ಹೊಸ ವರ್ಷಕ್ಕೆ ಹೊಸ ಸಂಕಲ್ಪ ಗಳಿರಲಿ…..

ಹಾರಾಡಬೇಕು ಮತ್ತೆ ಪುಟಿದೆದ್ದು
ದಣಿವಾರಿಸಿದ ರೆಕ್ಕೆಗಳ ಬಿಚ್ಚಿ
ಸಂತಸವೋ ,ಸಂತಾಪವೋ
ಸುಖವೋ , ದುಃಖವೋ
ಎಲ್ಲರ(ವು)ನ್ನೂ, ಮನದಾಳದಿಂದ ಮೆಚ್ಚಿ
ಹೊಸ ವರುಷಕ್ಕೆ, ಹೊಸ ಸಂಕಲ್ಪಗಳಿರಲಿ
ಸಂಕಲ್ಪಗಳು ಸಾಕಾರಗೊಳ್ಳಲು
ಭರವಸೆಯೊಂದಿರಲಿ
ಭರವಸೆಗಳು, ಕನಸಿನ ಕನ್ನಡಿಗಳಾಗಲಿ
ಕನ್ನಡಿಯಲಿ ಕಾಣುವ ನಿಮ್ಮ ಭವಿಷ್ಯ
ಹಸಿರಾಗಲಿ-ಹಸನಾಗಲಿ
ಕಹಿ ದಿನಗಳ ನೆನಪನ್ನು ಅಳಿಸಿ
ವಿಷಮ ಘಳಿಗೆಗಳಿಗೆ ವಿದಾಯ ಸಲ್ಲಿಸಿ
ಹಂಚುವುದಾರೆ ತುಸು ಪ್ರೀತಿ ಹಂಚಿ
ಹೊಸ ದಿನಗಳಿಗೆ ಹೊಸ ಬತ್ತಿ ಹೊಸೆದು
ಹೊಂಬೆಳಕು ಮೂಡಲು ,ದೀಪವನ್ನು ಹಚ್ಚಿ
ಅಂತಃಕರಣದಲಿ ಸ್ವಾರ್ಥ,
ಅಸೂಹೆಗಳನ್ನ ಹೊರದೂಡಿ
ನಂಬಿಕೆ ,ಸ್ನೇಹ ವಿಶ್ವಾಸಗಳಿಗೆ ಜಾಗ ನೀಡಿ
ಬದಲಾಯಿಸೋಣ, ಕ್ಯಾಲೆಂಡರಗಳನ್ನಲ್ಲ
ಬದಲಾಗಿ ನಮ್ಮೆಲ್ಲರ ಮನೋಭಾವಗಳನ್ನ
ಸಾಧನೆಗೆ ಅಡಿಗಲ್ಲಾಗಲಿ ಈ ದಿನ
ಸಾಗಲಿ ಇಂದಿನಿಂದ ಹೊಸ ಪಯಣ ,
ಬದುಕಾಗಲಿ ನಿತ್ಯವೂ ನೂತನ
ಬದುಕಾಗಲಿ ನಿತ್ಯವೂ ವಿನೂತನ

✍🏻 *ಅಮರೇಶ ಗೊರಚಿಕನವರ*
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ