ಮೊಳಕಾಲ್ಮುರು ತಾಲೂಕಿನಲ್ಲಿ ಜಿಲ್ಲಾಧಿಕಾರಿ ಯೊಂದಿಗೆ ಜನತಾ ದರ್ಶನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು.
ಮೊಳಕಾಲ್ಮುರು ಡಿಸೆಂಬರ್.31

ಮೊಳಕಾಲ್ಮುರು ಪಟ್ಟಣದ ನೂತನ ತಾಲೂಕಾ ಆಡಳಿತ ಸೌಧ ಆವರಣದಲ್ಲಿ ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸರ್ಕಾರವನ್ನೇ ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಡೀ ರಾಜ್ಯದಾದ್ಯಂತ ಜನತಾ ದರ್ಶನ ನಡೆಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಇಂದಿನ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಮೀನು ವಿಚಾರ, ರಸ್ತೆ ಸಮಸ್ಯೆ, ಮೂಲ ಸೌಕರ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಜನ ನನ್ನ ಗಮನಕ್ಕೆ ತಂದಿದ್ದಾರೆ. ಅವರ ನೋವುಗಳಿಗೆ ಖಂಡಿತವಾಗಿಯೂ ನಮ್ಮ ಸರ್ಕಾರ ಸ್ಪಂದಿಸಲಿದೆ. ಸಾವಿರಾರು ಜನರು ಇಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದು, ಅವರ ಸಮಸ್ಯೆಗಳಿಗೆ ಕಾಲ ಮಿತಿಯಲ್ಲಿ ಪರಿಹಾರ ನೀಡುವುದಾಗಿ ತಿಳಿಸಿದರು. ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭಾ ಇವರನ್ನು ಮಾನ್ಯ ಶಾಸಕರು ಕೊಂಡಾಡಿದರು ಇಂತಹ ಒಬ್ಬ ಮಹಿಳೆ ಜಿಲ್ಲಾಧಿಕಾರಿಯಾಗಿ ಜನ ಸಾಮಾನ್ಯರ ಮತ್ತು ಬಡ ಜನಗಳ ಸಹಾಯಕ್ಕಾಗಿ ನಿಂತ ಜಿಲ್ಲಾಧಿಕಾರಿ ಮಹಿಳೆ ಅಂದರೆ ರಾಜ್ಯದಲ್ಲಿ ಇವರೇ ಮೊದಲು ಎಂದು ನಾನು ತಿಳಿ ಹೇಳ ಪಡಿಸುತ್ತೇನೆ. ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಜನತಾದರ್ಶನದ ಸಭೆಯಲ್ಲಿ ಮಾತನಾಡಿದರು ಈ ಸಂದರ್ಭದಲ್ಲಿ ಮೊಳಕಾಲ್ಮೂರು ಪಟ್ಟಣದ ಖಾದರ್ ಸುಭಾನ್ ಸಾಬ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಕೆ ಕಲೀಮುಲ್ಲಾ ಈ ಪ್ರಕಾಶ್ ರಾಯರ ಪಾಪ ನಾಯಕ ಸುಲೇನಹಳ್ಳಿ ಮಾರನಾಯಕ ಸುಲೇನಹಳ್ಳಿ ಕೇಶವಮೂರ್ತಿ ಬೋಮ್ಮಲಿಂಗನಹಳ್ಳಿ ತಿಪ್ಪೇರುದ್ರ ಭಕ್ತ ಪ್ರಹ್ಲಾದ ಟಿ ಎಮ್ ಕೆ ಹಳ್ಳಿ ಬಿಜಿಕೆರೆ ಜಯಣ್ಣ ಹಾಗೂ ಕ್ಷೇತ್ರದ ಗ್ರಾಮಗಳಿಂದ ಬಂದಿರತಕ್ಕಂತ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಚುನಾಯಿತ ಜನ ಪ್ರತಿನಿಧಿಗಳು, ಮುಖಂಡರು, ಮೊದಲಾದವರು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು