ಶಿಷ್ಯರು ಗುರುಗಳನ್ನ ಗೌರವಿಸಿದಾಗ ಮಾತ್ರ ಯಶಸ್ಸು ಸಾಧ್ಯ – ಜಿ.ಎಸ್. ಪಾಟೀಲ.

ರೋಣ ಸ.06
ಶಿಷ್ಯರು ಗುರುಗಳನ್ನ ಗೌರವಿಸಿದರೆ ಸಮಾಜ ನಮ್ಮನು ಗೌರವಿಸುತ್ತದೆ, ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಅಂದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ.ವಿದ್ಯಾರ್ಥಿಗಳು ಬದುಕು ರೂಪಿಸಿ ಕೊಳ್ಳಲು ಶಿಕ್ಷಕರ ಪಾತ್ರ ಮುಖ್ಯವಾಗಿದೆ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ತಂದೆ ತಾಯಿಗಳ ಆಶೆಗಳನ್ನು ಈಡೆರಿಸಬೇಕು ಎಂದು ಹೇಳಿದರು.ನಗರದ ಗುರು ಭವನದಲ್ಲಿ ಜಿ ಪಂ. ಶಾಲಾ ಶಿಕ್ಷಣ ಇಲಾಖೆ ತಾ ಪಂ. ರೋಣ ಗಜೇಂದ್ರಗಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ. ಜಯಂತೋತ್ಸವ ಕಾರ್ಯಕ್ರಮ ಮತ್ತು ಶಿಕ್ಷಕರ ದಿನಾಚರಣೆ. ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಜರುಗಿಸಲಾಯಿತು.20. ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸುತ್ತಿರುವ ಗುರು ಭವನದ ಮೊದಲನೆಯ ಮಹಡಿಯ ಕಟ್ಟಡ ಕಾಮಗಾರಿಗೆ ಶಾಸಕ ಜಿ.ಎಸ್ ಪಾಟೀಲ ಚಾಲನೆ ನೀಡಿದರು.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರಿಗೆ ಬ್ಯಾಗ ವಿತರಣೆ ಮಾಡಿದ್ದರು. ಸಿ.ಬಿ.ಎಸ್.ಸಿ ಚಂದನ ಶಾಲೆಯ ಸಂಸ್ಥಾಪಕ ಟಿ.ಈಶ್ವರ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಶಿಕ್ಷಕರು ಮಾದರಿ ಯಾಗಬೇಕು. ಪಾಲಕರ ಪೊಷಕರ ಬೇಜವಾಬ್ದಾರಿ ಯಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಮಕ್ಕಳ ಹೃದಯ ತುಂಬುವ ಸಾಮರ್ಥ್ಯ ಇರುವುದು ಶಿಕ್ಷಕರಲ್ಲಿ ಇದೆ. ಪ್ರತಿಯೋಬ್ಬ ಶಿಕ್ಷಕರು ಉತ್ತಮ ಶಿಕ್ಷಕರಾಗಿ ಹೊರ ಹೊಮ್ಮಬೇಕು.ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದಾಗ ಮಾತ್ರ ಶಿಕ್ಷಕ ವೃತ್ತಿಗೆ ಸಾರ್ಥಕ. ಮಕ್ಕಳು ಈ ದೇಶದ ಭದ್ರ ಬುನಾದಿ ಹಾಕುವ ಕಾರ್ಯ ಮಾಡಬೇಕು.ದೇಶದ ಬೆನ್ನೆಲುಬು ರೈತನಾದರೆ ಸಮಾಜದ ಬೆನ್ನೆಲುಬು ಶಿಕ್ಷಕರು ಎಂದು ಉಪನ್ಯಾಸಕ ನೀಡಿದರು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಬಿ.ಇ.ಓ ರುದ್ರಪ್ಪ ಹುರಳಿ. ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ. ಗಜೇಂದ್ರಗಡ ತಾ.ಪಂ ಇ.ಓ ಬಸವರಾಜ ಬಡಿಗೇರ್. ಆರ್. ಎಲ್. ನಾಯ್ಕರ. ಎಂ.ಎ. ಫಣಿಬಂದ. ವಿ.ಆರ್. ಗುಡಿಸಾಗರ. ಪ್ರಭು ಮೇಟಿ. ಪರಶುರಾಮ ಅಳಗವಾಡಿ. ಇಸೂಪ್ ಇಟಗಿ. ಹನುಮಂತಪ್ಪ ದೊಡ್ಡಮನಿ. ಬಸವರಾಜ ನವಲಗುಂದ. ಮಂಜುಳಾ ಹುಲ್ಲಣ್ಣನವರ. ಮಂಜುಳಾ ರೇವಡಿ. ನಾಜ್ ಬೇಗಂ ಯಲಿಗಾರ. ಪ್ರಶಾಂತ್ ರಾಠೋಡ ವಾಯ್.ಡಿ ಗಾಣಿಗೇರ್. ವಿ.ಎ ಹಾದಿಮನಿ. ಮಹೇಶ್ ಕುರಿ. ಬಿ.ಎನ್. ಖ್ಯಾತನಗೌಡ. ಎಸ್. ಜಿ .ದಾನಪ್ಪಗೌಡರ.ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ