ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ “ಪೌತಿ ಖಾತೆ” ಆಂದೋಲನ.
ಕೊಟ್ಟೂರು ಆ.28

ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ದಶಕಗಳ ಸಮಸ್ಯೆಯಾದ ಪೌತಿ, ಪೋಡಿ, ಪಿಂಚಣಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ರೈತರ ಸಮಸ್ಯೆಗಳನ್ನು ಪರಿಹಾರ ಮಾಡಲಾಗಿತ್ತು. ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಚಿಂತಿಸಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಸಮಸ್ಯೆಯಿರುವ ಪೌತಿ ಖಾತೆಗಳ ಸಮಸ್ಯೆಯನ್ನು ಇತ್ಯರ್ಥಪಡಿಸಲು ವಿಶೇಷ ಆಂದೋಲನ ಕೈಗೊಳ್ಳಲಾಗಿದೆ.ಕ್ಷೇತ್ರದಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಪೌತಿ ಖಾತೆಗಳು ಇರುವ ಬಗ್ಗೆ ಮಾಹಿತಿ ಇದೆ.ಪೌತಿ ಖಾತೆಯಿಂದ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿ ಪಡಿಸಲು ಸಾಲ ಸೌಲಭ್ಯಗಳನ್ನು ಪಡೆಯಲು, ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದಗ ಸರ್ಕಾರ ದಿಂದ ನೀಡಲಾಗುವ ವಿಮೆ/ಪರಿಹಾರಗಳನ್ನು ಪಡೆಯಲು, ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನವಾದಗ ಪರಿಹಾರ ಪಡೆಯಲು ಅರ್ಹವಾಗುವುದಿಲ್ಲ. ಇದರಿಂದ ಬಡ ರೈತರಿಗೆ ತುಂಬಾ ತೊಂದರೆ ಯಾಗುತ್ತದೆ. ಬಹುತೇಕ ಪೌತಿ ಖಾತೆಗಳು 2-3 ತಲೆಮಾರು ಗಳಿಂದ ದಾಖಲೆಗಳ ಕೊರತೆಯಿಂದ ಬಾಕಿ ಉಳಿದಿರುವ ಬಗ್ಗೆ ಮಾಹಿತಿಯಿದೆ.ಸರ್ಕಾರದ ಸುತ್ತೋಲೆ ಸಂಖ್ಯೆ : ಕಂ ಇ 33 ಟಿ ಆರ್ ಎಂ 2019 (ಇ) ದಿನಾಂಕ 17/10/2020 ರಂದು ಹಾಗೂ ಸರ್ಕಾರದ ಸುತ್ತೋಲೆ ಸಂಖ್ಯೆ : ಕಂ ಇ 33 ಟಿ ಆರ್ ಎಂ 2019 (ಇ) ದಿನಾಂಕ : 2019 (ಇ )10/01/2024 ಹೊರಡಿಸಲಾದ ಸುತ್ತೋಲೆಯಲ್ಲಿ ದಾಖಲೆಗಳ ಕೊರತೆಯಿದ್ದಾಗ ಪೌತಿ ಖಾತೆಗಳನ್ನು ಯಾವ ಮಾನದಂಡದಲ್ಲಿ ಕ್ರಮ ವಹಿಸಬೇಕು ಎಂಬುದರ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ.ಸದರಿ ಸುತ್ತೋಲೆಗಳ ಆಧಾರದ ಮೇಲೆ ಅಗತ್ಯ ಕ್ರಮ ವಹಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕೋರಲಾಗಿತ್ತು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪತ್ರ ಸಂಖ್ಯೆ ಸಂ/ಕಂ/ಆರ್.ಆರ್.ಟಿ/40/2024-25 ದಿನಾಂಕ 26.08.2024 ರಂತೆ ಪೌತಿ ಆಂದೋಲನ ಕೈಗೊಳ್ಳಲು ಎಲ್ಲ ತಹಶಿಲ್ದಾರವರಿಗೆ ಸೂಚನೆ ನೀಡಲಾಗಿದೆ.ನಮ್ಮ ವಿಧಾನ ಸಭಾ ಕ್ಷೇತ್ರವನ್ನು ಪೌತಿ ಖಾತೆ ಮುಕ್ತ ಕ್ಷೇತ್ರವನ್ನಾಗಿಸಲು ಸಂಕಲ್ಪ ಮಾಡಿದ್ದು, ನಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ ಗೌರವಾನ್ವಿತ “ರೈತ” ಬಾಂದವರು ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳಿಗೆ / ಗ್ರಾಮ ಸಹಾಯಕರಿಗೆ ತಮ್ಮ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಲು ಈ ಮೂಲಕ ರೈತರಲ್ಲಿ ಕೋರಲಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.