ಪ್ರತಿ ಬಾರಿ ಜನತಾ ದರ್ಶನ ಸಭೆಯಲ್ಲಿ ನಿರಸ ಪ್ರತಿಕ್ರಿಯೆ – ಬೆರಳೆಣಿಕೆಯಷ್ಟು ಅರ್ಜಿ ಸಲ್ಲಿಸಿಕ್ಕೆ.
ಹುನಗುಂದ ಜನೇವರಿ.7

ಪ್ರತಿ ತಿಂಗಳು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾ ಭವನದಲ್ಲಿ ನಡೆಯುವ ಜನತಾ ದರ್ಶನ ಸಭೆಯು ನಿರಸ ಪ್ರತಿಕ್ರಿಯೆ ಯಿಂದ ಕೂಡಿರುತ್ತದೆ ಯಾಕೆ? ಸಾರ್ವಜನಿಕ ವಲಯದಲ್ಲಿ ಸಮಸ್ಯೆನೇ ಇಲ್ಲವೋ ಇಲ್ಲಾ ಜನತಾ ದರ್ಶನ ಸಭೆಯಲ್ಲಿ ಕೊಟ್ಟ ಸಮಸ್ಯೆಯ ಅರ್ಜಿಗಳಿಗೆ ಪರಿಹಾರ ಸಿಗುತ್ತಿಲ್ಲವೋ ಇಲ್ಲಾ ಸಮಸ್ಯೆಯನ್ನು ಪರಿ ಹರಿಸುವ ಅಧಿಕಾರಿಗಳ ಮೇಲಿನ ನಂಬಿಕೆನೇ ಸಾರ್ವಜನಿಕರು ಕಳಿದು ಕೊಂಡರೋ ಎನೋ ಗೊತ್ತಿಲ್ಲಾ ಸರ್ಕಾರದ ಮಹತ್ವ ಪೂರ್ಣ ಜನತಾ ದರ್ಶನ ಸಭೆಗೆ ಮಾತ್ರ ಜನರೇ ಬರುತ್ತಿಲ್ಲ ಸಮಸ್ಯೆನೇ ತರುತ್ತಿಲ್ಲ ಪ್ರತಿ ಬಾರಿ ನಿರಸ ಪ್ರತಿಕ್ರಿಯೆ ಯಿಂದ ಕೂಡಿರುತ್ತದೆ.ಶನಿವಾರ ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಶಿರಸ್ತೇದಾರ್ ಎಸ್.ಎಸ್. ಮುಂಡೇವಾಡಿ ಅವರ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಸಭೆಗೆ ಕೂಡಾ ಸಾರ್ವಜನಿಕರಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು.ಬೆಳಿಗ್ಗೆ ೧೧-೩೦ ಗಂಟೆಗೆ ನಡೆದ ಜನತಾ ದರ್ಶನ ಸಭೆಯಲ್ಲಿ ಒಟ್ಟು ಆರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ನಾಲ್ಕು ಪುರಸಭೆ ಹಾಗೂ ಇನ್ನುಳಿದ ಎರಡು ಸಾರಿಗೆ ಇಲಾಖೆಗೆ ಸಂಬಂಧಿಸಿದ್ದಾಗಿದೆ.ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಾರ್ವಜನಿಕರು ಪಟ್ಟಣ ರಸ್ತೆ, ಚರಂಡಿ, ಬೀದಿ ದೀಪ, ಶೌಚಾಲಯಗಳ ದುರಸ್ಥಿ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ ಮಾತನಾಡಿ, ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದ ಸಾರ್ವಜನಿಕರು ಅರ್ಜಿಗಳನ್ನು ಹಂತ ಹಂತವಾಗಿ ಬಗೆ ಹರಿಸಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.ಜನತಾ ದರ್ಶನ ಸಭೆಯನ್ನು ಆಯೋಜಿಸಿದ್ಧ ಪುರಸಭೆ ಸಭಾ ಭವನದಲ್ಲಿ ಸೂಕ್ತ ಆಸನದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಕೆಲ ಸಮಯ ಪರದಾಡಿದ ಘಟನೆ ನಡೆಯಿತು.ಸ್ಥಳೀಯ ನಿವಾಸಿಗಳಾದ ಜಿ.ಬಿ.ಕಂಬಾಳಿಮಠ, ಸಂಗಣ್ಣ ಅವಾರಿ, ಬಸವರಾಜ ಕಮ್ಮಾರ ಮಾತನಾಡಿ, ಪಟ್ಟಣದಲ್ಲಿ ಸಂತೆ ನಡೆಯುವ ಪ್ರತಿ ಶನಿವಾರ ರಸ್ತೆ ಬದಿಯಲ್ಲಿ ಹಾಗೂ ಕಾಯಿಪಲ್ಲೆ ಮಾರುಕಟ್ಟೆಯ ಪ್ರದೇಶ ಜನ ಸಂದಣಿಯಿಂದ ಕೂಡಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಮಾರುಕಟ್ಟೆ ಆವರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾರುಕಟ್ಟೆ ಆವರಣದಲ್ಲಿ ಕಾಯಿಪಲ್ಲೆ ಮಾರಾಟ ಮಾಡಲು ಕಟ್ಟೆಗಳನ್ನು ನಿರ್ಮಿಸಿದ್ದರೂ ಬಹುತೇಕ ಕಟ್ಟೆಗಳನ್ನು ವ್ಯಾಪರಸ್ಥರು ಬಳಕೆ ಮಾಡುತ್ತಿಲ್ಲ ಹೀಗಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರು ತೊಂದರೆ ಯಾಗುತ್ತಿದೆ. ಹೀಗಾಗಿ ಶೀಘ್ರವಾಗಿ ರಸ್ತೆ ಬದಿ ಕಾಯಿಪಲ್ಲೆ ವ್ಯಾಪಾರಿಗಳನ್ನು ತರೆವು ಗೊಳಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿ ಕೊಡಬೇಕು ಜೊತಗೆ ಪಟ್ಟಣದ ಬಸ್ ಘಟಕದಲ್ಲಿ ಬಹುತೇಕ ಹಳೆಯ ಬಸ್ ಗಳ ಸಂಚರಿಸುತ್ತಿದ್ದು, ಇವುಗಳ ಬದಲಿ ಹೊಸ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.ಎಂ.ಎಸ್. ಕಳ್ಳಿಗುಡ್ಡ, ಎಚ್.ಎಂ.ಶಿವಣಗಿ, ಜಿ.ಎನ್.ಖ್ಯಾಡ, ಶಾಂತಪ್ಪ ಹೊಸಮನಿ, ನಾಗರಾಜ ಹೊಸೂರು, ನಿಂಗರಾಜ ಹುನಗುಂಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ