ಮುಸ್ಲಿಂ ಮಹಿಳೆಯರನ್ನು ಅಪಮಾನ ಮಾಡಿದ ಭಟ್ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೇ – ಲೋಕ ಸಮರದಲ್ಲಿ ತಕ್ಕ ಪಾಠ ಕಲಿಸ್ತೀವಿ.
ಹುನಗುಂದ ಜನೇವರಿ.6

ಮುಸ್ಲಿಂ ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿ,ವಿಚ್ಛೇದಿತ ಮಹಿಳೆರಿಗೆ ಕಳಂಕ ಹಚ್ಚುವ ಮತ್ತು ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಶುಕ್ರವಾರ ಅಂಜಮನ್ ಏ ಇಸ್ಲಾಂ ಟ್ರಸ್ಟ್ ಕಮೀಟಿ ಮತ್ತು ಮುಸ್ಲಿಂ ಸಮಾಜದ ವತಿಯಿಂದ ಶಾದಿಮಾಲ್‌ದಿಂದ ಪ್ರತಿಭಟನೆ ರ‍್ಯಾಲಿ ಮೂಲಕ ತಹಸೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮುಸ್ಲಿಂ ಯುನಿಟಿ ರಾಜ್ಯಾಧ್ಯಕ್ಷ ಜಬ್ಬಾರ ಕಲಬುರ್ಗಿ ಮಾತನಾಡಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಬಗ್ಗೆ ಬಹಿರಂಗ ಸಭೆಯಲ್ಲಿ ತುಚ್ಛವಾಗಿ ಮಾತನಾಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಅಪಮಾನ ಮಾಡಿದ್ದು.ಅವನ ಮೇಲೆ ರಾಜ್ಯಾಧ್ಯಂತ ೩೯ ಪ್ರಕರಣಗಳು ದಾಖಲಾಗಿದ್ದು.ಹುನಗುಂದದಲ್ಲಿ ಮತ್ತೇ ಎರಡು ಪ್ರಕರಣಗಳು ಸೇರಿ ೪೧ ಪ್ರಕರಣಗಳು ದಾಖಲಾದರೂ ಕೂಡಾ ಕರ್ನಾಟಕ ಸರ್ಕಾರ ಅವನನ್ನು ಬಂಧಿಸುತ್ತಿಲ್ಲ ಯಾಕೆ ? ೮೯ % ರಷ್ಟು ಮುಸ್ಲಿಂ ಸಮುದಾಯದ ಮತ ಪಡೆದು ರಾಜ್ಯದ ೧೩೫ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಪ್ರಮುಖ ಕಾರಣವಾದ ಮುಸ್ಲಿಂ ಸಮುದಾಯಕ್ಕೆ ಮತ್ತು ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾದಾಗ ಮೊದಲು ಬೀದಿಗೀಳಿದು ಕಾಂಗ್ರೆಸ್ ನಾಯಕರು ಹೋರಾಟ ಮಾಡಬೇಕಿತ್ತು ಆದರೇ ಒಬ್ಬನೇ ಒಬ್ಬರು ಕಾಂಗ್ರೆಸ್‌ಗರು ಮುಸ್ಲಿಂರ ಪರ ಧ್ವನಿ ಎತ್ತದೇ ಇರೋದು ಸಮುದಾಯಕ್ಕೆ ತೀವ್ರ ನೋವುಂಟಾಗಿದೆ.ಜಾತ್ಯಾತೀತ ಮನೋಭಾವದಿಂದ ಆಡಳಿತ ಮಾಡ್ತೀರಿ ಎನ್ನುವ ಉದ್ದೇಶದಿಂದ ಇಡೀ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಮತ ಹಾಕಿದ್ದೀವಿ ಅದನ್ನು ಮರೆತು ನೀವು ಕೂಡಾ ಹಿಂದುತ್ವದ ಕಡೆಗೆ ವಾಲುತ್ತಿದ್ದೀರಿ ಎನ್ನುವುದ್ದಕ್ಕೆ ಮಹಿಳೆಯರನ್ನು ಬಹಿರಂಗವಾಗಿ ಅವಮಾನಿಸಿದ ಪ್ರಭಾಕರ ಭಟ್ ಬಂಧಿಸಲು ಮೀನಾಮೇಷ ಎನ್ನುಸುತ್ತಿರೋದೇ ಇದಕ್ಕೆ ತಾಜಾ ಉದಾಹರಣೆಯಾಗಿದೆ.ಕಾಂಗ್ರೆಸ್ ನಾಯಕರೇ ಬರುವ ಲೋಕಸಭೆ ಚುನಾವಣೆಯಲ್ಲಿ ನೀವು ನಮ್ಮ ಬಳಿ ಮತ ಭೀಕ್ಷೆ ಬೇಡಲು ಬರುತ್ತೀರಿ ಅವಾಗ ನಿಮಗೆ ತಕ್ಕ ಪಾಠ ಕಲಿಸ್ತೀವಿ.ಮುಸ್ಲಿಂ ಮಹಿಳೆಯರನ್ನು ಅಪಮಾನ ಮಾಡಿದ ಪ್ರಭಾಕರ್ ಭಟನ್ನು ಶೀಘ್ರವೇ ಬಂಧಿಸಿದೇ ಹೋದರೇ ಅದರ ದೊಡ್ಡ ಪೆಟ್ಟನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಅನುಭವಿಸಲಿದೆ ಎಂದು ಕಾಂಗ್ರೇಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು.ಸಮಾಜದ ಪ್ರತಿಯೊಬ್ಬರು ಸಮಾಜದ ಮುಖಂಡರು,ನಾಯಕರು ನಿರ್ದೇಶನ ನೀಡುವವರೆಗೂ ಯಾವ ಪಕ್ಷದ ಧ್ವಜವನ್ನು ಹಿಡಿಯಬೇಡಿ ಎಂದು ಸಮಾಜಕ್ಕೆ ಕಿವಿ ಮಾತು ಹೇಳಿದರು.ರಮಜಾನ್ ಕಡಿವಾಲ ಮಾತನಾಡಿ ಶ್ರೀರಂಗ ಪಟ್ಟಣದಲ್ಲಿ ಹಿಂದು ಜಾಗರಣಾ ವೇದಿಕೆಯ ಬಹಿರಂಗ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರು ಮೊದಲು ದಿನಕ್ಕೊಬ್ಬ ಗಂಡ ಇರತ್ತೀದ್ದರು ಮೋದಿಯಿಂದ ಪರ್ಮನೆಂಟ್ ಗಂಡ ಸಿಕ್ಕಿದ್ದಾನೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಮಹಿಳೆಯರನ್ನು ಅಪಮಾನ ಪಡಿಸಿದ ವ್ಯಕ್ತಿಯನ್ನು ಯಾಕೆ ಬಂಧಿಸುತ್ತಿಲ್ಲ.ಅಧಿಕಾರ ಶಾಶ್ವತವಲ್ಲ ಅಧಿಕಾರಕ್ಕೇರಿಸಿದ ಜನರ ಕಷ್ಟ ಸುಖ ಆಲಿಸುವುದು ಮುಖ್ಯ.ನಂಬಿದ ಸಮುದಾಯಕ್ಕೆ ಅನ್ಯಾಯ ಮಾಡಿದರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು.ತಕ್ಷಣವೇ ಪ್ರಭಾಕರ್ ಭಟ್ ಬಂಧಿಸಬೇಕೆಂದು ಒತ್ತಾಯಿಸಿದರು.ಇಮ್ತಾಜ್ ಖತ್ಬ್ ಮತ್ತು ಮುಸ್ಲಿಂ ಮಹಿಳೆಯರು ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸುವಂತೆ ಒತ್ತಾಯಿಸಿ ಮಾತನಾಡಿದರು. ಅಂಜಮನ್ ಏ ಇಸ್ಲಾಂ ಟ್ರಸ್ಟ್ ಕಮೀಟಿ ಅಧ್ಯಕ್ಷ ಪರವೇಜ್ ಖಾಜಿ,ಹರ್ಷದ್ ನಾಯಕ,ಮಹಮ್ಮದ್ ಖಾಜಿ,ಶಬ್ಬೀರ ಮೌಲ್ವಿ,ಇಸ್ಮಾಯಿಲ್ ನಾಯಕ,ರಮಜಾನ್ ನದಾಫ,ನಬಿ ವಾಲೀಕಾರ,ರಿಯಾಜ್ ಸರಕಾವಸ್,ಮಹಿಬೂಬಲಿ ಖಾಜಿ,ಶಮೀಮ್ ಖಾಜಿ,ಜೈನಬಿ ಬನ್ನು,ಶಮಶಾದ ಅತ್ತಾರ,ಫರ್ಜಾನಾ ಖಾಜಿ,ಆರಾಯಿಕ್ ಮೌಲ್ವಿ,ಕೌಸರ್ ಮುಲ್ಲಾ,ಅಲಮಾಸ್ ನಾಯಕ,ಮುಭೀನ ಕಂದಗಲ್ಲ,ಅರಬಾನಾ ಖಾಜಿ,ನಾಜನೀನ ಖಾಜಿ ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ