ ಹೆಗ್ಗಳಿಕೆಗೆ
ಪಾತ್ರರಾದ ಮಹಾನ್ ಕವಿವರ್ಯರೇ
ನಾಡ ಗೀತೆಯನ್ನು ನಾಡಿಗೆ ನೀಡಿದ
ಧೀಮಂತ ಕವಿಗಳೇ
“ಕನ್ನಡದ ವರ್ಡ್ಸ ವರ್ಥ್ ” ರಸ ಋಷಿ ಎಂಬ
ಕೀರ್ತಿಗೆ
ಭಾಜನರದವರೇ
ಮತ್ತೆ ಹುಟ್ಟಿ ಬನ್ನಿ ಓ ಮಲೆನಾಡ ಕೋಗಿಲೆಯೇ
||3||
ನಾಡು ನುಡಿಯ ಉಳಿವಿಗಾಗಿ ಅವಿರತ
ಹೋರಾಟ ನಡೆಸಿದ ಮೇರುಕವಿಗಳೇ
ಲೇಖನಿ ಬರೆಯದ ಅಕ್ಷರಗಳಿಲ್ಲ
ನೀವ್ ರಚಿಸದ ಸಾಹಿತ್ಯ ಪ್ರಕಾರವೆ ಇಲ್ಲಾ
ಸಾಹಿತ್ಯ ಸೃಷ್ಟಿಯಲ್ಲಿ ಲೌಕಿಕ ಬಾಳಿನಲ್ಲಿ ಉನ್ನತ
ಸ್ಥಾನವ ಅಲಂಕರಿಸಿದ ಸಾಹಿತ್ಯ ದಿಗ್ಗಜರೆ
ಸಾಮಾಜಿಕ ಅನ್ಯಾಯಗಳ ವಿರುದ್ಧ
ತಮ್ಮ ಬರಹಗಳ ಮೂಲಕ ನಿರ್ಭಯವಾಗಿ
ಪ್ರತಿಭಟಿಸಿದ ಕ್ರಾಂತಿಕಾರಿ ಕವಿಗಳೆ
ಮತ್ತೆ ಹುಟ್ಟಿ ಬನ್ನಿ ಓ ಮಲೆನಾಡ ಕೋಗಿಲೆಯೇ
||4||
ಕನ್ನಡ ವಾಗ್ದೇವಿ ಭಂಡಾರದ ಅನರ್ಘ್ಯ ರತ್ನವೇ
ನಿಮ್ಮದು ವೃಷ್ಟಿವಾಣಿಯಲ್ಲ
ಸಮಷ್ಟಿ ವಾಣಿ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ
ಅಪಾರ
ನಿಮಗಿರುವರು ಅಭಿಮಾನಿಗಳ ಮಹಾ ಪೂರ
ಕನ್ನಡ ನಾಡು ನುಡಿಯ ರಕ್ಷಣೆಗಾಗಿ
ನಿರಂತರ ಹೋರಾಟ ನಡೆಸಿದ
ಸರ್ವ ಕಾಲಕ್ಕೂ ಜನ ಮಾನಸದಲ್ಲಿ
ಉಳಿಯುವ ಅಪ್ರತಿಮ ಕವಿಗಳೇ
ಮತ್ತೆ ಹುಟ್ಟಿ ಬನ್ನಿ ಓ ಮಲೆನಾಡ ಕೋಗಿಲೆಯೇ
||5||

ಎಂ. ಎಸ್. ಆಶಾಲತಾ,
ಶಾಖಾ ವ್ಯವಸ್ಥಾಪಕರು,
ಎಂ. ಡಿ. ಸಿ. ಸಿ. ಬ್ಯಾಂಕ್,
ಕೆ ಹೊನ್ನಲಗೆರೆ ಶಾಖೆ