ಜಾತಿ ಭಯೋತ್ಪಾದನೆ ಮಾಡುತ್ತಿದ್ದಾರೆ – ಪ್ರೊ. ಹರಿರಾಮ್.
ತರೀಕೆರೆ ಜನೇವರಿ.9
ತಾಲೂಕಿನ ಗೆರಮರಡಿ ಗ್ರಾಮದಲ್ಲಿ ದಲಿತ ಮಾರುತಿ ರವರನ್ನು ಹಲ್ಲೆ ಮಾಡಿದ ಗೊಲ್ಲ ಸಮುದಾಯದ ಜನರು ರಾಜ್ಯಾದ್ಯಂತ ಜಾತಿ ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ಮುಖಂಡರಾದ ಪ್ರೊ. ಹರಿರಾಮ್ ರವರು ಇಂದು ಪಟ್ಟಣದ ಹೋಟೆಲ್ ಅರಮನೆ ಆವರಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಪೋಲಿಸಿನವರು ಈ ಕೇಸಿನ ಸಂಬಂಧ 15 ಜನರ ಮೇಲೆ ಎಫ್ಐಆರ್ ದಾಖಲು ಮಾಡಿದ್ದು ಕೇವಲ ನಾಲ್ಕು ಜನರನ್ನು ಮಾತ್ರ ಬಂಧಿಸಿ ಅಸ್ಪೃಶ್ಯತೆ ಆಚರಿಸಲು ಪ್ರೋತ್ಸಾಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಂವಿಧಾನದ ಕಲಂ 17 ರಂತೆ ಭಾರತ ದೇಶದಲ್ಲಿ ಅಸ್ಪೃಶ್ಯತೆ ನಿಷೇಧಿಸಲಾಗಿದೆ ಎಂಬ ಸತ್ಯವನ್ನು ಅರಿಯ ಬೇಕಾಗಿದೆ ಎಂದರು. ಭಾಸ್ಕರ್ ಪ್ರಸಾದ್ ಮಾತನಾಡಿ ಪೊಲೀಸ್ನವರು ಎಫ್ ಐ ಆರ್ ದಾಖಲಿಸಿದ ತಕ್ಷಣವೇ ಸಮಾಜ ಕಲ್ಯಾಣ ಇಲಾಖೆಯವರು ನೊಂದವರಿಗೆ ಪರಿಹಾರ ಕೊಡಬೇಕು ಆದರೆ ಇದುವರೆಗೂ ಕೊಟ್ಟಿಲ್ಲ. ತಹಸಿಲ್ದಾರ್ ರವರು ತಾಲೂಕಾ ದಂಡಾಧಿಕಾರಗಳಾಗಿದ್ದು ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಮಾಡಿಲ್ಲ ಎಂದು ದೂರಿದರು. ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು ಇಲ್ಲವಾದರೆ ಪೊಲೀಸ್ ಇಲಾಖೆ ಮತ್ತು ಎಸ್ಪಿ ರವರು ಹೊಣೆಗಾರರಾಗುತ್ತಾರೆ. ನಾವು ಕಾನೂನು ಹೋರಾಟಕ್ಕೂ ಸಿದ್ಧ ಬೀದಿ ಹೋರಾಟಕ್ಕೂ ಸಿದ್ಧವಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಕೋದಂಡರಾಮ ಮಾತನಾಡಿ ಅಧಿಕಾರಿಗಳು ಈ ಸಂಘಟನೆಯು ಬಗ್ಗೆ ಸೂಕ್ತ ಕ್ರಮ ತೆಗೆದು ಕೊಳ್ಳದಿದ್ದರೆ ಅಂತಹ ಅಧಿಕಾರಿಗಳ ಮೇಲೆ ದಾಖಲಿಸಬಹುದಾಗಿದೆ ದಲಿತ ಸಂಘಟನೆಗಳ ಸ್ವಾಭಿಮಾನ ಒಕ್ಕೂಟ ಎಚ್ಚರಿಕೆಯನ್ನು ಕೊಡುತ್ತಿದೆ ಏಕೆಂದರೆ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆಗ್ರಹಿಸಿದರು. ಕರಿಯಪ್ಪ ಗುಡಿಮನಿ ರವರು ಮಾತನಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಶಾಸಕರು ಸಚಿವರನ್ನು ಶೋಷಿತ ದಲಿತ ಹಿಂದುಳಿದ ಜನರಿಂದ ಆಯ್ಕೆ ಮಾಡಲಾಗಿದೆ ಸರ್ಕಾರ ಗಂಭೀರವಾಗಿ ಈ ಪ್ರಕರಣವನ್ನು ಪರಿಗಣಿಸಿ, ರಾಜ್ಯಾದ್ಯಂತ ಗೊಲ್ಲ ಸಮುದಾಯದವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಶೂದ್ರ ಶ್ರೀನಿವಾಸ್, ಶಂಕರ್ ರಾಮಲಿಂಗಯ್ಯ, ಕೆಸಿ ನಾಗರಾಜ್, ಟೈಗರ್ ಅರುಣ್, ಕೆ ಚಂದ್ರಪ್ಪ ಮಾತನಾಡಿದರು. ಹಾಗೂ ಪತ್ರಿಕಾ ಘೋಷರಲ್ಲಿ ಚಳುವಳಿಕೆ ಅಯ್ಯಪ್ಪ, ದಲಿತ್ ರಮೇಶ್, ಕರ್ಣನ್, ಡಾ. ಶಿವಪ್ರಸಾದ್, ಓಂಕಾರಪ್ಪ, ಪ್ರಮೋದ್, ಸುನಿಲ್, ಬಾಲರಾಜು, ಮಂಜುನಾಥ್, ಸ್ವಾಮಿ, ಆರ್ ಆರ್ ಕೃಷ್ಣ, ಮುಂತಾದವರು ಉಪಸ್ಥಿತರಿದ್ದು, ಪತ್ರಿಕಾ ಗೋಷ್ಠಿ ಮುಗಿದ ನಂತರ ತಾಲೂಕು ಆಡಳಿತ ಸೌಧದಲ್ಲಿ ನಡೆದ ಸಭೆಯಲ್ಲಿ ಮೂರು ದಿನಗಳೊಳಗೆ ಉಳಿದ 11 ಜನ ಆರೋಪಿಗಳನ್ನು ಬಂಧಿಸದಿದ್ದಲ್ಲಿ ತರೀಕೆರೆ ಚಲೋ ಕಾರ್ಯಕ್ರಮವನ್ನು ಮಾಡುವುದಾಗಿ ತಿಳಿಸಿದರು. ಈ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ. ಕೆ ಜೆ ಕಾಂತರಾಜ್, ಹೆಚ್ಚುವರಿ ಪೊಲೀಸು ಅಧೀಕ್ಷಕರಾದ ಕೃಷ್ಣಮೂರ್ತಿ, ತರೀಕೆರೆ ಪೋಲಿಸು ಉಪ ಅಧೀಕ್ಷಕರಾದ ಹಾಲುಮೂರ್ತಿ ರಾವ್, ತಹಸಿಲ್ದಾರ್ ರಾಜೀವ, ಪೊಲೀಸು ನಿರೀಕ್ಷಕರಾದ ವೀರೇಂದ್ರ, ಹಾಗೂ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಂದಾಯ ಅಧಿಕಾರಿಗಳು ಪೊಲೀಸು ಅಧಿಕಾರಿಗಳೊಂದಿಗೆ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಗೆರಮರಡಿ ಗ್ರಾಮದ ಗೊಲ್ಲರ ಹಟ್ಟಿಯಲ್ಲಿನ ದೇವಸ್ಥಾನ ಪ್ರವೇಶ ಮಾಡಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ